ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೆಕ್ಟ್ರಂ ಹರಾಜು: ಸರ್ಕಾರಕ್ಕೆ 1.1 ಲಕ್ಷ ಕೋಟಿ ಆದಾಯ

|
Google Oneindia Kannada News

ನವದೆಹಲಿ, ಮಾ. 26: ತರಂಗಾಂತರ ಹರಾಜು ಅಂತಿಮಗೊಳಿಸಲು ಕೇಂದ್ರ ಸರ್ಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮಾರ್ಚ್ ತಿಂಗಳ ಆರಂಭದಲ್ಲೇ ತರಂಗಾಂತರ ಹಂಚಿಕೆ ಪ್ರಕ್ರಿಯೆ ಆರಂಭವಾಗಿತ್ತು.

ಹರಾಜು ಅಂತಿಮಗೊಳಿಸುವುದು ಮತ್ತು ಬಿಡ್ ಯಾರ ಪಾಲಾಗಿದೆ ಎಂಬುದನ್ನು ಬಹಿರಂಗ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

supreme court

ಟೆಲಿಕಾಂ ಹರಾಜು ಆರಂಭವಾದ 19 ದಿನಗಳ ಬಳಿಕ ಬುಧವಾರ ಅಂತಿಮಗೊಂಡಿತು. ಕಣದಲ್ಲಿರುವ ಎಂಟು ಮಂದಿ ಅಂದಾಜು 1,10,000 ಕೋಟಿ ರೂಪಾಯಿಗಳ ಬಿಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೋಲ್ ಇಂಡಿಯಾ ಷೇರಿಗಳನ್ನು ಹರಾಜು ಮಾಡಿ ಅಪಾರ ಆದಾಯ ಸಂಗ್ರಹ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ತರಂಗಾಂತರ ಹಂಚಿಕೆಯಿಂದಲೂ ಹಣ ಸಂಗ್ರಹಿಸಿದೆ.

ಹರಾಜಿನಲ್ಲಿ ಏರ್‌ಟೆಲ್‌, ವೊಡಾಫೋನ್‌, ರಿಲಯನ್ಸ್‌ ಕಮ್ಯುನಿಕೇಷನ್‌ಗಳು ತಾವು ಹೊಂದಿದ್ದ ಹಿಂದಿನ ತರಂಗಾಂತರಗಳನ್ನು ಉಳಿಸಿಕೊಳ್ಳಲು ಪಾಲ್ಗೊಂಡರೆ, ರಿಲಯನ್ಸ್‌ ಜಿಯೋ, ಟಾಟಾ ಟೆಲಿ ಸರ್ವೀಸಸ್‌, ಟೆಲಿವಿಂಗ್ಸ್‌ (ಯೂನಿನಾರ್‌) ಮತ್ತು ಏರ್‌ಸೆಲ್‌ಗ‌ಳು ಹೆಚ್ಚುವರಿ ಸ್ಪೆಕ್ಟ್ರಂ ಪಡೆಯಲು ಪಾಲ್ಗೊಂಡಿದ್ದವು.[OMG: ದಾಖಲೆ ಮೊತ್ತಕ್ಕೆ ಹರಾಜಾಯಿತು ಮೋದಿ ಸೂಟ್]

ಈಗ ಬಿಡ್ಡಿಂಗ್‌ನಲ್ಲಿ ತರಂಗಾಂತರ ವಿಜೇತರಾಗಿರುವ ಕಂಪನಿಗಳು, ಬಿಡ್ಡಿಂಗ್‌ ಮುಗಿದ 10 ದಿನದೊಳಗೆ ಶೇ.33ರಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು. ಉಳಿದ ಹಣವನ್ನು ಮುಂದಿನ 12 ವರ್ಷ ಅವಧಿಯಲ್ಲಿ (ಮೊದಲೆರಡು ವರ್ಷ ವಿನಾಯಿತಿ- ಬಾಕಿ 10 ವರ್ಷ ಕಾಲ ವಾರ್ಷಿಕ ಕಂತು) ನೀಡಬೇಕು.

ಈ ಹಣವನ್ನು ಆರ್ಥಿಕ ಅಭಿವೃದ್ಧಿಗೆ ಬಳಸುವಂತೆ ಸುಪ್ರೀಂ ಕೋರ್ಟ್ ಅಟರ್ನಿ ಜನರಲ್ ತಿಳಿಸಿದ್ದಾರೆ. ಆದರೆ ಕೆಲವೊಂದು ಟೆಲಿಕಾಂ ಕಂಪನಿಗಳು ನ್ಯಾಯಾಲಯಕ್ಕೆ ದೂರನ್ನು ದಾಖಲಿಸಿದ್ದು ಹರಾಜು ಏಕಪಕ್ಷೀಯವಾಗುತ್ತು ಎಂದು ಆರೋಪಿಸಿವೆ.

English summary
The Supreme Court on Thursday allowed the government to announce the winners of the spectrum auction that concluded on Wednesday. The auction has garnered nearly Rs 1.10 lakh crore. The government wants to realise this amount in the current financial year to reduce its fiscal deficit, Attorney General Mukul Rohatgi told the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X