ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮತದಾನ ಕಡ್ಡಾಯ, ತಪ್ಪಿದ್ದರೆ ಶಿಕ್ಷೆ ಖಚಿತ'

By Mahesh
|
Google Oneindia Kannada News

ಗಾಂಧಿನಗರ, ನ.10: ದೇಶದಲ್ಲೇ ಇದೇ ಮೊದಲ ಬಾರಿಗೆ ಗುಜರಾತ್ ಸರ್ಕಾರ ಮತದಾನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮೋದಿ ಅವರು ಸಿಎಂ ಆಗಿದ್ದ ಕಾಲದಿಂದಲೂ ನೆನಗುದಿಗೆ ಬಿದ್ದಿದ್ದ ಮಹತ್ವದ ಕಾಯಿದೆಗೆ ಈಗ ಕಾನೂನು ರೂಪ ಪಡೆದಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಹೊಸ ಕಾನೂನು ಜಾರಿಗೆ ಬರಲಿದ್ದು, ತಪ್ಪಿಸಿಕೊಂಡವರಿಗೆ ಶಿಕ್ಷೆ ಖಚಿತ.

ರಾಜ್ಯಪಾಲ ಒ.ಪಿ.ಕೊಯ್ಲಿ ಅವರು ರಾಜ್ಯ ಸರ್ಕಾರದ ಕಡ್ಡಾಯ ಮತದಾನ ಕಾಯ್ದೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ ಮತ ಚಲಾಯಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ಖಚಿತ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ಜತೆಗೆ ಪ್ರತಿಯೊಬ್ಬ ಮತದಾರನು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಚಲಾಯಿಸಲೇಬೇಕು ಎಂಬ ನಿಯಮಗಳಿವೆ.

Gujarat becomes first state to make voting mandatory in local body elections

ಗುಜರಾತ್ ವಿಧಾನಸಭಾ ಕಾರ್ಯದರ್ಶಿ ಡಿಎಂ ಪಾಟೀಲ್ ಅವರು ಈ ಬಗ್ಗೆ ವಿವರಿಸುತ್ತಾ, 2015ರಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಹಾಗೂ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಈ ಕಾನೂನು ಜಾರಿಗೆ ಬರಲಿದೆ. ಈ ಮೂಲಕ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಮತದಾನದ ಹಕ್ಕು ಜಾರಿ ಮಾಡಿದ ಏಕೈಕ ರಾಜ್ಯ ಗುಜರಾತ್ ಆಗಲಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಈ ಕಾಯ್ದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದರು ಎಂದಿದ್ದಾರೆ.

ಬಳಿಕ ರಾಜ್ಯಪಾಲರ ಸಹಿಗೆ ಕಳುಹಿಸಿಕೊಟ್ಟಿದ್ದರು. ಅಂದಿನ ರಾಜ್ಯಪಾಲರಾದ ಡಾ.ಕಮಲಾ ಬೇನಿವಾಲ್ ಅವರು ಮಸೂದೆಗೆ ಸಹಿ ಹಾಕದೆ ವಾಪಸ್ ಹಿಂತಿರುಗಿಸಿದ್ದರು. ನರೇಂದ್ರ ಮೋದಿ ಮತ್ತು ಕಮಲಾ ಬೇನಿವಾಲ್ ನಡುವಿನ ಮುಸುಕಿನ ಗುದ್ದಾಟ ಈ ಮಸೂದೆ ನೆನೆಗುದಿಗೆ ಬೀಳಲು ಕಾರಣವಾಗಿತ್ತು.

ಈ ಕಾಯಿದೆಗೆ ಅಂಕಿತ ಹಾಕಿದರೆ ಸಂವಿಧಾನದ 21ನೇ ಪರಿಚ್ಛೇದದ ಅನ್ವಯ ನಾಗರಿಕರಿಗೆ ಸಿಗುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ ಆಗುತ್ತದೆ. ಸಂವಿಧಾನ ಉಲ್ಲಂಘನೆಯಾಗುತ್ತದೆ ಎಂದು ಕಮಲಾ ಬೇನಿವಾಲ್ ಹೇಳಿದ್ದರು. ಅದರೆ, ಈಗ ರಾಜ್ಯಪಾಲ ಒ.ಪಿ.ಕೊಯ್ಲಿ ಅವರು ಮಸೂದೆಗೆ ಸಹಿ ಹಾಕಿ ಆದೇಶ ಹೊರಡಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಡಿ.ಎಂ.ಪಾಟೀಲ್ ತಿಳಿಸಿದ್ದಾರೆ.

ನೂತನ ನಿಯಮದ ಪ್ರಕಾರ ಮತದಾರನು ಕಡ್ಡಾಯವಾಗಿ ಮತ ಹಾಕದಿದ್ದರೆ ಆತನಿಗೆ ಕನಿಷ್ಠ ಪ್ರಮಾಣದ ಶಿಕ್ಷೆ ಇಲ್ಲವೆ ಸರ್ಕಾರದ ಸವಲತ್ತುಗಳನ್ನು ಕಡಿತಗೊಳಿಸುವ ಅಂಶ ಕಾಯ್ದೆಯಲ್ಲಿದೆ. 2015ರ ಅಕ್ಟೋಬರ್ ನಲ್ಲಿ ಗುಜರಾತಿನ 31 ಜಿಲ್ಲಾ ಪಂಚಾಯಿತಿ, 231 ತಾಲೂಕು ಪಂಚಾಯಿತಿ ಹಾಗೂ 53 ನಗರಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.

English summary
The Gujarat Governor has given go-ahead to the Local Authorities Laws (Amendment) Bill-2009 which makes voting compulsory in the local body elections.This Bill also provides for 50 per cent reservation for women in all local body elections. Once comes into effect, the Gujarat will become the first State to have the provision of compulsory voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X