ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ : ಪೋಲಿ ಚಿತ್ರ ನೋಡುವ ಕಾಲೇಜು ಹುಡುಗರು

|
Google Oneindia Kannada News

ಪಣಜಿ, ಜು. 24 : ಗೋವಾ ರಾಜ್ಯದ ಶೇ 40ರಷ್ಟು ಕಾಲೇಜು ವಿದ್ಯಾರ್ಥಿಗಳು ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಾರೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಒಬ್ಬ ವಿದ್ಯಾರ್ಥಿ ಒಂದು ವಾರದಲ್ಲಿ ಸುಮಾರು 28 ಅಶ್ಲೀಲ ವಿಡಿಯೋಗಳನ್ನು ನೋಡುತ್ತಾನೆ ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕ ಮೂಲದ ರೆಸ್ಕ್ಯೂ ಎಂಬ ಸಂಸ್ಥೆ ಗೋವಾದಲ್ಲಿ ಈ ಸಮೀಕ್ಷೆಯನ್ನು ನಡೆಸಿದೆ. ರಾಜ್ಯದ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಅದರ ಪ್ರಕಾರ ಶೇ 40ರಷ್ಟು ವಿದ್ಯಾರ್ಥಿಗಳು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ.

rape porn

ಸಮೀಕ್ಷೆ ಬಗ್ಗೆ ಮಾಹಿತಿ ನೀಡಿರುವ ರೆಸ್ಕ್ಯೂ ಸಂಸ್ಥೆ ಸಿಇಓ ಅಭಿಷೇಕ್, ರಾಜ್ಯದಲ್ಲಿ ಶೇ 80 ರಷ್ಟು ವಿದ್ಯಾರ್ಥಿಗಳು ಅತ್ಯಾಚಾರಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಇವರಲ್ಲಿ ಶೇ 40 ರಷ್ಟು ವಿದ್ಯಾರ್ಥಿಗಳು ಪ್ರತಿದಿನ ವಿಡಿಯೋ ನೋಡುತ್ತಾರೆ ಎಂದು ಹೇಳಿದ್ದಾರೆ. [ಬೈನಾ ನಿರಾಶ್ರಿತರಿಗೆ ಶಾಶ್ವತ ಪರಿಹಾರ]

ಪ್ರತಿ ವಿದ್ಯಾರ್ಥಿ ವಾರದಲ್ಲಿ ಸುಮಾರು 28 ಅತ್ಯಾಚಾರಕ್ಕೆ ಸಂಬಂಧಪಟ್ಟ ವಿಡಿಯೋವನ್ನು ನೋಡುತ್ತಾನೆ ಎಂದು ಹೇಳಿರುವ ಸಮೀಕ್ಷೆ, ಅಶ್ಲೀಲ ವಿಡಿಯೋ ನೋಡುವುದು ಮತ್ತು ನಿಜ ಜೀವನದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಏನಾದರೂ ಸಂಬಂಧವಿದೆಯೇ? ಎಂದು ಅಧ್ಯಯನ ನಡೆಸುತ್ತಿದೆ. ['ಬಿಕಿನಿ' ಬೇಡವೆಂದ ಸಚಿವನಿಗೆ 'ಮಿನಿ ಸ್ಕರ್ಟ್' ಗಿಫ್ಟ್]

ಸಮೀಕ್ಷೆಯ ಸಮಯದಲ್ಲಿ ಉತ್ತರ ನೀಡಿದ ವಿದ್ಯಾರ್ಥಿಗಳು ಅತ್ಯಾಚಾರದ ವಿಡಿಯೋ ನೋಡಿದ ನಾವು ಅತ್ಯಾಚಾರ ಮಾಡಬೇಕು ಎಂಬ ಭಾವನೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುವುದಕ್ಕೆ ಇದು ಪ್ರಮುಖ ಕಾರಣವಿರಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

English summary
40 percent of college and higher secondary school boys in Goa watch rape porn and statistically end up watching 86,000 rape videos per day according to a survey. The survey was conducted by Rescue a Karnataka-based organization promoting cyber ethics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X