ನೆರೆಯಲ್ಲಿ ಮುಳುಗಿದ ಗುಜರಾತ್ - ರಾಜಸ್ಥಾನ, 17 ರೈಲುಗಳು ರದ್ದು

Subscribe to Oneindia Kannada

ಅಹಮದಾಬಾದ್, ಜುಲೈ 24: ಗುಜರಾತ್ ಮತ್ತು ಪಕ್ಕದ ರಾಜಸ್ಥಾನ ರಾಜ್ಯದಲ್ಲಿ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಗುಜರಾತ್ ನ ರಾಜ್ ಕೋಟ್ ನ ಮಲಿಯಾ ಮಿಯಾನ ಪ್ರದೇಶದ ಸುತ್ತಮುತ್ತಲಿನ ಭಾಗಗಳು ಪೂರ್ತಿ ಮುಳುಗಡೆಯಾಗಿದ್ದು 17 ರೈಲುಗಳ ಪ್ರಯಾಣ ರದ್ದು ಪಡಿಸಲಾಗಿದೆ.

ಜುಲೈ 24ರಿಂದ ಜುಲೈ 28ರ ಮಧ್ಯೆ ರಾಜ್ ಕೋಟ್ ಮೂಲಕ ಹಾದು ಹೋಗುವ 17 ರೈಲುಗಳ ಪ್ರಯಾಣ ರದ್ದು ಪಡಿಸಿರುವುದಾಗಿ ರೈಲ್ವೇ ಇಲಾಖೆ ಹೇಳಿದೆ. ಇನ್ನು ರಾಜಸ್ಥಾನದ ಜೋಧ್ ಪುರದಲ್ಲೂ ಎರಡು ರೈಲುಗಳನ್ನು ರದ್ದುಪಡಿಸಲಾಗಿದೆ.

Gujarat flood: 17 trains cancelled from 24 July to 28 July due to flood in Rajkot

ಇನ್ನು ರಾಜಸ್ಥಾನದ ಉದಯಪುರದಲ್ಲಿ ತಾಯಿ ಮಗಳಿಬ್ಬರು ನದಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಪ್ರವಾಹ ಭೀಕರವಾಗಿದ್ದ ಭೂಸೇನೆ ಮತ್ತು ವಾಯು ಸೇನೆ ಜಾಮ್ನಗರ, ಜೋಧ್ ಪುರ ಮತ್ತು ಫಲೋಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Gujarat flood: 17 trains cancelled from 24 July to 28 July due to flood in Rajkot

ಪ್ರವಾಹದಲ್ಲಿ ಸಿಲುಕಿದ್ದ 460 ಜನರನ್ನು ರಕ್ಷಿಸಲಾಗಿದ್ದು, 2,200 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

IPL 2017: Match 3: Probable Gujarat XI against Kolkata | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat flood: 17 trains cancelled from 24 July to 28 July due to flood in Rajkot's Maliya Miyana region.
Please Wait while comments are loading...