ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸ್ಟಾರ್ಟ್ ಅಪ್ ರಾಜಧಾನಿ ಆಗಲಿದೆ: ಮೋದಿ

By Mahesh
|
Google Oneindia Kannada News

ಬೆಂಗಳೂರು, ಡಿ. 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಆಕಾಶವಾಣಿ ಕಾರ್ಯಕ್ರಮದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬಗ್ಗೆ ಮಾತನಾಡಿ, ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಭಾರತವನ್ನು ಬೆಳಸಬೇಕಿದೆ ಎಂದರು.ಈ ಬಗ್ಗೆ ಹೊಸ ಯೋಜನೆಯನ್ನು ಜನವರಿ 16ರಂದು ಘೋಷಿಸುವುದಾಗಿ ಹೇಳಿದರು.

ಪ್ರಧಾನಿ ಅವರು ತಮ್ಮ 15ನೇ ಮನದ ಮಾತು ಕಾರ್ಯಕ್ರಮದಲ್ಲಿ ಮೊದಲಿಗೆ ಸಮಸ್ತ ನಾಗರಿಕರಿಗೆ ಕ್ರಿಸ್ ಮಸ್ ಹಾಗೂ ಹೊಸ್ ವರ್ಷಾಚರಣೆಯ ಶುಭ ಹಾರೈಕೆ ಸಲ್ಲಿಸಿದರು.

Highlights of PM Modi's last Mann Ki Baat address of 2015

ನಂತರ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆ, ಗ್ರಾಮಗಳ ನೈರ್ಮಲೀಕರಣ, ವಿದ್ಯುತೀಕರಣ, ನರೇಂದ್ರ ಮೋದಿ ಅಪ್ಲಿಕೇಷನ್, ರಾಷ್ಟ್ರೀಯ ಯುವ ದಿನ, ವಿಕಲಾಂಗರನ್ನು ಯಾವ ಹೆಸರಿನಲ್ಲಿ ಕರೆಯಬೇಕು? ಪಹಲ್ ಯೋಜನೆ ಗಿನ್ನಿಸ್ ದಾಖಲೆ ಬಗ್ಗೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.

ಸ್ಟಾರ್ಟ್ ಅಪ್ ಇಂಡಿಯಾ: ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಯೋಜನೆ ಬಗ್ಗೆ ಜನವತರಿ 16ರಂದು ಪ್ರಕಟಣೆ ಹೊರಡಿಸಲಾಗುತ್ತದೆ.

ವಿಶ್ವದ ಸ್ಟಾರ್ಟ್ ಅಪ್ ಕಂಪನಿಗಳ ರಾಜಧಾನಿಯಾಗಿ ಭಾರತವನ್ನು ರೂಪಿಸುವತ್ತ ನಾವು ಹೆಜ್ಜೆ ಹಾಕಬೇಕಿದೆ. ದೇಶದ ಐಐಟಿ, ಐಐಎಂ ಇನ್ನಿತರ ವಿದ್ಯಾಸಂಸ್ಥೆಗಳ ಜೊತೆ ನೇರ ಸಂಪರ್ಕ ಒದಗಿಸಲಾಗುವುದು ಎಂದರು. 15ನೇಮನ್ ಕಿ ಬಾತ್ ಕಾರ್ಯಕ್ರಮದ ವಿಡಿಯೋ:

* ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಉತ್ತಮ ಚರ್ಚೆಯೊಂದಿಗೆ ಸಂಸತ್ತಿನಲ್ಲಿ ಆವರಿಸಲಾಗುವುದು.
* ದೇಶದ ನೂರಾರು ಕೋಟಿ ಮಂದಿ ತಮ್ಮ ಕರ್ತವ್ಯವನ್ನು ನಿಭಾಯಿಸುವ ಅವಶ್ಯಕತೆ ಇದೆ. ಜನವರಿ 26ರಂದು ಈ ಬಗ್ಗೆ ಶಾಲೆಗಳಲ್ಲಿ ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಲಿದೆ.
* ಎಲ್ ಪಿಜಿ ಸಬ್ಸಿಡಿ ಹಿಂತಿರುಗಿಸುವ ಕ್ರಿಯೆ, ಪಹಲ್ ಯೋಜನೆ ಮೂಲಕ 15ಕೋಟಿ ಜನರಿಗೆ ಉಪಯೋಗವಾಗಿದೆ.
* ಎಂನರೇಗಾ ಯೋಜನೆ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಸೇರಲಿದೆ. ಒಟ್ಟಾರೆ 40,000 ಕೋಟಿ ಮೊತ್ತ ನೇರವಾಗಿ ಬ್ಯಾಂಕ್ ಸೇರುತ್ತಿದ್ದು ಹೊಸ ದಾಖಲೆಯಾಗಿದೆ.
* ವಿಕಲಾಂಗರು ಎನ್ನಬೇಡಿ ಅವರನ್ನು ದಿವ್ಯಾಂಗರು ಎಂದು ಕರೆಯಿರಿ. ವಿಶೇಷ ಚೇತನವುಳ್ಳ ಇವರನ್ನು ಎಲ್ಲರಂತೆ ಕಾಣಬೇಕಿದೆ. ತಂತ್ರಜ್ಞಾನದ ನೆರವಿನಿಂದ ಇವರು ಕೂಡಾ ನೆಮ್ಮದಿಯ ಬದುಕು ಕಾಣಬಹುದಾಗಿದೆ.
* ಈ ಬಾರಿಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮದಿನ)ಜನವರಿ 12ರಂದು ಆಚರಣೆಗೂ ಮುನ್ನ ನಿಮ್ಮ ಸಲಹೆ ಸೂಚನೆಯನ್ನು ನಾನು ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ಪಡೆಯಲು ಬಯಸಿದ್ದೇನೆ.
* ಗ್ರಾಮಗಳಲ್ಲಿನ ಶೌಚಾಲಯ ನೈರ್ಮಲೀಕರಣದಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ದಿಲಿಪ್ ಸಿಂಗ್ ಮಾಳವೀಯ ಅವರನ್ನು ಅಭಿನಂದಿಸುತ್ತೇನೆ. ಪ್ರವಾಸಿ ತಾಣಗಳು, ಹಳ್ಳಿಗಳಲ್ಲಿನ ಸ್ವಚ್ಛತೆಗಾಗಿ ನಾವು ಶ್ರಮಿಸಬೇಕಿದೆ. 'ಅತಿಥಿ ದೇವೋ ಭವ' ಉಕ್ತಿಯನ್ನು ಸಾಕಾರಗೊಳಿಸಬೇಕಿದೆ.

* ಹಬ್ಬದ ಆಚರಣೆ ಜೊತೆಗೆ ಆರ್ಥಿಕ ಪ್ರಗತಿ, ಉದ್ಯೋಗಕ್ಕೂ ಹೊಸ ವರ್ಷ ಹೊಸ ಅವಕಾಶಗಳನ್ನು ತರಲಿ ಎಂದು ಆಶಿಸುತ್ತೇನೆ.


(ಒನ್ ಇಂಡಿಯಾ ಸುದ್ದಿ)

English summary
Prime Minister Narendra Modi on Sunday addressed the nation for the final time in 2015 through his radio programme Mann Ki Baat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X