ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್ ಸಿಗ್ನಲ್ ಲೈಟಿಗೆ ಗೂಗಲ್ ಡೂಡ್ಲ್ ನಮನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 05: 'ಯಾವನ್ಲ ಅವನು ಟ್ರಾಫಿಕ್ ಸಿಗ್ನಲ್ ಕಂಡು ಹಿಡದವನು?' ಎಂದು ಸಿಗ್ನಲ್ ನಲ್ಲಿ ವಾಹನ ಸವಾರರು ಹಿಡಿಶಾಪ ಹಾಕುವುದನ್ನು ಕೇಳಿರಬಹುದು. ಆದರೆ, ಇಂದು(ಆಗಸ್ಟ್ 4) ಟ್ರಾಫಿಕ್ ಸಿಗ್ನಲ್ ಲೈಟ್ ಗೆ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಕೂಡಾ ನಮನ ಸಲ್ಲಿಸಿದೆ. ಸಿಗ್ನಲ್ ಲೈಟ್ ವಿನ್ಯಾಸಗಾರರನ್ನು ಗೂಗಲ್ ಡೂಡ್ಲ್ ಮೂಲಕ ಸ್ಮರಿಸಲಾಗಿದೆ.

ನಾಗರೀಕ ಸಮಾಜದಲ್ಲಿ ದಿನ ನಿತ್ಯ ವಾಹನ ಸವಾರರಿಗೆ ಎದುರಾಗುವ ವಿದ್ಯುತ್ ಚಾಲಿತ ಟ್ರಾಫಿಕ್ ಲೈಟ್ ಗಳು ಮೊದಲ ಬಾರಿಗೆ 1914ರ ಆಗಸ್ಟ್ 05ರಂದು ಅಮೆರಿಕದ ಓಹಿಯೋ ಪ್ರಾಂತ್ಯದ ಕ್ಲೀವ್ ಲ್ಯಾಂಡ್‌ನಲ್ಲಿನ ಪೂರ್ವ 105ನೇ ಬೀದಿಯಲ್ಲಿ ಅಳವಡಿಸಲಾಯಿತು ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿತ್ತು.

ಇದಕ್ಕೂ ಮುನ್ನ 1912ರಲ್ಲಿ ಲೆಸ್ಟರ್ ಮೈಕ್ ಎಂಬ ವ್ಯಕ್ತಿ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಸಿಗ್ನಲ್ ಲೈಟ್ ಗಳನ್ನು ಯುಥಾ ಪ್ರಾಂತ್ಯದ ಸ್ಟಾಲ್ ಲೇಕ್ ಸಿಟಿಯಲ್ಲಿ ಅಳವಡಿಸಿದ್ದರು.

ವಾಹನಗಳ ಸಂಚಾರ ನಿಯಂತ್ರಿಸಲು ಕೆಂಪು ಮತ್ತು ಹಸಿರು ದೀಪಗಳನ್ನು ವೈರ್ ಬಳಸಿದ ಟ್ರಾಫಿಕ್ ಸಿಗ್ನಲ್ ಲೈಟ್ ನಂತರ ಪರಿಷ್ಕರಣೆಗೊಂಡು ಬೆಳೆದು ಬಂದ ರೀತಿ ತಿಳಿಯ ಬೇಕಾದರೆ ಗೂಗಲ್ ಮುಖ್ಯಪುಟಕ್ಕೆ ಹೋಗಿ ಅಲ್ಲಿರುವ ಟ್ರಾಫಿಕ್ ಸಿಗ್ನಲ್ ಡೂಡ್ಲ್ ಕ್ಲಿಕ್ ಮಾಡಿ.

ಟ್ರಾಫಿಕ್ ಸಿಗ್ನಲ್ ಲೈಟ್‌ನ 101ನೇ ವಾರ್ಷಿಕೋತ್ಸವ ಈ ದಿನ ಸ್ಮರಣೀಯವಾಗಲು ಸಾಮಾನ್ಯ ಪೇದೆ ಲೆಸ್ಟರ್‌ವೈಕ್ ಕಾರಣ ಎಂಬುದನ್ನು ಮರೆಯುವಂತಿಲ್ಲ.

ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 900ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Google Doodle on Wednesday, Aug 5, celebrated the first electric traffic signal with special animated G-O-O-G-L-E text depicted on the vehicles on the streets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X