ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಖ್ ಪುರ್ ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ: ವರದಿ

By ವಿಕಾಸ್ ನಂಜಪ್ಪ
|
Google Oneindia Kannada News

ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಸಂಭವಿಸಿದ ಮೂವತ್ತು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ನಡೆಸಿದ ತನಿಖೆಯ ವರದಿ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಆಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯದಿಂದ ಮೂವತ್ತು ಮಕ್ಕಳು, ಅದರಲ್ಲೂ ಬಹುತೇಕ ನವಜಾತ ಶಿಶುಗಳು ಮೃತಪಟ್ಟಿದ್ದವು ಎಂದು ಆರೋಪಿಸಲಾಗಿತ್ತು.

ಗೋರಖಪುರ ದುರಂತ: ಯುಪಿ ಸರಕಾರಕ್ಕೆ ಮಾನವ ಹಕ್ಕು ಆಯೋಗದಿಂದ ನೋಟಿಸ್ಗೋರಖಪುರ ದುರಂತ: ಯುಪಿ ಸರಕಾರಕ್ಕೆ ಮಾನವ ಹಕ್ಕು ಆಯೋಗದಿಂದ ನೋಟಿಸ್

ವೈದ್ಯರ ನಿರ್ಲಕ್ಷ್ಯ, ಸಮನ್ವಯತೆ ಕೊರತೆಯಿಂದ ಇಂಥ ಅನಾಹುತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಗುರುವಾರ ಹಾಗೂ ಶುಕ್ರವಾರದ ಮೂವತ್ತಾರು ಗಂಟೆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲಿ ವ್ಯತ್ಯಯವಾಗಿ ಮಕ್ಕಳು ಮೃತಪಟ್ಟಿದ್ದವು ಎಂದು ಆರೋಪಿಸಲಾಗಿತ್ತು.

Gorakhpur tragedy: Lack of coordination, laxity led to children deaths says report

ಘಟನೆ ಬಗ್ಗೆ ಗೋರಖ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿದ್ದರು. ಒಂದು ವೇಳೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ದರೆ ಮಕ್ಕಳನ್ನು ಉಳಿಸಬಹುದಿತ್ತು ಎಂದು ಹೇಳಲಾಗಿದೆ. ಇದೇ ವೇಳೆ ವೈದ್ಯರ ಮಧ್ಯೆ ಸಮನ್ವಯತೆ ಕೊರತೆ ಇತ್ತು ಎಂದು ಕೂಡ ಆರೋಪಿಸಲಾಗಿದೆ.

ಮಕ್ಕಳ ಮಾರಣಹೋಮ ನಡೆದಿದ್ದ ಗೋರಖಪುರ್ ಆಸ್ಪತ್ರೆಗೆ ಯೋಗಿ ಭೇಟಿಮಕ್ಕಳ ಮಾರಣಹೋಮ ನಡೆದಿದ್ದ ಗೋರಖಪುರ್ ಆಸ್ಪತ್ರೆಗೆ ಯೋಗಿ ಭೇಟಿ

ಆಸ್ಪತ್ರೆಯಲ್ಲಿ ದ್ರವ ರೂಪದ ಆಮ್ಲಜನಕದ ಕೊರತೆಯಿತ್ತು. ಪರಿಸ್ಥಿತಿ ನಿಭಾಯಿಸಬೇಕಾದ ಇಬ್ಬರು ಹಿರಿಯ ವೈದ್ಯರು ಏಕಕಾಲಕ್ಕೆ ಆಸ್ಪತ್ರೆ ಬಿಟ್ಟು ಹೊರಟಿದ್ದಾರೆ. ಆಸ್ಪತ್ರೆ ಆವರಣ ಬಿಡುವ ಮುನ್ನ ಇದಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಅದರಲ್ಲೂ ಕಳೆದ ಕೆಲ ದಿನಗಳಿಂದಲೇ ದ್ರವ ರೂಪದ ಆಮ್ಲಜನಕದ ಕೊರತೆ ಕಾಣಿಸಿಕೊಂಡಿತ್ತು. ವಿವಿಧ ವಿಭಾಗಗಳ ವೈದ್ಯರ ಮಧ್ಯದ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದ ಹಾಗೆ ವೈದರನ್ನು ಅಮಾನತು ಮಾಡಿ, ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿದೆ.

English summary
A report prepared following a probe into the Gorakhpur tragedy in which 30 children died has blamed the doctors for the incident. The report found that it was the laxity on part of the doctors which led to the death of the children allegedly due to shortage of oxygen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X