ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನಕ್ಕೂ ಗುನ್ನಾ ಇಡ್ತಾರಂತೆ ಮೋದಿ, ಸುದ್ದಿಯಂತೂ ಹರಿದಾಡ್ತಿದೆ

ಸದ್ಯದಲ್ಲೇ ಕೇಂದ್ರ ಸರಕಾರವು ಮನೆಗಳಲ್ಲಿ ಚಿನ್ನವನ್ನು ಸಂಗ್ರಹಿಸುವ ಪ್ರಮಾಣದಲ್ಲಿ ಮಿತಿ ವಿಧಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

|
Google Oneindia Kannada News

ನವದೆಹಲಿ, ನವೆಂಬರ್ 25: ಇನ್ನು ಮುಂದೆ ಒಬ್ಬರು ಇಷ್ಟೇ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಂತ ಕಾನೂನು ಬಂದರೆ ಹೇಗಿರುತ್ತದೆ. ಇದ್ಯಾವುದೋ ಉಪೇಂದ್ರ ಸಿನಿಮಾದ ಸೀನ್ ಇದ್ದ ಹಾಗಿದೆ ಅಂತ ನಿಮಗೆ ಅನ್ನಿಸಿದರೆ, ಹೌದು, ಇಂಥವೆಲ್ಲ ಉಪೇಂದ್ರ ಸಿನಿಮಾದಲ್ಲೂ ಇರುತ್ತೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇಂಥ ಐಡಿಯಾ ಇರುತ್ತೆ ಅನ್ನಿಸೋ ಕಾಲ ದೂರ ಇಲ್ಲ ಎನ್ನುತ್ತಿವೆ ವರದಿಗಳು.

ಸದ್ಯದಲ್ಲೇ ಕೇಂದ್ರ ಸರಕಾರವು ಮನೆಗಳಲ್ಲಿ ಚಿನ್ನವನ್ನು ಸಂಗ್ರಹಿಸುವ ಪ್ರಮಾಣದಲ್ಲಿ ಮಿತಿ ವಿಧಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ವಾರ ಚಿನ್ನವನ್ನು ವಿಪರೀತ ಹೆಚ್ಚಿನ ಬೆಲೆ ಕೊಟ್ಟು ಜನರು ಖರೀದಿಸಿದ್ದಾರೆ. ಎಲ್ಲರೂ ಅಂತಲ್ಲ, ತಮ್ಮ ಬಳಿಯಿರುವ ಕಪ್ಪು ಹಣವನ್ನು ಬದಲಾಯಿಸಿಕೊಳ್ಳಬೇಕು ಅಂದುಕೊಂಡವರು ಹೀಗೆ ಮಾಡಿದ್ದಾರೆ.[ನಗದು ಅಪಮೌಲ್ಯ : ಒನ್ಇಂಡಿಯಾ ಜನ-ಗಣ-ಮನ ದರ್ಪಣ]

Government may impose curbs on domestic gold holdings

500, 1000 ನೋಟುಗಳ ರದ್ದು ಮಾಡಿದ ನಂತರ ಚಿನ್ನದ ಆಮದು ಕೂಡ ಬಿಗಿ ಅಗಬಹುದು ಎಂಬ ಆತಂಕ ಕೂಡ ಬೆಲೆ ಏರಿಕೆ ಹಿಂದೆ ಕೆಲಸ ಮಾಡಿತ್ತು. ಭಾರತ ಚಿನ್ನ ಖರೀದಿಯಲ್ಲಿ ಎರಡನೇ ಅತಿ ದೊಡ್ಡ ದೇಶ. ಒಟ್ಟಾರೆ ಚಿನ್ನದ ಬೇಡಿಕೆಯ ಮೂರನೇ ಒಮ್ದು ಭಾಗದ ಪ್ರಮಾಣವಾದ ಸಾವಿರ ಟನ್ ಚಿನ್ನ ಖರೀದಿ ಕಪ್ಪು ಹಣದಲ್ಲೇ ನಡೆಯುತ್ತದೆ ಎಂಬುದು ಅಂದಾಜು ಲೆಕ್ಕಾಚಾರ.[ನೋಟು ಬದಲಿಸಲು ಶೇ 30 ಕಮಿಷನ್: ಬ್ಯಾಂಕ್ ನೌಕರ ಅಮಾನತು]

ಸದ್ಯದ ಸರಕಾರದ ನದೆಯಿಂದ ನಗದು ಮೂಲಕ ನಡೆಯುತ್ತಿದ್ದ ಚಿನ್ನದ ಕಳ್ಳ ಸಾಗಣೆಗೆ ಸರಿಯಾದ ಹೊಡೆತವನ್ನು ಕೊಟ್ಟಿದೆ. ಚಿನ್ನದ ಬೆಲೆ ಕುಸಿಯುತ್ತಿರುವುದರಿಂದ ಗಟ್ಟಿಗಳನ್ನು ಇಟ್ಟುಕೊಂಡಿದ್ದವರಿಗೆ ಈಗ ಅದನ್ನು ನಗದೀಕರಿಸುವುದು ಕಷ್ಟವಾಗಿ ಪರಿಣಮಿಸಿದೆ. ಆದರೆ ಚಿನ್ನದ ಸುದ್ದಿಗೆ ಹೋಗುವ ಪ್ರಸ್ತಾವ ಏನಿಲ್ಲ ಎಂದು ವಿತ್ತ ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ.

English summary
The government may impose curbs on domestic holdings of gold, as Prime Minister Narendra Modi intensifies a fight against black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X