ಮುಂಬೈನ ಆರೆಯ್ ಕಾಲೋನಿ ಬಳಿ ಹೆಲಿಕಾಪ್ಟರ್ ಪತನ

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್. 11 : ಮುಂಬೈನ ಗೊರೆಗಾಂವ್ ನ ಆರೆಯ್ ಕಾಲೋನಿಯಲ್ಲಿ ಭಾನುವಾರ 'ರಾಬಿನ್‌ಸನ್‌ ಆರ್‌44' ಹೆಲಿಕಾಪ್ಟರ್ ಪತನಗೊಂಡಿದ್ದು ಇಬ್ಬರು ಮೃತಪಟ್ಟಿದ್ದು. ಇನ್ನುಳಿದವರಿಗೆ ಗಂಭೀರ ಗಾಯಗಳಾಗಿವೆ.

ಹೆಲಿಪಾಕ್ಟರ್ ನ ಪೈಲೆಟ್ ಪಿ.ಕೆ ಮಿಶ್ರಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನುಳಿದವರಿಗೆ ಗಂಭೀರ ಗಾಯಗಳಾಗಿದ್ದು. ಸ್ಥಳೀಯರು ಗಾಯಾಳುಗಳನ್ನು ಸೆವೆನ್ ಹಿಲ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹೆಲಿಕಾಪ್ಟರ್ ನಲ್ಲಿ ಪೈಲೆಟ್ ಸೇರಿದಂತೆ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Helicopter crashes in Mumbai's Aarey colony: one dead, three injured

1992 ರಲ್ಲಿ ನಿರ್ಮಿಸಲಾಗಿದ್ದ ಈ ರಾಬಿನ್ ಸನ್ ಆರ್ 44 ಹೆಲಿಕಾಫ್ಟರ್ ಪವನ್ ಹಂಸ್ ಎಂಬುವವರ ಬಳಿ ಇತ್ತು. ಆದರೆ, ಅದನ್ನು ಖರೀದಿಸಿದ್ದ ಖಾಸಗಿ ಏವಿಯೇಶನ್ ಕಂಪನಿ ದುರಸ್ತಿ ಮಾಡಿಸಿ ಹೆಲಿಕಾಪ್ಟರ್ ಜಾಯ್‌ ರೈಡ್‌ ಗೆ ಮಾತ್ರ ಬಳಕೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.

English summary
One person was killed, and three others were injured in a helicopter crash in the Filter Pada area of Aarey Colony, in Mumbai's Goregaon on Sunday.
Please Wait while comments are loading...