ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಹತ್ತಲು ಗಾಯಕ್ವಾಡ್ ಗಿದ್ದ ನಿಷೇಧ ರದ್ದು

ಏರ್ ಇಂಡಿಯಾ ವಿಮಾನ ಹತ್ತದಂತೆ ಶಿವಸೇನಾ ಸಂಸತ್ ಸದಸ್ಯ ರವೀಂದ್ರ ಗಾಯಕ್ವಾಡ್ ಗಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏಪ್ರಿಲ್ 7: ಏರ್ ಇಂಡಿಯಾ ವಿಮಾನ ಹತ್ತದಂತೆ ಶಿವಸೇನಾ ಸಂಸತ್ ಸದಸ್ಯ ರವೀಂದ್ರ ಗಾಯಕ್ವಾಡ್ ಗಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಲಾಗಿದೆ.['ಚಪ್ಪಲಿ' ಸಂಸದನ ಕೇಸ್ ಇತ್ಯರ್ಥಗೊಳಿಸಿ: ಸ್ಪೀಕರ್ ಗೆ ಶಿವಸೇನೆ ಆಗ್ರಹ]

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಏರ್ ಇಂಡಿಯಾ ಸಂಸ್ಥೆಗೆ ಪತ್ರವನ್ನು ಬರೆದ ನಂತರ ಏರ್ ಇಂಡಿಯಾ ನಿಷೇಧವನ್ನು ಹಿಂಪಡೆದಿದೆ.['ಚಪ್ಪಲಿ' ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೆ ಮುಖಭಂಗ]

Gaikwad's flying ban lifted by Air India

ಈ ಹಿಂದೆ ಏರ್ ಇಂಡಿಯಾ ಸಿಬ್ಬಂದಿ ಮೇಲೆ ರವೀಂದ್ರ ಗಾಯಕ್ವಾಡ್ ಹಲ್ಲೆ ನಡೆಸಿದ್ದರು. ನಂತರ ವಿಮಾನ ಹತ್ತದಂತೆ ಗಾಯಕ್ವಾಡ್ ಗೆ ನಿಷೇಧ ಹೇರಲಾಗಿತ್ತು. ಇದಾದ ನಂತರ ಘಟನೆ ಬಗ್ಗೆ ಗಾಯಕ್ವಾಡ್ ವಿಷಾದಿಸಿದ್ದರು. ಇದೀಗ ವಿಮಾನ ಹತ್ತದಂತೆ ಗಾಯಕ್ವಾಡ್ ಮೇಲಿದ್ದ ನಿಷೇಧವನ್ನು ತೆರವು ಮಾಡಲಾಗಿದೆ.[ಕಪಿಲ್ ಶರ್ಮಾ ರಂಪ ಮಾಡಿದ್ರೂ ಪ್ಲೇನ್ ನೊಳಕ್ಕೆ ಬಿಟ್ಟಿದ್ರು: ಶಿವಸೇನೆ ಪ್ರಶ್ನೆ]

ಈ ಕುರಿತು ಹೇಳಿಕೆ ನೀಡಿರುವ ಏರ್ ಇಂಡಿಯಾ, "ಕ್ಷಮೆ ಕೇಳಿದ ಹಿನ್ನಲೆಯಲ್ಲಿ ಗಾಯಕ್ವಾಡ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ನಾಗರೀಕ ವಿಮಾನಯಾನ ಸಚಿವಾಲಯ ನಮಗೆ ಹಾಗೂ ಖಾಸಗಿ ಏರ್ಲೈನ್ಸ್ ಗಳಿಗೆ ಪತ್ರ ಬರೆದಿತ್ತು," ಎಂದು ಹೇಳಿದೆ.

ಇದೇ ವೇಳೆ ಉಳಿದ ಖಾಸಗೀ ಏರ್ಲೈನ್ಸ್ ಗಳು ಏರ್ ಇಂಡಿಯಾ ಹಾದಿಯಲ್ಲೇ ನಿಷೇಧ ತೆರವುಗೊಳಿಸುವ ಸಾಧ್ಯತೆ ಇದೆ.

ಮುಂದಿನ ದಿನಗಳಲ್ಲಿ ಅನುಚಿತವಾಗಿ ವರ್ತಿಸುವ ಪ್ರಯಾಣಿಕರ ಬಗ್ಗೆ ಕ್ರಮ ಕೈಗೊಳ್ಳಲು CAR (ಸಿವಿಲ್ ಏವಿಯೇಷನ್ ರಿಕ್ವಾಯರ್ ಮೆಂಟ್ಸ್) ಕಾನೂನಿಗೆ ತಿದ್ದುಡಿ ತರಲು ಕೇಂದ್ರ ಸರಕಾರ ಮುಂದಾಗಿದ್ದು ಕರಡು ತಿದ್ದುಪಡಿ ರಚಿಸಲಾಗಿದೆ.

ನಿಷೇಧ ತೆರವುಗೊಳಿಸಿದ ನಂತರ ಏರ್ ಇಂಡಿಯಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದು ಅದರ ಲೈವ್ ಇಲ್ಲಿದೆ..

English summary
Air India has lifted the flying ban on Shiv Sena MP, Ravindra Gaikwad. The ban was lifted after the civil aviation ministry wrote to Air India asking the officials to lift the ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X