ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ ಬರೆದ ನಟಿ ಮನೋರಮಾ ಇನ್ನಿಲ್ಲ

|
Google Oneindia Kannada News

ಚೆನ್ನೈ, ಅಕ್ಟೋಬರ್. 11: ಬಹುಭಾಷಾ ನಟಿ ಆಚಿ ಮನೋರಮಾ(ಜನನ ಮೇ 26, 1937)ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 78 ವರ್ಷದ ಹಿರಿಯ ನಟಿ ಕೆಲ ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಾತ್ರರಾಗಿದ್ದ ನಟಿ ಮನೋರಮಾ ಅವರು ಅಭಿಮಾನಗಳ ಪಾಳಿಗೆ 'ಆಚಿ ಮನೋರಮಾ' ಎಂದೇ ಖ್ಯಾತಿ ಗಳಿಸಿದ್ದರು. ಐವರು ಮುಖ್ಯಮಂತ್ರಿಗಳೊಂದಿಗೆ ನಟನೆ ಮಾಡಿದ ಖ್ಯಾತಿಯೂ ಮನೋರಮಾ ಅವರ ಬಳಿ ಇತ್ತು. ತಮಿಳುನಾಡಿನ ಈಗಿನ ಸಿಎಂ ಜಯಲಲಿತಾ ಅವರೊಂದಿಗೂ ಮನೋರಮಾ ಬಣ್ಣ ಹಚ್ಚಿದ್ದರು.[ಟೈಮ್ಸ್ ಆಫ್ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಮಲ್ಲು ಸ್ಟಾರ್]

actor

1937ರ ಮೇ 26ರಂದು ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಮನ್ನಾರ್ ಗುಡಿಯಲ್ಲಿ ಜನಿಸಿದ ಮನೋರಮಾ ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳ 1200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1000ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಮೂಲಕ ಗಿನ್ನೆಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು.

ಶಿವಾಜಿ ಗಣೇಶನ್, ರಜನಿಕಾಂತ್ ಮತ್ತು ಕಮಲ್ ಹಾಸನ್ ಸೇರಿದಂತೆ ಅನೇಕ ಪ್ರಮುಖ ನಟರೊಂದಿಗೆ ಅಭಿನಯಿಸಿದ್ದ ಮನೋರಮಾ ಪೋಷಕ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಹೆಸರುವಾಸಿಯಾಗಿದ್ದರು.

English summary
Veteran Tamil actor Manorama died of cardiac arrest late in the night on Saturday, October 11 in Chennai. She was 78. Fondly called Aachi, Manorama has acted in more than 1,200 films and 1,000 plays. She set a Guinness record when she completed 1,000 films.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X