ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮನೆಯಲ್ಲಿ ಮತ್ತೆ ಎರಡು ನಿಮಿಷಕ್ಕೆ ಅಡುಗೆ ಸಿದ್ಧ!

|
Google Oneindia Kannada News

ನವದೆಹಲಿ, ಆ. 05: ಮ್ಯಾಗಿ ಪ್ರಿಯರಿಗೆ, ಮಕ್ಕಳಿಗೆ, ಗೃಹಿಣಿಯರಿಗೆ, ಬ್ಯಾಚುಲರ್ ಗಳಿಗೆ ಎಲ್ಲರಿಗೂ ಸಂತಸದ ಸುದ್ದಿಯೊಂದಿದೆ. ನಿಷೇಧಗೊಂಡಿದ್ದ ಮ್ಯಾಗಿಯಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇಲ್ಲವಂತೆ!

ಮ್ಯಾಗಿ ನೂಡಲ್ಸ್ ನ್ನು ಪರೀಕ್ಷೆ ಮಾಡಿರುವ ಕೇಂದ್ರ ಆಹಾರ ತಾಂತ್ರಿಕ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್​ಟಿಆರ್​ಐ) ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳು ಇಲ್ಲ ಎಂದು ವರದಿ ನೀಡಿದೆ. ಭಾರತದ ಮಾರುಕಟ್ಟೆಗೆ ಮತ್ತೆ ಎರಡು ನಿಮಿಷದ ಅಡುಗೆ ಕಾಲಿಡುವುದು ಬಹುತೇಕ ಖಚಿತವಾಗಿದೆ.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]

maggi

ನಿಗದಿಪಡಿಸಿರುವ ಮಿತಿಯಲ್ಲಿ ಸೀಸದ ಅಂಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವರದಿಯಲ್ಲಿ ತಿಳಿಸಲಾಗಿದೆ. ಮೈಸೂರಿನಲ್ಲಿರುವ ಸಿಎಫ್​ಟಿಆರ್​ಐ ಸಂಸ್ಥೆಗೆ ಗೋವಾ ಆಹಾರ ಮತ್ತು ಔಷಧ ಮಂಡಳಿ(ಎಫ್​ಡಿಎ) 5 ಮಾದರಿಗಳನ್ನು ಕಳುಹಿಸಿಕೊಟ್ಟಿತ್ತು.

ವಿವಾದದ ಧೂಳೆಬ್ಬಿಸಿದ್ದ ಮ್ಯಾಗಿಗೆ ಎರಡು ತಿಂಗಳ ಹಿಂದೆ ಅಧಿಕೃತ ನಿಷೇಧ ಹೇರಲಾಗಿತ್ತು. ಅಲ್ಲದೇ ಸಂಸ್ಥೆ ವ್ಯಾಪಾರವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದುಕೊಂಡಿತ್ತು. ಅಪಾರ ಪ್ರಮಾಣದ ಮ್ಯಾಗಿಯನ್ನು ನಾಶ ಮಾಡಲಾಗಿತ್ತು.[ಮ್ಯಾಗಿ ಬಗ್ಗೆ ಬಗೆ ಬಗೆಯ ಕಮೆಂಟುಗಳು]

ನಂತರ ನೆಸ್ಲೆ ಸಂಸ್ಥೆ ಮ್ಯಾಗಿಯನ್ನು ಮತ್ತೆ ಪರಿಶೀನೆ ಮಾಡಬೇಕು ಎಂದು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ಪರಿಶೀಲನೆ ಫಲಿತಾಂಶ ಹೊರಬಿದ್ದಿದ್ದು ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳಿಲ್ಲ ಎಂದು ವರದಿ ನೀಡಲಾಗಿದೆ.

English summary
In a major boost to Nestle India, FSSAI-approved laboratory of Central Food Technological Research Institute (CFTRI) has found Maggi noodles to be in compliance with the country's food safety standards.CFTRI had tested five samples sent by Goa Food and Drug Administration (FDA) when Maggi was banned in June in the wake of findings in Uttar Pradesh and other states that the instant noodles brand had lead levels beyond permissible limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X