ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧ್ರೋತ್ತರ ಹತ್ಯಾಕಾಂಡ, ಮೋದಿಗೆ ಕ್ಲೀನ್ ಚಿಟ್

By Mahesh
|
Google Oneindia Kannada News

ಗಾಂಧಿನಗರ, ನ.20: 2002ರ ಗೋಧ್ರಾ ಹತ್ಯಾಕಾಂಡ ನಂತರ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರಿಗೆ ತನಿಖಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ನ್ಯಾ.ನಾನಾವತಿ ಆಯೋಗ ಹಾಲಿ ಸಿಎಂ ಆನಂದಿಬೇನ್ ಅವರಿಗೆ ಸಲ್ಲಿಸಿದೆ.

ಗೋಧ್ರೋತ್ತರ ಗಲಭೆಯಲ್ಲಿ ಅಂದಿನ ಸಿಎಂ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಯಾವುದೇ ರೀತಿ ಹಸ್ತಕ್ಷೇಪ ಮಾಡಿರುವ ಬಗ್ಗೆ ಸಾಕ್ಷ್ಯಗಳು ದೊರೆತಿಲ್ಲ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವರಿಗೆ ಸಮನ್ಸ್ ನೀಡುವ ಅಗತ್ಯವಿಲ್ಲ ಎಂದು ಹಾಲಿ ಸಿಎಂ ಆನಂದಿ ಬೇನ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿ ಹೇಳಿದೆ.

ಸುದೀರ್ಘ 12 ವರ್ಷಗಳ ವಿಚಾರಣೆ ಬಳಿಕ ನಾನಾವತಿ ಆಯೋಗ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಅವರಿಗೆ ಈ ವರದಿಯನ್ನು ಸಲ್ಲಿಸಿದೆ. ಜಸ್ಟೀಸ್ ನಾನಾವತಿ ಅಲ್ಲದೆ ಗುಜರಾತಿನ ನಿವೃತ್ತ ಹೈಕೋರ್ಟ್ ಜಡ್ಜ್ ಅಕ್ಷಯ್ ಮೆಹ್ತಾ ಅವರು ಸಮಿತಿಯಲ್ಲಿದ್ದರು.

Godhra riots: Nanavati report gives clean chit to Narendra Modi

ಕೆ.ಆರ್ ನಾರಾಯಣನ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾ.ನಾನಾವತಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಚು ನಡೆದಿದೆ ಎನ್ನುವುದಾದರೆ ಅದಕ್ಕೆ ತಕ್ಕ ಪುರಾವೆಗಳಿರಬೇಕು, ಇಲ್ಲದಿದ್ದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಪರಿಗಣಿಸಲಾಗುವುದು ಎಂದಿದ್ದಾರೆ.

2005ರಲ್ಲಿ ಮಲೆಯಾಳಂ ಪತ್ರಿಕೆ ಮಾನವ ಸಂಸ್ಕೃತಿ ಜೊತೆ ಮಾತನಾಡಿದ್ದ ಮಾಜಿ ರಾಷ್ಟ್ರಪತಿ ಕೆಆರ್ ನಾರಾಯಣನ್ ಅವರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಘಟನೆ ಬಗ್ಗೆ ಕ್ರಮ ಜರುಗಿಸುವಂತೆ ಸಾಕಷ್ಟು ಪತ್ರ ಬರೆದಿದ್ದೆ ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದಿದ್ದರು. ಈ ಬಗ್ಗೆ ತನಿಖೆ ನಡೆಸಿದ ನಾನಾವತಿ ಆಯೋಗ 2008ರಲ್ಲೇ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

ಇದೀಗ 12 ವರ್ಷಗಳ ತನಿಖೆ ನಂತರ 50,000ಕ್ಕೂ ಅಧಿಕ ಅಫಿಡವಿಟ್ ಗಳು 2000ಕ್ಕೂ ಪುಟಗಳ ವಿವರಣೆ 10 ಸಂಪುಟದಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ತನಿಖಾ ಆಯೋಗ ಸಲ್ಲಿಸಿದೆ.

English summary
Justice (retd) GT Nanavati has indicated that he did not find any justification to summon the then chief minister Narendra Modi to examine his role in the Gujarat riots of 2002, even though the CM and his Cabinet were included in his probe commission’s terms of reference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X