ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ

By Mahesh
|
Google Oneindia Kannada News

ಬೆಂಗಳೂರು, ಡಿ. 24: ಸಂಸದರ ಮಾಸಿಕ ವೇತನವನ್ನು ದ್ವಿಗುಣಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ಪ್ರಸ್ತಾವನೆ ಜಾರಿಗೊಂಡರೆ ಹೊಸ ವರ್ಷಕ್ಕೆ ಲೋಕಸಭಾ ಸದಸ್ಯರ ವೇತನ ತಿಂಗಳಿಗೆ 2.8 ಲಕ್ಷ ರು ಗೆ ಏರಲಿದೆ.

ಲೋಕಸಭಾ ಸದಸ್ಯರ ವೇತನವನ್ನು ವಿವಿಧ ಭತ್ಯೆಗಳು ಸೇರಿದಂತೆ 2.8 ಲಕ್ಷಕ್ಕೆ ಏರಿಕೆಯಾಗುವ ಪ್ರಸ್ತಾವನೆ ಸದ್ಯಕ್ಕೆ ವಿತ್ತ ಸಚಿವಾಲಯದ ಮುಂದಿದೆ.[ಯಾರಿಗೆ ಸಾಲುತ್ತೆ ಸಂಬಳ? : ಸಂಸದ ಪ್ರತಾಪ್ ಪ್ರಶ್ನೆ]

ನಿವೃತ್ತಿ ವೇತನ (ಪಿಂಚಣಿ) ವನ್ನು ಪ್ರಸ್ತುತ ಇರುವ 20 ಸಾವಿರ ರು. ಮೊತ್ತವನ್ನು 35 ಸಾವಿರ ರು. ಗಳಿಗೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಜೊತೆಗೆ 5 ವರ್ಷಗಳ ಅವಧಿ ಪೂರೈಸಿದ ಸಂಸದರು ಹೆಚ್ಚುವರಿಯಾಗಿ 2 ಸಾವಿರ ರೂ. ಪಡೆಯಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. [ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಏರಿಕೆ ಬಂಪರ್!]

Government Mulls to double MPs’ salary to Rs 2.8 lakh a month

ಸಂಸದರ ಸಂಬಳ 50.000 ರು ನಿಂದ 1 ಲಕ್ಷ ರು ಗೆ ಏರಲಿದೆ. ಸಂಸದರ ಕ್ಷೇತ್ರ ಅಭಿವೃದ್ಧಿಗಾಗಿ ನೀಡುವ ಅನುದಾನದ ಮೊತ್ತ 45,000 ರು ನಿಂದ 90,000 ರು ಗೆ ಏರಿಸಲಾಗಿದೆ. ಕಚೇರಿ ಅನುದಾನದ ಮೊತ್ತ 45,000 ರು ನಿಂದ 90,000 ರು ಗೆ ಏರಿಸಲಾಗಿದೆ. ಇದಲ್ಲದೆ 4 ಲಕ್ಷ ರು ತನಕ ಕಾರು ಲೋನ್ ನೀಡಲಾಗುತ್ತದೆ.

ಲೋಕಸಭಾ ಸದಸ್ಯರ ವೇತನಕ್ಕಾಗಿ 292.25 ಕೋಟಿ ರು ಮೊತ್ತವನ್ನು ತೆಗೆದಿರಿಸಲಾಗಿದೆ. ರಾಜ್ಯ ಸಭಾ ಸದಸ್ಯರ ವೇತನಕ್ಕಾಗಿ 121.96 ಕೋಟಿ ರು ಮೀಸರಿಸಿಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Government Mulls to double MPs’ salary to Rs 2.8 lakh a month.The proposal, currently with the Finance Ministry, also suggests that basic pension should be raised from Rs 20,000 per month to Rs 35,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X