ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ, ಮೂರು ಪ್ರಶ್ನೆಗಳು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏ. 23 : ಆಮ್ ಆದ್ಮಿ ಪಕ್ಷ ಬುಧವಾರ ಆಯೋಜಿಸಿದ್ದ ಸಮಾವೇಶದ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದ ನಾಯಕರ ಸಮ್ಮುಖದಲ್ಲಿಯೇ ರಾಜಸ್ಥಾನದಿಂದ ಬಂದಿದ್ದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಆತ್ಮಹತ್ಯೆ ನಂತರ ರಾಜಕೀಯ ಪಕ್ಷಗಳ ಕೆಸರೆರಚಾಟ ಆರಂಭವಾಗಿದೆ.

ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ತನಿಖೆ ನಡೆಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆದೇಶ ನೀಡಿದ್ದಾರೆ. ದೆಹಲಿ ಪೊಲೀಸರು ತನಿಖೆಗೆ ವಿಶೇಷ ತಂಡವನ್ನೂ ರಚಿಸಿದ್ದಾರೆ. ರೈತನ ಸಾವಿನ ಕುರಿತು ಮೂರು ಪ್ರಶ್ನೆಗಳಿಗೆ ಈಗ ಉತ್ತರ ಬೇಕಾಗಿದೆ.

Gajendra Singh

* ಬೆಳೆಹಾನಿಯಿಂದಾಗಿ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡರೆ?
* ಸಮಾವೇಶದ ಬಗ್ಗೆ ದೆಹಲಿ ಪೊಲೀಸರು ನೀಡಿದ್ದ ಪತ್ರವನ್ನು ಆಪ್ ನಿರ್ಲಕ್ಷಿಸಿತೇ?
* ಸಮಾವೇಶಕ್ಕೆ ಗಜೇಂದ್ರ ಸಿಂಗ್‌ಗೆ ಆಮ್‌ ಆದ್ಮಿ ಪಕ್ಷ ಆಹ್ವಾನ ನೀಡಿತ್ತೆ?

ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? : ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಗಜೇಂದ್ರ ಸಿಂಗ್‌ ಅವರು ಬೆಳೆದ ಬೆಳೆಗಳು ಹಾನಿಯಾದಾಗ ರಾಜಸ್ಥಾನ ಸರ್ಕಾರ ಪರಿಹಾರ ನೀಡಲಿಲ್ಲ. ಆದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪಿಸಿವೆ. [ರೈತ ಆತ್ಮಹತ್ಯೆ: ಕೇಜ್ರಿವಾಲ್ ಗೆ ಛೀಮಾರಿ]

ಆದರೆ, ರಾಜಸ್ಥಾನ ಬೆಳೆಹಾನಿಯ ಪ್ರಮಾಣ ಶೇ 33ರಷ್ಟು ಮಾತ್ರ. ಅದಕ್ಕೆ ನಿಯಮದಂತೆ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದೆ. ರಾಜಸ್ಥಾನದ ದೌಸ ಗ್ರಾಮದಲ್ಲಿ ಗಜೇಂದ್ರ ಸಿಂಗ್ ಕುಟುಂಬ ನೆಲಸಿತ್ತು ಮತ್ತು ಅವರು ಆರ್ಥಿಕವಾಗಿ ಇತರ ಕುಟುಂಬಗಳಿಗೆ ಹೋಲಿಕೆ ಮಾಡಿದಾಗ ಸದೃಢವಾಗಿದ್ದರು ಎಂದು ಹೇಳಿದೆ. [ಅಣ್ಣಾ ಜೊತೆ ಕೈ ಜೋಡಿಸಿದ ಕೇಜ್ರಿವಾಲ್]

ಆಮ್ ಆದ್ಮಿ ಪಕ್ಷದ ನಿರ್ಲಕ್ಷ್ಯ : ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ವಿರೋಧಿ ಸಮಾವೇಶವನ್ನು ಜಂತರ್‌ ಮಂತರ್‌ನಿಂದ ಬೇರೆ ಸ್ಥಳಕ್ಕೆ ವರ್ಗಾಯಿಸುವಂತೆ ದೆಹಲಿ ಪೊಲೀಸರು ಆಮ್‌ ಆದ್ಮಿ ಪಕ್ಷಕ್ಕೆ ಪತ್ರ ಬರೆದಿದ್ದರು. ರಾಮ್‌ಲೀಲಾ ಮೈದಾನದಂತಹ ಪ್ರದೇಶದಲ್ಲಿ ಜನರನ್ನು ನಿಯಂತ್ರಿಸುವುದು ಸುಲಭ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಆದರೆ, ಆಮ್‌ ಆದ್ಮಿ ಪಕ್ಷ ಈ ಪತ್ರವನ್ನು ನಿರ್ಲಕ್ಷಿಸಿತ್ತೇ? ಎಂಬುದು ಪ್ರಶ್ನೆಯಾಗಿದೆ.

ಗಜೇಂದ್ರ ಸಿಂಗ್‌ನನ್ನು ಪಕ್ಷ ಆಹ್ವಾನಿಸಿತ್ತೇ? : ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್‌ನನ್ನು ಆಮ್ ಆದ್ಮಿ ಪಕ್ಷವೇ ಸಮಾವೇಶಕ್ಕಾಗಿ ಆಹ್ವಾನಿಸಿತ್ತೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ರಾಜಸ್ಥಾನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಕಿಸಾನ್ ವಿಕಾಸ್ ಸಮಾವೇಶದಲ್ಲಿಯೂ ಸಿಂಗ್ ಪಾಲ್ಗೊಂಡಿದ್ದ.

ಗಜೇಂದ್ರ ಸಿಂಗ್ ಅವರ ಜೊತೆ ಆಗಮಿಸಿದವರ ಪ್ರಕಾರ ಅವರಿಗೆ ಸಮಾವೇಶಕ್ಕಾಗಿ ಸಿಂಗ್‌ಗೆ ಆಹ್ವಾನ ನೀಡಲಾಗಿತ್ತು. ದೌಸಾ ಗ್ರಾಮದಿಂದ ಸಿಂಗ್‌ಗೆ ಮಾತ್ರ ಆಹ್ವಾನವಿತ್ತು. ಪ್ರಕರಣದ ತನಿಖೆ ನಡೆಸುವ ಪೊಲೀಸರು ಈ ಎಲ್ಲಾ ವಿವರಗಳನ್ನು ಕಲೆ ಹಾಕಿ ತನಿಖೆಯನ್ನು ಮುಂದುವರೆಸಲಿದ್ದಾರೆ. [ಪಿಟಿಐ ಚಿತ್ರ]

English summary
There are several contradictory facts that led up to the death of Gajendra Singh the farmer who committed suicide at the Aam Admi Party rally. While the Congress has claimed that he was denied compensation as a result of which he committed suicide. Some questions that would have to be answered while probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X