ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗಿಲ್ಲಿ ಸೂರ್ಯನ ಬೆಳಕು, ಕಾಶ್ಮೀರದಲ್ಲೆಲ್ಲೂ ಮಂಜಿನ ಮುಸುಕು!

ಜಮ್ಮು ಕಾಶ್ಮೀರ ಅಕ್ಷರಶಃ ಹಿಮಾವೃತವಾಗಿದೆ. ಅಗಾಧವಾಗಿ ಸುರಿಯುತ್ತಿರುವ ಹಿಮದಿಂದ ಅಲ್ಲಿನ ಚಿತ್ರಣವೇ ಬದಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇಷ್ಟು ಅಗಾಧವಾಗಿ ಹಿಮ ಸುರಿಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

|
Google Oneindia Kannada News

ಮೋಡಗಳು ಬಂದು ಭುವಿಯನ್ನು ತಬ್ಬಿದ ಹಾಗೆ ಎಂಬ ಕವಿವಾಣಿಯಂತೆ ಜಮ್ಮು-ಕಾಶ್ಮೀರದಲ್ಲಿ ಈಗ ಎಲ್ಲೆಲ್ಲೂ ಮಂಜಿನ ಸುರಿಮಳೆ. ಅಲ್ಲಿನ ಮಂದಿ ಸೂರ್ಯನನ್ನು ನೋಡಿ ಅದೆಷ್ಟು ದಿನಗಳಾದವೋ.

ಇಲ್ಲಿ ದಕ್ಷಿಣ ಭಾರತದಲ್ಲಿ ನಮಗೆ ಅಂಥ ಪರಿಸ್ಥಿತಿಯಿಲ್ಲ. ಬೆಂಗಳೂರಿನಲ್ಲೂ ಚುಮುಚುಮು ಚಳಿಯಿದೆ. ಆದರೆ, ಅದರ ಜತೆಗೆ ಸೂರ್ಯನ ಹೊಂಬಿಲಿಸಿದೆ. ಇದೊಂದು ರೀತಿಯಲ್ಲಿ ಸಮಶೀತೋಷ್ಣತೆಯನ್ನು ಏಕಕಾಲದಲ್ಲಿ ಅನುಭವಿಸುವ ಅನುಭೂತಿ. ಇದಕ್ಕೇ ಹಲವರಿಗೆ ಬೆಂಗಳೂರು ಇಷ್ಟವಾಗೋದು.[ಗ್ಯಾಲರಿ: ದೇಶದೆಲ್ಲೆಡೆ 68ನೇ ಗಣತಂತ್ರ ಸಂಭ್ರಮ]

Heavy snow fall in Jammu and Kashmir affects the normal life

ಆದರೆ, ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಕ್ಷರಶಃ ರೆಫ್ರಿಜರೇಟರ್ ಆದ ಜಮ್ಮು ಕಾಶ್ಮೀರ! ನಾವದನ್ನು ನೋಡಿ ವ್ಹಾವ್ ಎನ್ನುತ್ತೇವೆ. ಆದರೆ, ಅಲ್ಲಿ ಆ ಮಂಜನ್ನು ಅನುಭವಿಸಿದವರಿಗೇ ಗೊತ್ತು ಅದರ ಕಷ್ಟವೇನೆಂದು.

ಕೆಲವಾರು ದಿನಗಳಿಂದ ಸುರಿಯುತ್ತಿರುವ ಈ ಮಂಜಿನಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರ ದೈನಂದಿನ ಬದುಕಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ವಿಮಾನ, ಟ್ರಕ್ ಸಂಚಾರ ಸ್ಥಬ್ಧಗೊಂಡಿವೆ. ಅದಕ್ಕಿಂತ ಹೆಚ್ಚಾಗಿ ಪರಿಸರದ ತಾಪಮಾನ ಶೂನ್ಯ ಡಿಗ್ರಿಗೆ ಇಳಿದಿರುವುದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಜನವರಿ 26ರ ಬೆಳಗ್ಗೆ ಇಡೀ ದೇಶ ಲಗುಬಗೆಯಲ್ಲಿ ಗಣರಾಜ್ಯೋತ್ಸವದ ಸಡಗರದಲ್ಲಿ ಭಾಗಿಯಾಗಲು ತಯಾರಾಗುತ್ತಿರುವಾಗ ಭಾರತದ ಮುಕುಟಪ್ರಾಯವಾದ ಕಾಶ್ಮೀರದಲ್ಲಿ ಜನಜೀವನ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ.

ಇಕ್ಕೆಲಗಳಲ್ಲಿ ಹಿಮದ ಸೊಬಗು

ಇಕ್ಕೆಲಗಳಲ್ಲಿ ಹಿಮದ ಸೊಬಗು

ಇದು ಶ್ರೀನಗರ, ಸೋನಾಮಾರ್ಗದಲ್ಲಿ ಕಂಡು ಬಂದ ದೃಶ್ಯ. ಮರಗಳೆಲ್ಲ ಮಂಜಿನ ಸ್ಪರ್ಶದಿಂದ ಮಂಕಾಗಿವೆ. ರಸ್ತೆಯಲ್ಲಿ ವಾಹನಗಳ ಸಂಚಾರವಿಲ್ಲ.

ದೈನಂದಿನ ವ್ಯವಹಾರ ಸ್ತಬ್ಧ

ದೈನಂದಿನ ವ್ಯವಹಾರ ಸ್ತಬ್ಧ

ಇದು ಗುಂಡರ್ ಬಾಲ್ ಜಿಲ್ಲೆಯ ಪ್ರಮುಖ ರಸ್ತೆಯೊಂದ ಚಿತ್ರ. ನೋಡಲು ಐರೋಪ್ಯ ದೇಶದ ವಾತಾವರಣದಂತೆ ಕಾಣುವ ಇಲ್ಲಿ ಜನರ ದೈನಂದಿನ ಚಟುವಟಿಕೆ ಬಹುತೇಕ ಸ್ತಬ್ಧವಾಗಿವೆ.

ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತ

ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತ

ಶ್ರೀನಗರದ ಪ್ರಮುಖ ರಸ್ತೆಗಳಲ್ಲಿ ಸರಕು ಸಾಗಣೆ ಟ್ರಕ್ಕುಗಳು ಸದ್ದಿಲ್ಲದೆ ನಿಂತುಬಿಟ್ಟಿವೆ. ಹೀಗಾಗಿ, ದಿನನಿತ್ಯದ ಸಾಮಾನುಗಳಿಗೆ ಅಭಾವ ಉಂಟಾಗಿದೆ.

ಸಂಸಾರದ ಗಾಡಿ ಎಳೆಯಲೇಬೇಕಲ್ಲ?

ಸಂಸಾರದ ಗಾಡಿ ಎಳೆಯಲೇಬೇಕಲ್ಲ?

ಚಳಿಯಾದರೇನು, ಮಳೆಯಾದರೇನು, ಹಿಮವಾದರೇನು.... ಸಂಸಾರ ಸಾಗಲೇಬೇಕಲ್ಲ? ದಟ್ಟ ಹಿಮ, ಕೊರೆಯುವ ಚಳಿಯ ನಡುವೆಯೂ ಶ್ರೀನಗರದಲ್ಲಿ ಯುವಕನೊಬ್ಬ ತನ್ನ ಮನೆಗಾಗಿ ಗ್ಯಾಸ್ ಸಿಲಿಂಡರ್ ಒಯ್ಯುತ್ತಿರುವ ದೃಶ್ಯ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಿಗಿಭದ್ರತೆ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಿಗಿಭದ್ರತೆ

ಹಿಮಪಾತನ ನಡುವೆಯೂ ಜಮ್ಮು ಕಾಶ್ಮೀರದಲ್ಲೂ ರಾಷ್ಟ್ರೀಯ ಹಬ್ಬದ ಸಡಗರ ಮನೆ ಮಾಡಿತ್ತು. ಹಿಮದ ನಡುವೆಯೂ ಅಲ್ಲಿನ ಭದ್ರತಾ ಸಿಬ್ಬಂದಿಯಿಂದ ವಾಹನ ತಪಾಸಣೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.

English summary
Heavy snow fall in Jammu and Kashmir has disturbed the routine life of the civilians. Various sectors such as transportation, communication got affected due to the zero degree atmosphere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X