ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ಎಂಬ ರಕ್ತ ಪಿಪಾಸು, ಇರಾನಿನ ಮಗುವಿನಂತಾದ ಜಗತ್ತು

|
Google Oneindia Kannada News

ರಮ್ಜಾನ್ ಮಾಸದ ಮತ್ತೊಂದು ಉಗ್ರ ದಾಳಿ ಇರಾನ್ ಮೇಲೆ ಆಗಿದೆ. ಮೇ ಇಪ್ಪತ್ತಾರರಿಂದ ರಂಜಾನ್ ನ ಪವಿತ್ರ ಮಾಸ ಆರಂಭವಾದ ನಂತರ ನೂರಾರು ಮಂದಿಯನ್ನು ಉಗ್ರರು ಕೊಂದಿದ್ದಾರೆ. ಅದರಲ್ಲು ಆತ್ಮಾಹುತಿ ದಾಳಿಗಳು ಹೆಚ್ಚಾಗಿವೆ. ನೀನು ಪ್ರಾಣ ಬಿಟ್ಟರೆ ಪುಣ್ಯ, ಸ್ವರ್ಗ ಮತ್ತೊಂದು ಸಿಗುತ್ತದೆ ಎಂದು ಹೇಳಿ, ಈ ಮಾಸದಲ್ಲಿ ದಾಳಿಗೆ ಜನರನ್ನು ತಯಾರಿ ಮಾಡಲಾಗುತ್ತದೆ.

ಬಾಗ್ದಾದ್, ಅಫ್ಘಾನಿಸ್ತಾನ, ಲಂಡನ್, ಮನಿಲಾ, ಇರಾನ್...ಹೀಗೆ ಉಗ್ರಗಾಮಿಗಳು ಅಟ್ಟಹಾಸ ಮೆರೆದದ್ದು ಒಂದೊಂದಾಗಿ ಕಣ್ಣೆದುರು ಬರುತ್ತದೆ. ಇರಾನ್ ನಲ್ಲಿ ಬುಧವಾರ ನಡೆದ ದಾಳಿ ವೇಳೆ ವ್ಯಕ್ತಿಯೊಬ್ಬರು ತಮ್ಮ ಮಗುವನ್ನು ರಕ್ಷಣಾ ಸಿಬ್ಬಂದಿಗೆ ನೀದುತ್ತಿರುವ ಈ ಫೋಟೋ ಹೃದಯ ಕಲಕುವಂತಿದೆ.[ಇರಾನಿನಲ್ಲಿ ಸಂಸತ್, ಮಸೀದಿ ಮೇಲೆ ಭಯೋತ್ಪಾದಕ ದಾಳಿ, 7 ಸಾವು]

ಜಗತ್ತಿನ ಭವಿಷ್ಯದ ಬಗ್ಗೆಯೇ ಆತಂಕ ಹುಟ್ಟಿಸುವಂತಿದೆ. ಇನ್ನು ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಯುವಾಗ ರೈತರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದವರು ಪೊಲೀಸರು ಅಂತಾರೆ ರೈತರು. ನಾವು ಗುಂಡೇ ಹಾರಿಸಿಲ್ಲ ಅನ್ನೋದು ಪೊಲೀಸರು ವಾದ. ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಸ್ಥಿತಿ ಭಯಂಕರವಾಗಿದೆ.

ಇನ್ನು ಉತ್ತರ ರಾಜ್ಯಗಳ ಬಹುತೇಕ ಕಡೆ ಬಿಸಿಲ ಬೇಗೆ. ಕಾಂಗ್ರೆಸ್ ಕಾರ್ಯಕರ್ತರು ಮಧ್ಯಪ್ರದೇಶದಲ್ಲಿ ಬಂದ್ ವೇಳೆ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಇನ್ನಷ್ಟು ಸುದ್ದಿ-ಚಿತ್ರಗಳು ನಿಮ್ಮೆದುರಿಗಿವೆ.[ರೈತರ ಕ್ರೋಧಾಗ್ನಿಗೆ ಸಿಕ್ಕು ಹೊತ್ತಿ ಉರಿಯುತ್ತಿದೆ ಮಧ್ಯಪ್ರದೇಶ]

ರೈತರ ಬಂದ್ ಕರೆಗೆ ಕಾಂಗ್ರೆಸ್ ಬೆಂಬಲ

ರೈತರ ಬಂದ್ ಕರೆಗೆ ಕಾಂಗ್ರೆಸ್ ಬೆಂಬಲ

ಮಧ್ಯಪ್ರದೇಶದಲ್ಲಿ ರೈತರು ಕರೆ ನೀಡಿದ ಬಂದ್ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಭೋಪಾಲ್ ನಲ್ಲಿ ಬಲವಂತವಾಗಿ ಮಳಿಗೆ ಮುಚ್ಚಿಸಿದರು.

ಜಗತ್ತಿನ ಭವಿಷ್ಯದಂತೆ ಕಾಣುತ್ತಿರುವ ಇರಾನ್ ನ ಮಗು

ಜಗತ್ತಿನ ಭವಿಷ್ಯದಂತೆ ಕಾಣುತ್ತಿರುವ ಇರಾನ್ ನ ಮಗು

ಇರಾನ್ ಸಂಸತ್ ಮೇಲೆ ಬುಧವಾರ ದಾಳಿ ನಡೆದಿದೆ. ಆ ವೇಳೆ ವ್ಯಕ್ತಿಯೊಬ್ಬರು ತಮ್ಮ ಮಗುವನ್ನು ರಕ್ಷಣಾ ಸಿಬ್ಬಂದಿಯೊಬ್ಬರಿಗೆ ನೀಡುತ್ತಿದ್ದ ದೃಶ್ಯವಿದು. ಈ ಘಟನೆಯಲ್ಲಿ ಸಾವು-ನೋವು ಸಂಭವಿಸಿದೆ. ಈ ಫೋಟೋ ಧ್ವನಿಸುತ್ತಿರುವುದರ ಅರ್ಥ ಹಲವು. ಒಟ್ಟಾರೆ ಆ ಮಗು ಇಡೀ ಜಗತ್ತಿನ ಭವಿಷ್ಯದಂತೆ ಕಾಣುತ್ತಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ

ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ವಿರುದ್ಧ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆಯರು ಗುವಾಹತಿಯ ರಾಜೀವ್ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹುಲಿರಾಯನ ನೀರ ಆಚೆಗೆ ಬರುವಾಗಿನ ಭಂಗಿ

ಹುಲಿರಾಯನ ನೀರ ಆಚೆಗೆ ಬರುವಾಗಿನ ಭಂಗಿ

ಸೂರತ್ ನ ಮೃಗಾಲಯದಲ್ಲಿ ಹುಲಿರಾಯ ನೀರಿನಿಂದ ಎದ್ದು ಬರುತ್ತಿರುವ ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿರುವುದು ಹೀಗೆ.

ಯೋಗನಿರತ ಯೋಗಿ

ಯೋಗನಿರತ ಯೋಗಿ

ಜೂನ್ ಇಪ್ಪತ್ತೊಂದಕ್ಕೆ ಯೋಗ ದಿನಾಚರಣೆ ಇದೆ. ಅದಕ್ಕೂ ಮುನ್ನ ಯೋಗದ ಅಭ್ಯಾಸದಲ್ಲಿ ನಿರತರಾಗಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಯಾಮೆರಾ ಕಣ್ಣು ಮಿಟುಕಿಸಿದಾಗ ಕಂಡಿದ್ದು ಹೀಗೆ.

ಬಿಸಿಲ ಬೇಗೆಗೆ ಗಂಧದ ಮೊರೆ

ಬಿಸಿಲ ಬೇಗೆಗೆ ಗಂಧದ ಮೊರೆ

ಅಲಹಾಬಾದ್ ನಲ್ಲಿ ಬಿಸಿಲ ಬೇಗೆ. ಅದರಿಂದ ರಕ್ಷಣೆ ಪಡೆಯುವ ಸಲುವಾಗಿ ಮುಖಕ್ಕೆ ಗಂಧ ಲೇಪಿಸಿಕೊಂಡಿದ್ದ ಸಾಧುವೊಬ್ಬರು ಗಮನ ಸೆಳೆದರು.

ಮಿಯಾಮಿ ಸುಂದರಿ

ಮಿಯಾಮಿ ಸುಂದರಿ

ಮಿಯಾಮಿ ಫ್ಯಾಷನ್ ವೀಕ್ ನಲ್ಲಿ ಸುಂದರಿಯೊಬ್ಬಳು ಬೆಡಗು ಬಿನ್ನಾಣ ಪ್ರದರ್ಶಿಸಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದ ಆಕೆಯ ಭಂಗಿ.

English summary
Iran terror attack, Madhya Pradesh Bandh and other national and international events represent through PTI images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X