ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂನಲ್ಲಿ ಮನೋಹರ್ 'ರಕ್ಷಣೆ'ಗೆ ನಿಂತ ಆಂಶಗಳು ಯಾವುವು?

ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮಾರ್ಚ್ 16ರಂದು ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 14: ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮಾರ್ಚ್ 16ರಂದು ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದೆ. ಮನೋಹರ್ ಪರಿಕ್ಕರ್ ಅವರ 'ರಕ್ಷಣೆ' ಗೆ ನಿಂತ ಅಂಶಗಳು ಯಾವುದು? ಸುಪ್ರೀಂಕೋರ್ಟಿನಲ್ಲಿ ನಡೆದ ವಾದ -ವಿವಾದಗಳ ಸಂಪೂರ್ಣ ವಿವರ ಇಲ್ಲಿದೆ...

ನಿಮ್ಮ (ಕಾಂಗ್ರೆಸ್) ಬಳಿ ಸರ್ಕಾರ ರಚನೆಗೆ ಬೇಕಾದ ಸ್ಥಾನಗಳಿಲ್ಲದ ಕಾರಣ ನಿಮಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿಲ್ಲ. ನೀವು ಕೂಡಾ ಸರ್ಕಾರ ರಚಿಸುವ ಯತ್ನವನ್ನು ಮಾಡಿಲ್ಲ ಎಂದು ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ತಮ್ಮ ಆದೇಶದಲ್ಲಿ ಹೇಳಿದರು.

ಗೋವಾದಲ್ಲಿ ಅತಂತ್ರ ವಿಧಾನಸಭೆ ಸ್ಥಿತಿ ಉಂಟಾದ ಹಿನ್ನಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಕಾಂಗ್ರೆಸಿಗೆ ಸರ್ಕಾರ ರಚಿಸಲು ರಾಜ್ಯಪಾಲೆ ಮೃದ್ದುಲಾ ಸಿನ್ಹಾ ಅವರು ಆಹ್ವಾನ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಎರಡನೇ ಸ್ಥಾನದಲ್ಲಿರುವ ಬಿಜೆಪಿ, ಪ್ರಾದೇಶಿಕ ಪಕ್ಷಗಳ ನೆರವಿನಿಂದ ಅಧಿಕಾರ ಸ್ಥಾಪಿಸಲು ಹಕ್ಕು ಮಂಡನೆ ಮಾಡಿದೆ.

Manohar Parrikar can take oath as Goa CM says SC; Floor test on March 16

ಸುಪ್ರೀಂಕೋರ್ಟಿನಲ್ಲಿ ನಡೆದ ವಾದ -ಪ್ರತಿವಾದಗಳ ವಿವರ:
* ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನವನ್ನು ಗಳಿಸಿದೆ ಹೀಗಾಗಿ ಸರ್ಕಾರ ರಚನೆಗೆ ಅವಾ ನೀಡಬೇಕು ಎಂದು ಕಾಂಗ್ರೆಸ್ ಪರ ಅಭಿಶೇಕ್ ಮನು ಸಿಂಘ್ವಿ ವಾದಿಸಿದರು. ಇದಕ್ಕೆ ಪ್ರತಿಯಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರತಿವಾದಿಸಿ, ಸಂವಿಧಾನದ 164(1) ಸೆಕ್ಷನ್ ನಂತೆ ರಾಜ್ಯಪಾಲರು ತಮ್ಮ ಅಧಿಕಾರ ಚಲಾಯಿಸಬಹುದಾಗಿದೆ.

* * ಅರುಣಾಚಲ ಪ್ರದೇಶ ಸರ್ಕಾರ ರಚನೆಗೆ ಬಳಸಲಾದ ಆದೇಶವನ್ನು ಉಲ್ಲೇಖಿಸಿ ಮುಖ್ಯ ನ್ಯಾ. ಜೆಎಸ್ ಖೇಹರ್ ಅವರು, ರಾಜ್ಯಪಾಲರು ಈ ಬಗ್ಗೆ ಸರಿಯಾದ ನಿರ್ಣಯ ಕೈಗೊಂಡಿದ್ದಾರೆ ಎಂದರು.
* 40 ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ ಮ್ಯಾಜಿಕ್ ನಂಬರ್ 21 ಸಾಧಿಸಲು ಬೇಕಾದ ಸಂಖ್ಯೆಗಳನ್ನು ಬಿಜೆಪಿ ಹೊಂದಿದೆ ಎಂದು ಮನೋಹರ್ ಪರಿಕ್ಕರ್ ಅವರ ಬೆಂಬಲಕ್ಕೆ ನಿಂತಿರುವ ಶಾಸಕರ ಪಟ್ಟಿಯನ್ನು ಹರೀಶ್ ಸಾಳ್ವೆ ಅವರು ಕೋರ್ಟಿಗೆ ಹಾಜರು ಪಡಿಸಿದರು.
* ಈ ನಡುವೆ ಮಾತನಾಡಿದ ಅಭಿಶೇಕ್ ಸಿಂಘ್ವಿ, ರಾಜ್ಯಪಾಲರು ಕಾಂಗ್ರೆಸ್ಸಿಗೆ ಅವಕಾಶ ನೀಡಬೇಕು ಮತ್ತೆ ವಾದಿಸಿದರು.
* ಸರ್ಕಾರ ರಚನೆಯ ಹಕ್ಕು ಮಂಡಿಸುವಲ್ಲಿ ಕಾಂಗ್ರೆಸ್ ವಿಫಲವಾಗಿರುವ ಬಗ್ಗೆ ಸಾಳ್ವೆ ಸೂಚಿಸಿದರು.
* ಬಿಜೆಪಿಗೆ ತ್ವರಿತವಾಗಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್, ಮಾರ್ಚ್16 ರಂದು ವಿಶ್ವಾಸಮತ ಯಾಚನೆಗೆ ಅಣಿಯಾಗುವಂತೆ ಮನೋಹರ್ ಪರಿಕ್ಕರ್ ಪರ ವಕೀಲರಿಗೆ ನಿರ್ದೇಶಿಸಿತು.

English summary
The Supreme Court has ordered a floor test to be held in Goa on March 16 at 11 am. The Supreme Court also refused to stay the oath taking ceremony of Manohar Parrikar as the Chief Minister of Goa. He is scheduled to take oath at 5 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X