ಭಾರತೀಯ ರೈಲ್ವೆಗೆ ಜನ್ಮದಿನದ ಶುಭಾಶಯ ಹೇಳಿ

Subscribe to Oneindia Kannada

ಅಯ್ಯೋ ರೈಲ್ವೆ ಪ್ರಯಾಣವೇ? ಗಬ್ಬು ವಾಸನೆ, ಜನ ಜಂಗುಳಿ, ಬೇಡಪ್ಪಾ ಬೇಡ ಎಂದು ಮೂಗು ಮುರಿಯುವ ಕಾಲ ದೂರ ಸರಿದು ವರ್ಷಗಳೇ ಕಳೆದಿವೆ. ಭಾರತೀಯ ರೈಲ್ವೆ ಸಂಪೂರ್ಣ ಬದಲಾಗಿದೆ. ಆನ್ ಲೈನ್ ಮೂಲಕವೇ ಎಲ್ಲ ವ್ಯವಹಾರಗಳನ್ನು ನಡೆಸುತ್ತಿದೆ.

ಭಾರತೀಯ ರೈಲ್ವೆಗೆ ಇಂದು 163ನೇ ಹುಟ್ಟುಹಬ್ಬದ ಸಂಭ್ರಮ. ಹ್ಯಾಪಿ ಬರ್ತ್ ಡೇ ಇಂಡಿಯನ್ ರೈಲ್ವೆ...ಜನರ ಜೀವನಾಡಿಯಾಗಿ ಬೆರೆತುಹೋಗಿರುವ ರೈಲ್ವೆ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ. 1853ರಲ್ಲಿ ಮುಂಬೈ ಮತ್ತು ಥಾಣೆ ನಡುವೆ ಮೊದಲ ಪ್ರಯಾಣ ಮಾಡಿದ ರೈಲ್ವೆ ಇಂದು ದೇಶದ ಎಲ್ಲ ಭಾಗಗಳ ಕೊಂಡಿಯಾಗಿ ಬದಲಾಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆಯ ಚಿತ್ರಣವೂ ಬದಲಾಗಿಹೋಗಿದೆ. ಐಆರ್ ಸಿಟಿಸಿ ಮೂಲಕ ಎಲ್ಲ ವ್ಯವಹಾರಗಳು ಸರಳ ಮತ್ತು ಸಸೂತ್ರ. ಟಿಕೆಟ್ ಬುಕಿಂಗ್, ಸ್ವಚ್ಛ ಹಾಸಿಗೆಗಳು, ಶುದ್ಧ ಊಟ, ಸ್ವಚ್ಛ ನೀರು ಎಲ್ಲವೂ ಭಾರತೀಯ ರೈಲ್ವೆಯಲ್ಲಿದೆ..[ಅಂದದ ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ರೈಲಿನ ಚೆಂದ]

ಬ್ರಿಟಿಷರ ಕಾಲದಲ್ಲೇ ಆರಂಭವಾದ ರೈಲ್ವೆ ಇತಿಹಾಸ ಬಹಳ ದೊಡ್ಡದು. ಸಾಧನೆ ಇನ್ನು ದೊಡ್ಡದು. ಅದೆಲ್ಲವನ್ನು ಮೀರಿ ಅದು ಜನರೊಂದಿಗೆ ಬೆರೆತಿದೆ. ವಿಶೇಷ ಬಜೆಟ್ ನ್ನು ಸಹ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದೆ. ಇದೀಗ ಬರದಿಂದ ಕಂಗೆಟ್ಟ ಲಾತೂರ್ ದಾಹವನ್ನು ಇಂಗಿಸಿದ ರೈಲ್ವೆಗೊಂದು ಸಲಾಂ... ಮತ್ತೊಮ್ಮೆ ಭಾರತೀಯ ರೈಲ್ವೆಗೆ ಜನ್ಮದಿನದ ಶುಭಾಶಯ...

ಇತಿಹಾಸದ ಪುಟಗಳು

ಮುಂಬೈ ಮತ್ತು ಥಾಣೆ ನಡುವೆ ಏಪ್ರಿಲ್ 16, 1853 ರ ನಡುವೆ ಮೊದಲ ಉಗಿ ಎಂಜಿನ್ ರೈಲು ಯಶಸ್ವಿ ಸಂಚಾರ ಮುಗಿಸಿದ್ದನ್ನು ಭಾರತೀಯ ರೈಲ್ವೆಯ ಹುಟ್ಟು ಎಂದು ಲೆಕ್ಕ ಹಾಕಲಾಗುತ್ತದೆ.

ರೈಲಿನಲ್ಲಿ ಶೌಚಾಲಯ

ರೈಲ್ವೆ ಪ್ರಯಾಣ ಆರಂಭವಾದ 50 ನಂತರ ಶೌಚಾಲಯವನ್ನು ಆರಂಭಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

 

23 ದಶಲಕ್ಷ ಜನ

23 ದಶಲಕ್ಷಕ್ಕಿಂತಲೂ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. 64 ಸಾವಿರ 600 ಕಿಲೋಮೀಟರ್ ದೂರದ ರೈಲ್ವೆ ನೆಟ್‌ವರ್ಕ್‌ ಇದೆ.

 

17 ವಲಯ

ಭಾರತೀಯ ರೈಲ್ವೆ 17 ವಲಯಗಳು 69 ವಿಭಾಗಗಳಾಗಿ ವಿಂಗಡಿಸಲಾಗಿದೆ. 24. ಪ್ರತಿ ಗಂಟೆಗೆ 160 ಕಿ 99. ಅತಿ ವೇಗದ ರೈಲು ದೆಹಲಿ-ಆಗ್ರಾ ನಡುವೆ ಸಂಚಾರ ಮಾಡುತ್ತದೆ. ಹುಬ್ಬಳ್ಳಿ, ಮೈಸೂರು ಹಾಗೂ ಕೋಝಿಕೋಡ್ ಒಳಗೊಂಡ ಸೌಥ್ -ವೆಸ್ಟರ್ನ್ (ನೈರುತ್ಯ) ಝೋನ್ ಅಥವಾ ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಸೇಲಂ, ಪಾಲಕ್ಕಾಡ್ ಹಾಗೂ ತಿರುವನಂತಪುರಂ ಒಳಗೊಂಡ ದಕ್ಷಿಣ (ಸದರ್ನ್) ವಲಯಗಳನ್ನು ಉದಾರಿಸಬಹುದು.

 

ಬದಲಾವಣೆಯ ಕಾಲ

ಎನ್ ಡಿಎ ಸರ್ಕಾರ ಅದರಲ್ಲೂ ಸುರೇಶ್ ಪ್ರಭು ರೈಲ್ವೆ ಸಚಿವರಾದ ಮೇಲೆ ಬದಲಾವಣೆಯ ಗಾಳಿಯೇ ಬೀಸಿದೆ. ಭಾರತೀಯ ರೈಲ್ವೆ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಕೇವಲ ಒಂದು ಟ್ವೀಟ್ ಮೂಲಕ ಸಮಸ್ಯೆಗೆ ಸ್ಪಂದಿಸಿದ ಅದೆಷ್ಟೋ ಉದಾಹರಣೆಗಳಿವೆ.

ಗತಿಮಾನ್ ಎಕ್ಸ್ ಪ್ರೆಸ್

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲು ಸಖಿಯರನ್ನು ಹೊಂದಿರುವ ಸೆಮಿ ಹೈ ಸ್ಪೀಡ್ ರೈಲು 'ಗತಿಮಾನ್ ಎಕ್ಸ್ ಪ್ರೆಸ್' ಬಗ್ಗೆ ಹೇಳಲೇಬೇಕು. ದೆಹಲಿ- ಆಗ್ರಾ ನಡುವೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ.

 

English summary
Happybirth Day Indian Railways. Indian Railways - the World's third largest Railway Network encompasses a host of facts. Now Indian Railways in a changing mode.
Please Wait while comments are loading...