ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬಿಜೆಪಿ ಮುಖ್ಯಮಂತ್ರಿ ಪರ್ಸೇಕರ್ ಗೆ ಭಾರೀ ಮುಖಭಂಗ

ಗೋವಾದಲ್ಲಿ ಬಿಜೆಪಿ ದಂಡನಾಯಕರೇ ಚುನಾವಣೆ ಸೋತಿದ್ದಾರೆ. ಹಾಲಿ ಬಿಜೆಪಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಮುಖಭಂಗ ಅನುಭವಿಸಿದ್ದು ಹೆಚ್ಚಿನ ಮತಗಳ ಅಂತರದಲ್ಲಿ ಮ್ಯಾಂಡ್ರೆಂನಲ್ಲಿ ಸೋಲು ಕಂಡಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 11: ಗೋವಾದಲ್ಲಿ ಬಿಜೆಪಿ ದಂಡನಾಯಕರೇ ಚುನಾವಣೆ ಸೋತಿದ್ದಾರೆ. ಹಾಲಿ ಬಿಜೆಪಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಮುಖಭಂಗ ಅನುಭವಿಸಿದ್ದು ಹೆಚ್ಚಿನ ಮತಗಳ ಅಂತರದಲ್ಲಿ ಮ್ಯಾಂಡ್ರೆಂನಲ್ಲಿ ಸೋಲು ಕಂಡಿದ್ದಾರೆ.

ಅವರ ಪಕ್ಷ ಬಿಜೆಪಿಯೂ ಸೋಲಿನತ್ತ ಮುಖ ಮಾಡಿದ್ದು ಅವರಿಗೆ ಇನ್ನೊಂದು ಆಘಾತ ಕಾದಿದೆ. ಮ್ಯಾಂಡ್ರೆಂ ಕ್ಷೇತ್ರದಲ್ಲಿ ಲಕ್ಷ್ಮೀಕಾಂತ್ ಪರ್ಸೇಕರ್ ಕಾಂಗ್ರೆಸಿನ ದಯಾನಂದ್ ರಘುನಾಥ್ ಸೋಪ್ಟೆ ವಿರುದ್ಧ ಸೋಲು ಕಂಡಿದ್ದಾರೆ.[LIVE ಗೋವಾ: ಹೀನಾಯ ಸೋಲಿನತ್ತ ಮುಖ್ಯಮಂತ್ರಿ ಪರ್ಸೇಕರ್]

Goa Election Result 2017 Live: Chief Minister Lakshmikanth Parsekar Lost in Mandrem

2014ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಕೇಂದ್ರ ಸಚಿವರಾದ ಬಳಿಕ ಲಕ್ಷ್ಮೀಕಾಂತ್ ಪರ್ಸೇಕರ್ ಮುಖ್ಯಮಂತ್ರಿಯಾಗಿ ಹುದ್ದೆ ವಹಿಸಿಕೊಂಡಿದ್ದರು. ನವೆಂಬರ್ 8, 2014ರಲ್ಲಿ ಮುಖ್ಯಮಂತ್ರಿಯಾದ ಪರ್ಸೇಕರ್ ಹಲವು ಅಡೆತಡೆಗಳ ಮಧ್ಯೆಯೂ ಆಡಳಿತ ನಡೆಸಿದ್ದರು.

ಹಿನ್ನಲೆ

ಪರ್ಸೇಕರ್ 1988ರಲ್ಲಿ ಮಹರಾಷ್ಟ್ರವಾದಿ ಗೋಮಂತಕ್ ಪಕ್ಷದ ರಮಾಕಾಂತ್ ಖಲಾಪ್ ಅವರನ್ನು ಮ್ಯಾಂಡ್ರಂನಲ್ಲಿ ಸೋಲಿಸಿ ಮೊದಲ ಬಾರಿಗೆ ಪರ್ಸೇಕರ್ ವಿಧಾನಸಭೆಗೆ ಪ್ರವೇಶಿಸಿದ್ದರು. ನಂತರ ಸತತ ಗೆಲುವುಗಳನ್ನು ಕಾಣುವ ಮೂಲಕ ಪರ್ಸೇಕರ್ ಬಿಜೆಪಿಯ ಪ್ರಭಾವಿ ನಾಯಕರಾಗಿ ಬೆಳೆದು ಬಂದಿದ್ದರು. ಮಧ್ಯದಲ್ಲಿ 1999ರಲ್ಲೊಮ್ಮೆ ಅಷ್ಟೆ ಅವರು ಸೋಲು ಕಂಡಿದ್ದರು.

ವಿಚಿತ್ರವೆಂದರೆ ಸಾಮಾನ್ಯ ನಾಯಕರಾಗಿ ಗೆಲುವು ಕಾಣುತ್ತಾ ಬಂದಿದ್ದ ಪರ್ಸೇಕರ್ ಮುಖ್ಯಮಂತ್ರಿಯಾಗಿ ಸ್ವಕ್ಷೇತ್ರದಲ್ಲೇ ಸೋತು ಮುಖಭಂಗ ಅನುಭವಿಸಿದ್ದಾರೆ.

English summary
Goa Election Result 2017 Live. Here are the updates for Goa Assembly Election Results 2017. Chief Minister lakshmikanth Parsekar lost against Dayanand Raghunath Sopte in Mandrem
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X