ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST: ಸೇವಾ ವಲಯದ ತೆರಿಗೆ ಫೈನಲ್; ಶಿಕ್ಷಣ, ಆರೋಗ್ಯಕ್ಕಿಲ್ಲ ಟ್ಯಾಕ್ಸ್

ಸಭೆಯಲ್ಲಿ ಜನರಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಜಿಎಸ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಆದರೆ ಟೆಲಿಕಾಂ ಸೇವೆಗಳಿಗೆ ಭರ್ಜರಿ ಶೇಕಡಾ 18 ರಷ್ಟು ತೆರಿಗೆ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

By Sachhidananda Acharya
|
Google Oneindia Kannada News

ಶ್ರೀನಗರ, ಮೇ 19: ಇಂದು ಶ್ರೀನಗರದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಸಭೆಯಲ್ಲಿ ಸೇವಾ ವಲಯದ ಮೇಲಿನ ತೆರಿಗೆಯನ್ನು ಅಂತಿಮಗೊಳಿಸಲಾಗಿದೆ. ಜೂನ್ ಒಂದನೇ ತಾರೀಕಿನಿಂದ ಇದು ಜಾರಿಗೆ ಬರಲಿದೆ.

ಸಭೆಯ ತೀರ್ಮಾನಗಳ ಮಾಹಿತಿ ನೀಡಿದ ಕೇರಳ ಹಣಕಾಸು ಸಚಿವ ಥೋಮಸ್ ಐಸಾಕ್ ಸೇವಾ ವಲಯದಲ್ಲೂ ಸರಕು ವಲಯಗಳಂತೆ ಶೇಕಡಾ 5, 12, 18 ಹಾಗೂ 28ರಂತೆ ಒಟ್ಟು ನಾಲ್ಕು ತೆರಿಗೆ ವಿಭಾಗಗಳಿರಲಿ ಎಂದು ಮಾಹಿತಿ ನೀಡಲಿದ್ದಾರೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

GST: tax finalised on services, exempts education and healthcare

ಶಿಕ್ಷಣ, ಆರೋಗ್ಯಕ್ಕಿಲ್ಲ ಟ್ಯಾಕ್ಸ್

ಸಭೆಯಲ್ಲಿ ಜನರಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಜಿಎಸ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.[GST: ಆಹಾರೋತ್ಪನ್ನಗಳಿಗಿಲ್ಲ ಕರ, ಐಷಾರಾಮಿ ವಾಹನಗಳಿಗೆ ಸೆಸ್ ಬರೆ]

ಟೆಲಿಕಾಂ ಸೇವೆಗಳಿಗೆ ಭರ್ಜರಿ ತೆರಿಗೆ

ಆದರೆ ಟೆಲಿಕಾಂ ಸೇವೆಗಳಿಗೆ ಭರ್ಜರಿ ಶೇಕಡಾ 18 ರಷ್ಟು ತೆರಿಗೆ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.[ಜಿಎಸ್ ಟಿಗೆ ರಾಜ್ಯ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ]

ಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲೀ, ರಾಜ್ಯ ದರ್ಜೆ ಸಚಿವ ಸಂತೋಷ್ ಅಗರ್ವಾಲ್ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿ ಹಶ್ಮುಖ್ ಅಧಿಯಾ ಪಾಲ್ಗೊಂಡಿದ್ದರು.

English summary
Goods and service tax (GST) Council on Friday finalised tax rates for services, which exempts education and healthcare but decided to put 18% tax on telecom sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X