ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಸ್ಮಯ: 34 ಬಾರಿ ಹಾವು ಕಚ್ಚಿದರೂ ಬದುಕುಳಿದ 18ರ ಮನೀಷಾ!

ಹಿಮಾಚಲ ಪ್ರದೇಶದ 18ರ ತರುಣಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಏನೂ ಆಗದೆ ಆರಾಮವಾಗಿದ್ದಾಳೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.

ಹಿಮಾಚಲ ಪ್ರದೇಶದ 18ರ ತರುಣಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಏನೂ ಆಗದೆ ಆರಾಮವಾಗಿದ್ದಾಳೆ.[ ಹಾವಿನ ಜತೆ ಫೋಟೋ ಹಾಕಿದ ಟಿವಿ ನಟಿಯ ಬಂಧನ!]

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಅಂತ ಹೇಳುತ್ತಾರೆ.

 Himachal Pradesh Girl survives even after 34 snakebites in 3 years

"ಕಳೆದ ಮೂರು ವರ್ಷಗಳ ಅಂತರದಲ್ಲಿ30ಕ್ಕೂ ಹೆಚ್ಚು ಬಾರಿ ನನಗೆ ಹಾವು ಕಚ್ಚಿದೆ. ನಾನು ಹಾವು ಕಂಡ ತಕ್ಷಣ ಅದರ ಜತೆ ಆಟವಾಡಲು ಆರಂಭಿಸುತ್ತೇನೆ. ತಕ್ಷಣ ಹಾವು ನನಗೆ ಕಚ್ಚುತ್ತದೆ. ನಾನು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಹಲವು ಹಾವುಗಳು ನನಗೆ ಕಚ್ಚಿವೆ. ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಬಾರಿ ಹಾವುಗಳೂ ಕಚ್ಚಿದ್ದಿದೆ. ಜ್ಯೋತಿಷಿಗಳು ನನಗೆ ದೇವರ ಜತೆ ಸಂಬಂಧ ಇದೆ ಎನ್ನುತ್ತಾರೆ," ಎಂದು ಹೇಳುತ್ತಾಳೆ ಯುವತಿ.[ಹಾವಿಗೆ ಕಿಸ್ ನೀಡಲು ಹೋಗಿ ಸಾವು ತಂದುಕೊಂಡ]

ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲೆಗಳ ಪ್ರಕಾರ ಇದೇ ಫೆಬ್ರವರಿ 18ಕ್ಕೆ ಆಕೆ 34ನೇ ಬಾರಿ ಹಾವಿನಿಂದ ಕಚ್ಚಿಸಕೊಂಡಿದ್ದಾಳೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಇದಕ್ಕೆ ವೈದ್ಯರು ಹೇಳುವುದೇ ಬೇರೆ. ಹಲವು ಬಾರಿ ವಿಷವಿಲ್ಲದ ಹಾವುಗಳು ಆಕೆಗೆ ಕಚ್ಚಿವೆ. ಕೆಲವೊಮ್ಮೆ ವಿಷ ಕಡಿಮೆ ಇರುವ ಹಾವುಗಳು ಕಚ್ಚಿದ್ದರಿಂದ ಯುವತಿಗೆ ಏನೂ ಆಗಿಲ್ಲ ಎಂದು ವೈದ್ಯರು ಮಾಹಿತಿ ನೀಡುತ್ತಾರೆ.

ಇನ್ನು ಕೆಲವರು ನಿರಂತರವಾಗಿ ಹಾವು ಕಚ್ಚುತ್ತಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಉತ್ಪತ್ತಿಯಾಗಿ ಮುಂದಿನ ಬಾರಿ ಕಚ್ಚಿದಾಗ ಏನೂ ಆಗದಂತೆ ತಡೆಯುತ್ತದೆ. ಇದರಿಂದ ಆಕೆಗೆ ಏನೂ ಆಗುತ್ತಿಲ್ಲ ಎನ್ನುತ್ತಿದ್ದಾರೆ.

ಒಟ್ಟಾರೆ ಯುವತಿ ಮಾತ್ರ ಇನ್ನೂ ಬದುಕಿದ್ದಾಳೆ. ವೈದ್ಯಕೀಯ ದಾಖಲೆಗಳ ಪ್ರಕಾರ ಆಕೆಗೆ 34 ಬಾರಿ ಹಾವು ಕಚ್ಚಿದ್ದಂತೂ ನೂರಕ್ಕೆ ನೂರು ಸತ್ಯ.

(ಚಿತ್ರ ಕೃಪೆ: ಶಟರ್ ಸ್ಟಾಕ್)

English summary
In an unusual case a girl from Himachal Pradesh survived even after 34 snakebites in last 3 years. However, the doctors have claimed that most of the bites have been by non-poisonous snakes or snakes with less venom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X