ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ ಕಣ್ಮರೆ

ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ (66) ಕಣ್ಮರೆಯಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಬಹುಕಾಲದಿಂದ ಡಯಾಲಿಸಿಸ್ ನಲ್ಲಿದ್ದರು.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 23 : ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ (66) ಕಣ್ಮರೆಯಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಬಹುಕಾಲದಿಂದ ಡಯಾಲಿಸಿಸ್ ನಲ್ಲಿದ್ದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಚಂದ್ರಸ್ವಾಮಿ ಅವರ ಹೆಸರು ಕೇಳಿ ಬಂದಿತ್ತು.ಹಣ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ರಾಜಸ್ಥಾನಿ ಮೂಲದ ವ್ಯಕ್ತಿಯೊಬ್ಬನ ಮಗನಾದ ನೇಮಿ ಚಂದ್ ತಾಂತ್ರಿಕನಾಗಿ, ವಿವಾದಿತ ವ್ಯಕ್ತಿಯಾಗಿ, ಸ್ವಯಂಘೋಷಿತ ದೇವಮಾನವನಾಗಿ, ರಾಜಕೀಯ ಮುಖಂಡರ ಗುರುವಾಗಿ ಬೆಳೆದವರು.

Godman Chandraswami has passed away.

ರಾಜೀವ್ ಗಾಂಧಿ ಹತ್ಯೆ ಸಂಚಿನಲ್ಲೂ ಚಂದ್ರಸ್ವಾಮಿ ಹೆಸರು ಬಲವಾಗಿ ಕೇಳಿ ಬಂದಿತ್ತು. ತನ್ನ ಅಂತಾರಾಷ್ಟ್ರೀಯ ಸಂಪರ್ಕ, ಶಸ್ತ್ರಾಸ್ತ್ರ, ವಾಣಿಜ್ಯ ಡೀಲ್ ಮೂಲಕ ಎಲ್ ಟಿಟಿಐ ಸಂಘಟನೆಗೆ ನೆರವಾಗುತ್ತಿದ್ದರು.

1997ರಲ್ಲಿ ರಾಜೀವ್ ಗಾಂಧಿ ಹತ್ಯೆ ಕೇಸ್ ನಲ್ಲಿ ಸ್ವಾಮಿ ಭಾಗಿಯಾಗಿರುವ ಬಗ್ಗೆ ಐಐಸಿಸಿ ವಕೀಲ ಆರ್ ಎನ್ ಮಿತ್ತಲ್ ಆರೋಪಿಸಿದ್ದರು. ತನಿಖೆ ನಡೆಸುತ್ತಿದ್ದ ಜೈನ್ ಆಯೋಗದ ಮುಂದೆ ಕೂಡಾ ಇದೇ ವಾದ ಮಂಡಿಸಲಾಗಿತ್ತು.

ಚಂದ್ರಸ್ವಾಮಿ ಬಂಧನವಾದರೂ ನಂತರ ಬಿಡುಗಡೆಗೊಂಡಿದ್ದರು. ಇದಲ್ಲದೆ ಹಲವಾರು ವಿದೇಶಿ ವಿನಿಮಯ ಕಾಯ್ದೆ (ಎಫ್ ಇಎಂ ಕಾಯ್ದೆ) ಉಲ್ಲಂಘನೆ ಆರೋಪವನ್ನು ಸ್ವಾಮಿ ಮೇಲೆ ಜಾರಿ ನಿರ್ದೇಶಾನಲಯ ಹೊರೆಸಿತ್ತು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆಧಾತ್ಮ ಸಲಹೆಗಾರ ಎನಿಸಿಕೊಂಡಿದ್ದ ಸ್ವಾಮಿ, ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದವರು.

English summary
Godman Chandraswami has passed away. He was 66. Chandraswami was on dialysis. Recently he suffered a stroke followed by severe sepsis and developed Multi-Organ failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X