ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬಿಗೆ ಕ್ವಿಂಟಾಲಿಗೆ 255 ರೂ. ಕನಿಷ್ಟ ಬೆಲೆ ನಿಗದಿ

ಕಬ್ಬಿನ ನ್ಯಾಯ ಸಮ್ಮತ ಮತ್ತು ಮೌಲ್ಯಾಧಾರಿತ ಬೆಲೆ (ಎಫ್‌ಆರ್‌ಪಿ) ಯಾಗಿ ಕ್ವಿಂಟಲ್‌ಗೆ ರೂ. 255 ನಿಗದಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 25: ಕೇಂದ್ರ ಸಚಿವ ಸಂಪುಟ ಕಬ್ಬಿಗೆ ಕ್ವಿಂಟಾಲ್ ಒಂದಕ್ಕೆ ಕನಿಷ್ಟ 255 ರೂಪಾಯಿ ಬೆಲೆ ನಿಗದಿ ಮಾಡಿದೆ. 2016-17ಕ್ಕೆ ಹೋಲಿಸಿದರೆ ಕಬ್ಬಿನ ಕನಿಷ್ಠ ಬೆಲೆಯಲ್ಲಿ ರೂ. 25 ಹೆಚ್ಚಿಸಲಾಗಿದೆ.

ಕಬ್ಬಿನ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ ಬೆಲೆ (ಎಫ್‌ಆರ್‌ಪಿ) ಯಾಗಿ ಕ್ವಿಂಟಲ್‌ಗೆ ರೂ. 255 ನಿಗದಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸಕ್ಕರೆ ಕಾರ್ಖಾನೆಗಳ ಸ್ಥಿತಿ ಈಗ ಉತ್ತಮವಾಗಿದೆ. ಈ ಕಾರಣಕ್ಕೆ ಎಫ್‌ಆರ್‌ಪಿ ಹೆಚ್ಚಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

Govt hikes sugarcane FRP to Rs. 255/quintal for 2017-18

ಒಟ್ಟಾರೆ ಕಬ್ಬಿನ ಕನಿಷ್ಟ ಬೆಲೆಯಲ್ಲಿ ಶೇಕಡಾ 10.6 ಏರಿಕೆ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ರೈತರಿಂದ ಕಾರ್ಖಾನೆಗಳು ಖರೀದಿಸುವ ಕಬ್ಬಿಗೆ ಸರಕಾರ ನಿಗದಿ ಮಾಡಿದ ಬೆಲೆ ನೀಡಲೇಬೇಕಾಗುತ್ತದೆ. ಇನ್ನು ಆಯಾ ರಾಜ್ಯ ಸರಕಾರಗಳಿಗೆ ಬೆಲೆಯನ್ನು ಹೆಚ್ಚಿಸಲು ಅವಕಾಶವಿದೆ.

ಸದ್ಯ ಕಬ್ಬು ಉತ್ಪಾದನೆಗೆ ತಗುಲುವ ವೆಚ್ಚ, ಕಬ್ಬಿಗಿರುವ ಬೇಡಿಕೆ, ಪೂರೈಕೆ, ಜತೆಗೆ ದೇಶ-ವಿದೇಶಗಳಲ್ಲಿರುವ ಬೆಲೆ ನೋಡಿ ಇದನ್ನು ನಿರ್ಧರಿಸಲಾಗಿದೆ.

English summary
The government on Wednesday decided to increase fair and remunerative price (FRP) of sugarcane to Rs.255 per quintal for 2017-18 season beginning October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X