ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿಗೆ ಬಲಿಯಾದ ಅಮರನಾಥ್ ಯಾತ್ರಾರ್ಥಿಗಳ ಕುಟುಂಬಕ್ಕೆ ತಲಾ 10 ಲಕ್ಷ

|
Google Oneindia Kannada News

ಶ್ರೀನಗರ, ಜುಲೈ 11 : ಉಗ್ರರ ದಾಳಿಗೆ ಬಲಿಯಾದ ಗುಜರಾತ್ ಮೂಲದ ಅಮರನಾಥ ಯಾತ್ರಾರ್ಥಿಗಳ ಕುಟುಂಬಕ್ಕೆ ಗುಜರಾತ್ ಸರ್ಕಾರ ತಲಾ 10 ಲಕ್ಷ ಪರಿಹಾರವನ್ನು ಮಂಗಳವಾರ ಘೋಷಿಸಿದೆ.

ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು, ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 10 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರು. ನೀಡುವುದಾಗಿ ಹೇಳಿದರು.

Gujarat Government announces Rs 10 lakh ex-gratia for Anantnag terror attack victims

ಉಗ್ರರು ದಾಳಿ ನಡೆಸುತ್ತಿದ್ದ ವೇಳೆ ಪ್ರಯಾಣಿಕರನ್ನು ಸುರಕ್ಷಿತಾ ತಾಣಕ್ಕೆ ಕೊಂಡೊಯ್ದ ಚಾಲಕ ಸಲೀಂ ಅವರ ಸಮಯ ಪ್ರಜ್ಞೆ ಕಾರ್ಯವನ್ನು ಸಿಎಂ ರುಪಾನಿ ಶ್ಲಾಘಿಸಿದರು.

ಇದೇ ವೇಳೆ ಚಾಲಕ ಕಾರ್ಯ ಮೆಚ್ಚಿರುವ ರುಪಾನಿ ಆತನ ಹೆಸರನ್ನು ಶೌರ್ಯ ಪ್ರಶಸ್ತಿಗೆ ಸೂಚಿಸುವುದಾಗಿಯೂ ಘೋಷಿಸಿದ್ದಾರೆ.

ಸೋಮವಾರ ರಾತ್ರಿ ಅನಂತ್ ನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ನಡೆಸಿದ ಮನಸೋ ಇಚ್ಛೆ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು, ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ.

English summary
The Gujarat Government on Tuesday announced Rs. 10 lakh to each of the families of those people from Gujarat who had lost their lives in Monday?s terror attack in Anantnag and Rs. 2 lakh to the families of those injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X