ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮೇಲ್ ಕಾಲದಲ್ಲೂ ಇನ್ ಲ್ಯಾಂಡ್ ಲೆಟರ್ ಗೆ ಬೇಡಿಕೆ ಇದೆ!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 06: ಇಮೇಲ್ ಕಾಲದಲ್ಲೂ ಇನ್ ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡ್ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

2011-12 ರಲ್ಲಿ ಶೇ 3.3 ಹಾಗೂ 2012-13ರಲ್ಲಿ ಶೇ 5.2ರಷ್ಟು ಕುಸಿತ ಕಂಡಿದ್ದ ಇನ್ ಲ್ಯಾಂಡ್ ಲೆಟರ್ ಬೇಡಿಕೆ 2013-14ರಲ್ಲಿ ಶೇ 1.1ರಷ್ಟು ಏರಿಕೆ ಕಂಡು 87.45 ಕೋಟಿ ರು ತಂದುಕೊಟ್ಟಿದೆ ಎಂದು ಸಚಿವ ರವಿಶಂಕರ್ ಹೇಳಿದರು.

ಅದರೆ, ಭಾರತೀಯ ಅಂಚೆ ಇಲಾಖೆಗೆ ಪ್ರತಿ ಪೋಸ್ಟ್ ಕಾರ್ಡ್ ಮೇಲೆ 7.03 ರು ಹಾಗೂ ಪ್ರತಿ ಇನ್ ಲ್ಯಾಂಡ್ ಲೆಟರ್ ನಿಂದ 4.93 ರು ನಷ್ಟವಾಗುತ್ತಿದೆ.

ಸ್ಟಾಂಪ್ ಗಳಿಗೆ ಬೇಡಿಕೆ: ಸುಮಾರು 18.16 ಲಕ್ಷ ಸ್ಟಾಂಪುಗಳನ್ನು 'ಮೈ ಸ್ಟಾಂಪ್' ಯೋಜನೆ ಅಡಿಯಲ್ಲಿ ಮುದ್ರಿಸಲಾಗಿದ್ದು, ಸುಮಾರು 4.57 ಕೋಟಿ ರು ಆದಾಯ ಬಂದಿದೆ.

Govt loses Rs7 per post card, Rs5 for inland letters

ಮೈ ಸ್ಟಾಂಪ್: ಅಂಚೆ ಇಲಾಖೆಯು ಗ್ರಾಹಕರಿಗೆ ಮೈ ಸ್ಟಾಂಪ್ ಎಂಬ ಹೊಸ ಸೌಲಭ್ಯವನ್ನು 2013ರಲ್ಲಿ ಆರಂಭಿಸಿತು. ಸ್ಟಾಂಪ್ ಹಾಳೆಯನ್ನು ಆಯ್ಕೆ ಮಾಡಿ. ನಿಮ್ಮದೇ ಭಾವಚಿತವನ್ನು ಮುದ್ರಿಸಿಕೊಳ್ಳಬಹುದಾಗಿತ್ತು.

ಕೇವಲ 300 ಪಾವತಿಸಿ 5 ಮುಖ ಬೆಲೆಯನ್ನು ಹೊಂದಿರುವ 12 ಅಂಚೆ ಚೀಟಿಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿತ್ತು. ಅಂಚೆ ಚೀಟಿಗಳ ಬೆಲೆಯನ್ನು ಸೀಸನ್ ಗೆ ತಕ್ಕಂತೆ ಇಳಿಕೆ ಮಾಡಿ ಯೋಜನೆಯನ್ನು ಜನಪ್ರಿಯಗೊಳಿಸಲಾಯಿತು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ

ಅಂಚೆ ಚೀಟಿ, ಕಾರ್ಡ್, ಲೆಟರ್ ಬಳಕೆಯಲ್ಲಿ ತಮಿಳುನಾಡು ರಾಜ್ಯ ಮುಂದಿದೆ ಸುಮಾರು 54.20 ಲಕ್ಷ ರು ಆದಾಯವನ್ನು ಇಲಾಖೆಗೆ ತಂದು ಕೊಟ್ಟಿದೆ. ಅರುಣಾಚಲ ಪ್ರದೇಶ, ಮಿಜೋರಾಮ್ ಹಾಗೂ ನಾಗಾಲ್ಯಾಂಡ್ ಗಳಿಂದ ಯಾವುದೇ ಆದಾಯ ಸಿಕ್ಕಿಲ್ಲ ಎಂದು ಸಂಸತ್ತಿನಲ್ಲಿ ರವಿಶಂಕರ್ ಪ್ರಸಾದ್ ವಿವರಿಸಿದರು. (ಪಿಟಿಐ)

English summary
Department of Posts incurred a loss of Rs7.03 per post card and Rs4.93 on every inland letter in 2013-14, Parliament was informed.In 2011-12 and 2012-13, there was a 3.3% and 5.2% fall in traffic of inland letters, while the same grew 1.1% to Rs87.45 crore in 2013-14
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X