ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ನೋಟಿನಿಂದ ಬಿತ್ತನೆ ಬೀಜ ಖರೀದಿಸಿ ರೈತರೆ

ಹಳೆ ನೋಟುಗಳಿಂದ ಕೃಷಿ ಚಟುವಟಿಕೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸಲು ಆಗದಂತೆ ಇಕ್ಕಟ್ಟಿಗೆ ಸಿಲುಕಿದ್ದ ರೈತಾಪಿ ವರ್ಗಕ್ಕೆ ಕೇಂದ್ರ ಸರಕಾರ ಕೈಹಿಡಿದಿದೆ.ಹಳೆಯ ನೋಟುಗಳಿಂದ ಕೃಷಿಗೆ ಬೇಕಾಗಿರುವ ಬಿತ್ತನೆ ಬೀಜಗಳನ್ನು ಖರೀದಿಸಬಹುದೆಂದು ಹೇಳಿದೆ

By Ramesh
|
Google Oneindia Kannada News

ನವದೆಹಲಿ, ನವೆಂಬರ್, 22 : ಐನೂರು- ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದಿಂದಾಗಿ ಕಂಗಾಲಾಗಿದ್ದ ರೈತರಿಗೆ ಸೋಮವಾರ ಕೇಂದ್ರ ಸರಕಾರ ಸಮಾಧಾನಕರ ಸುದ್ದಿ ನೀಡಿದೆ. ನಿಷೇಧಿತ ಹಳೆಯ ನೋಟುಗಳಿಂದಲೇ ರೈತರು ಬಿತ್ತನೆ ಬೀಜ ಖರೀದಿ ಮಾಡಬಹುದು ಎಂದು ಹೇಳಿದೆ.

500 ಮತ್ತು 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಬಿತ್ತನೇ ಬೀಜ ಕೇಂದ್ರಗಳಲ್ಲಿ ನೀಡಿ ಬಿತ್ತನೆ ಬೀಜ ಖರೀದಿಸಬಹುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆದರೆ, ಹಳೆಯ ನೋಟುಗಳಲ್ಲಿ ಬಿತ್ತನೆ ಬೀಜ ಖರೀದಿಸುವವರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ನೀಡಬೇಕು.[ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ]

Farmers now allowed to buy seeds with old Rs 500 notes

ಬಿತ್ತನೆ ಬೀಜಗಳನ್ನು ಸರ್ಕಾರಿ ಕೇಂದ್ರಗಳಷ್ಟೇ ಅಲ್ಲದೇ ಸರ್ಕಾರಿ ಅನುದಾನಿತ ಬಿತ್ತನೆ ಬೀಜ ಕೇಂದ್ರಗಳು, ರಾಷ್ಟ್ರೀಯ ಮತ್ತು ರಾಜ್ಯ ಬೀಜ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಿಷೇಧಿತ ನೋಟುಗಳನ್ನು ನೀಡಿ ಬೇಕಾಗಿರುವ ಬಿತ್ತನೆ ಬೀಜಗಳನ್ನು ಖರೀದಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. [ರಾಜ್ಯಕ್ಕೆ ತಲುಪಿದೆಯೇ ರು 500 ಹೊಸ ನೋಟು?]

ನೋಟು ನಿಷೇಧದಿಂದಾಗಿ ರೈತಾಪಿ ವರ್ಗ ಅನುಭವಿಸುತ್ತಿರುವ ತೊಂದರೆಗಳ ಕುರಿತು ವರದಿಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಇಲಾಖೆ ಈ ಕ್ರಮ ಕೈಗೊಂಡಿದ್ದು, ಕೃಷಿ ಚಟುವಟಿಕೆಗಳ ಮೇಲೆ ನೋಟು ನಿಷೇಧ ವ್ಯತಿರಿಕ್ತ ಪರಿಣಾಮ ಬೀರದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
The government allowed farmers on Monday to use the demonetised Rs 500 notes to buy seeds from designated government outlets, a move aimed at easing the woes of farmers in the rabi season (winter season).The farmers will have to offer ID proof.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X