ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಶಾಲೆಗೆ ನುಗ್ಗಿದ ಇಬ್ಬರು ಉಗ್ರರ ಹತ್ಯೆ, 3 ಯೋಧರಿಗೆ ಗಾಯ

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜೂನ್ 25: ಭಾನುವಾರ ಮುಂಜಾನೆ ಶ್ರೀನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಗುಂಡಿನ ಮೊರೆತ ಕೇಳಿಸಿದೆ. ಶಾಲೆಯಲ್ಲಿ ಉಗ್ರರು ಅಡಗಿಕೊಂಡಿದ್ದು, ಸೇನಾಪಡೆಗಳು ಉಗ್ರರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದವು. ಇದರಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಮೂವರು ಯೋಧರು ಗಾಯಗೊಂಡಿದ್ದಾರೆ.

ಶನಿವಾರವಷ್ಟೇ ಸಿಆರ್ ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಶ್ರೀನಗರ-ಜಮ್ಮು ಹೆದ್ದಾರಿಯ ಪಂಥಾ ಚೌಕ್ ನಲ್ಲಿ ಮುಚ್ಚಿದ್ದ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡುವ ಕೆಲಸಕ್ಕೆಂದು ಸಿಆರ್ ಪಿಎಫ್ ಸಿಬ್ಬಂದಿ ತೆರಳಿದ್ದರು. ಈ ವೇಳೆ ಉಗ್ರರು ದಾಳಿ ನಡೆಸಿ ಸಿಆರ್ ಪಿಎಫ್ ಯೋಧರೊಬ್ಬರನ್ನು ಕೊಂದಿದ್ದರು.

Gun battle at Srinagar school, 1 CRPF personnel martyred

ಇದಾದ ಬೆನ್ನಿಗೆ ಇದೀಗ ಉಗ್ರರು ಡೆಲ್ಲಿ ಪಬ್ಲಿಕ್ ಸ್ಕೂಲ್ ಒಳಗಡೆ ಅವಿತು ಕುಳಿತಿದ್ದಾರೆ.

"ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಬೆಳಿಗ್ಗೆ 3.40 ಕ್ಕೆ ಗುಂಡಿನ ದಾಳಿ ಆರಂಭವಾಗಿದೆ. ಇನ್ನೂ ಗುಂಡಿನ ಚಕಮಕಿ ನಡೆಯುತ್ತಿದೆ," ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಉಗ್ರರ ಗುಂಡಿಗೆ ಓರ್ವ ಸಿಆರ್ ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರೆ, ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

Gun battle at Srinagar school, 1 CRPF personnel martyred


ಗುಂಡಿನ ದಾಳಿ ಆರಂಭವಾದ ಪ್ರದೇಶ ಭಾರತೀಯ ಸೇನೆಯ ಚೀನಾರ್ ಕಾರ್ಪ್ಸ್ ಮುಖ್ಯ ಕಚೇರಿಯಿಂದ 1 ಕಿಲೋಮೀಟರ್ ದೂರದಲ್ಲಷ್ಟೇ ಇದೆ. ಈ ಘಟನೆ ಬೆನ್ನಿಗೆ ಶಾಲೆಯ ಸುತ್ತ ಮುತ್ತ ಉಗ್ರರಿಗಾಗಿ ಹುಡುಕಾಟ ಆರಂಭಿಸಲಾಗಿದೆ.

English summary
The gunbattle at the school followed after militants attacked CRPF (Central Reserved Police Force) personnel Saturday evening, who were deployed in their road opening duty in close proximity to the school in Pantha chowk on the Srinagar-Jammu highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X