ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಜೋಕ್ಸ್: ರಾಹುಲ್ ಬಿಜೆಪಿಗೆ ವೋಟ್ ಮಾಡಿದ್ದಾರಾ?

ಭಾರತದ ಅತೀ ದೊಡ್ಡ ರಾಜ್ಯ, ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಸಾಧಿಸುವುದು ಖಚಿತವಾಗುತ್ತಿದ್ದಂತೆಯೇ, ಬಿಜೆಪಿಯ ಗೆಲುವಿಗೆ ಕಾರಣ ರಾಹುಲ್ ಗಾಂಧಿ ಎಂದು ಹಲವರು ಟ್ವೀಟ್ ಮಾಡತೊಡಗಿದ್ದಾರೆ.

|
Google Oneindia Kannada News

ರಾಹುಲ್ ಗಾಂಧಿಯೂ ಬಿಜೆಪಿಗೆ ವೋಟ್ ಮಾಡಿದ್ದಾರಾ..! ಹೀಗೊಂದು ಜೋಕ್ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳು ಕಾಂಗ್ರೆಸ್ ನ ವೈಫಲ್ಯವನ್ನು ಆಡಿಕೊಳ್ಳತೊಡಗಿವೆ.

ಈಗಾಗಲೇ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಜೋಕ್ ನ ಹವಾ ಶುರುವಾಗಿದೆ. ಭಾರತದ ಅತೀ ದೊಡ್ಡ ರಾಜ್ಯ, ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಸಾಧಿಸುವುದು ಖಚಿತವಾಗುತ್ತಿದ್ದಂತೆಯೇ, ಬಿಜೆಪಿಯ ಗೆಲುವಿಗೆ ಮುಖ್ಯ ಕಾರಣ ರಾಹುಲ್ ಗಾಂಧಿ ಎಂದು ಹಲವರು ಟ್ವೀಟ್ ಮಾಡತೊಡಗಿದ್ದಾರೆ.[ಹಾಸ್ಯ : ಸೆಹ್ವಾಗ್ ದಾಖಲೆ ಮುರಿದ ಮೋದಿ, ರಾಹುಲ್ ಕಥೆ ಏನು?]

ಗೋವಾ</a> | <a title=ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" title="ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" />ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಜನರು ಆಡಿಕೊಳ್ಳುತ್ತಿರುವ ಕೆಲವು ಟ್ವೀಟ್ ಇಲ್ಲಿದೆ...

*ಸ್ಟಾರ್ ಕ್ಯಾಂಪೇನರ್ ರಾಹುಲ್ ಗೆ ಆರತಿ!

*ಸ್ಟಾರ್ ಕ್ಯಾಂಪೇನರ್ ರಾಹುಲ್ ಗೆ ಆರತಿ!

ಬಿಜೆಪಿಯ ನಾಯಕರು ಚುನಾವಣೆ ಫಲಿತಾಂಶದ ನಂತರ ರಾಹುಲ್ ಗಾಂಧಿಯವರಿಗೆ ಆರತಿಮಾಡುತ್ತಾರಂತೆ. ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ರೀತಿಯಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸಿದ್ದು ರಾಹುಲ್ ಗಾಂಧಿಯೇ ಆಗಿರುವುದರಿಂದ ಅವರಿಗೆ ಈ ಗೌರವ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಐಸಿಸ್ ಸೇರಲಿ!

ರಾಹುಲ್ ಗಾಂಧಿ ಅವರಿಗೆ ಐಸಿಸ್ ಸೇರೋದಕ್ಕೆ ಹೇಳಿ. ಆಗ ಅವರು ಅದನ್ನೂ ನಾಶ ಮಾಡುತ್ತಾರೆ! ಎಂದಿದ್ದಾರೆ ಅಗ್ಯಾನಿ ಪಂಡಿತ್ ಎನ್ನುವವರು.

ಬಿಜೆಪಿಗೆ ವೋಟ್ ಮಾಡಿದ್ದಾರಾ?

ರಾಹುಲ್ ಗಾಂಧಿ ಸಹ ಬಿಜೆಪಿ ಗೆ ವೋಟ್ ಮಾಡಿಬಿಟ್ಟಿದ್ದಾರಾ ಅನ್ನೋದು ಕಾಂಗ್ರೆಸ್ ನಾಯಕರಿಗೆ ಈಗ ಶುರುವಾಗಿರುವ ಅನುಮಾನ! ಅಂತ ಸತೀಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಡಕ್ ವರ್ಥ್ ಲೂಯಿಸ್ ನಿಂದ ಗೆಲ್ಲಬಹುದಿತ್ತು!

ಮಾರ್ಚ್ 11 ಕ್ಕೆ ಮಳೆ ಬರಬಹುದು ಅಂತ ರಾಹುಲ್ ಗಾಂಧಿ ನಿರೀಕ್ಷಿಸಿದ್ದರು. ಡಕ್ ವರ್ಥ್ ಲೂಯಿಸ್ ನಿಯಮದ ಮೇಲಾದರೂ ಕಾಂಗ್ರೆಸ್ ಗೆಲ್ಲಬಹುದೇನೋ ಅಂತ! ಎಂದು ಕ್ರೇಜಿ ಕನ್ನಿಕಾ ಎಂಬುವವರ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗೆ ಹೂಗುಚ್ಛ ಕಳಿಸಿದರು ಅಮರೀಂದರ್!

ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿ ಅಮರೀಂದರ್ ಸಿಂಗ್ ಒಂದು ದೊಡ್ಡ ಹೂಗುಚ್ಛವನ್ನೇ ರಾಹುಲ್ ಗಾಂಧಿಯವರಿಗೆ ಕಳಿಸಿದ್ದಾರಂತೆ. ಪಪ್ಪು ಪಂಜಾಬಿಗೆ ಪ್ರಚಾರಕ್ಕೆ ಬರದಿರುವುದೇ ಸಿಂಗ್ ಗೆಲುವಿಗೆ ಕಾರಣ ಅನ್ನೋ ಖುಷಿಗೆ ಈ ಹೂಗುಚ್ಛವಂತೆ ಎಂದು ಲೋಲಾ ಕುಟ್ಟಿಯಮ್ಮ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
After the failure of Congress in Uttar Pradesh, the people who are very active in social media has started to posting jokes on Rahul Gandhi. Here is few statements which are posted in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X