ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಸಚಿವ ಸಂಪುಟ : ಸ್ಕೂಲು ಬಿಟ್ಟವರ ಹೈಸ್ಕೂಲು!

|
Google Oneindia Kannada News

ಪಾಟ್ನಾ, ನ 24: ಜನಪ್ರತಿನಿಧಿಗಳಾಗಲು ಕನಿಷ್ಠ ವಿದ್ಯಾರ್ಹತೆ ಇರಬೇಕು, ಅದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಹಿಂದೊಮ್ಮೆ ನಡೆದ ಚರ್ಚೆ ಬಂದಷ್ಟೇ ವೇಗದಲ್ಲಿ ಪರದೆ ಹಿಂದೆ ಸರಿದಿತ್ತು.

ನಿತೀಶ್ - ಲಾಲೂ ನೇತೃತ್ವದ ಮಹಾಮೈತ್ರಿಕೂಟ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಅಭೂತವೂರ್ವ ಜಯಭೇರಿ ಬಾರಿಸಿದ ನಂತರ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ.

ಎಂಟನೇ ಕ್ಲಾಸಿನಿಂದ ಹಿಡಿದು ಡಾಕ್ಟರೇಟ್ ತನಕ ವಿದ್ಯಾಭ್ಯಾಸ ಮಾಡಿರುವವರು ಪ್ರಮಾಣವಚನ ಸ್ವೀಕರಿಸಿದ 28 ಸಚಿವರ ಪಟ್ಟಿಯಲ್ಲಿರುವುದು ವಿಶೇಷ. ಪಿಯುಸಿ ಪಾಸಾದ ರಾಜಕೀಯ ಧುರೀಣ ರಾಜ್ಯದ ಹಣಕಾಸು ಸಚಿವರು ಎನ್ನುವುದು ಇನ್ನೂ ವಿಶೇಷ ಸಂಗತಿ. (ಮೋದಿ ವಿರುದ್ಧ ಒಂದಾದ ಬಿಜೆಪಿಯೇತರ ಪಕ್ಷಗಳು)

ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊರತಾಗಿ ಜೆಡಿಯು ಮತ್ತು ಆರ್ಜೆಡಿಯಿಂದ ತಲಾ ಹನ್ನೆರಡು ಮತ್ತು ಕಾಂಗ್ರೆಸ್ಸಿನ ನಾಲ್ವರು ಸಚಿವರಾಗಿದ್ದಾರೆ. ಇದರಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಇಬ್ಬರು ಪುತ್ರರು ಪ್ರಮುಖರು.

ಬಿಹಾರದ ಸಿಎಂ ನಿತೀಶ್ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ 29 ಸಚಿವರ ವಿದ್ಯಾಭ್ಯಾಸದ ಮಾಹಿತಿ ಮತ್ತು ಹಂಚಲಾಗಿರುವ ಖಾತೆಗಳ ವಿವರವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (ಕರ್ನಾಟಕದಲ್ಲಿ ಚಾಲ್ತಿಯಲ್ಲಿ ಇಲ್ಲದ ಕೆಲವೊಂದು ಸಚಿವಾಲಯ ಬಿಹಾರದಲ್ಲಿದೆ ಎನ್ನುವುದು ಓದುಗರ ಗಮನಕ್ಕೆ)

ನಿತೀಶ್ ಮತ್ತು ಜೆಡಿಯು ಸಚಿವರು

ನಿತೀಶ್ ಮತ್ತು ಜೆಡಿಯು ಸಚಿವರು

ನಿತೀಶ್ ಕುಮಾರ್ - ಇಲೆಕ್ಟ್ರಿಕಲ್ ಇಂಜಿನಿಯರ್ - ಮುಖ್ಯಮಂತ್ರಿ, ಗೃಹ, ಸಾಮಾನ್ಯ ಆಡಳಿತ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ರಾಜೀವ್ ರಂಜನ್ ಸಿಂಗ್ ಲಲ್ಲನ್ - ಪದವೀಧರ - ನೀರಾವರಿ, ಯೋಜನೆ ಮತ್ತು ಅಭಿವೃದ್ದಿ
ಬೃಜೇಂದ್ರ ಪ್ರಸಾದ್ ಯಾದವ್ - ಎಸ್ಎಸ್ಎಲ್ಸಿ - ಇಂಧನ, ವಾಣಿಜ್ಯ ಮತ್ತು ತೆರಿಗೆ
ಶ್ರವಣ್ ಕುಮಾರ್ - ಪಿಯುಸಿ - ಗ್ರಾಮೀಣಾಭಿವೃದ್ದಿ, ಸಂಸದೀಯ ವ್ಯವಹಾರ
ಜಯ್ ಕುಮಾರ್ ಸಿಂಗ್ - ಪದವೀಧರ - ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ
ಮಹೇಶ್ವರ ಹಜಾರಿ - ಪದವೀಧರ - ನಗರಾಭಿವೃದ್ದಿ

 ಮುಂದವರಿದ ಜೆಡಿಯು ಸಚಿವರ ಮಾಹಿತಿ

ಮುಂದವರಿದ ಜೆಡಿಯು ಸಚಿವರ ಮಾಹಿತಿ

ಕೃಷ್ಣನಂದನ್ ಪ್ರಸಾದ್ ವರ್ಮಾ - ಪದವೀಧರ - ಆರೋಗ್ಯ
ಸಂತೋಶ್ ಕುಮಾರ್ ನಿರಾಲ - ಪದವೀಧರ - ಎಸ್ ಸಿ/ಎಸ್ ಟಿ ಕಲ್ಯಾಣ
ಖುರ್ಷಿದ್ ಆಲಿಯಾಸ್ ಫಿರೋಜ್ ಅಹಮದ್ - ಎಸ್ಎಸ್ಎಲ್ಸಿ - ಕಬ್ಬು, ಕಬ್ಬು ಕೈಗಾರಿಕೆ
ಶೈಲೇಶ್ ಕುಮಾರ್ - ಸ್ನಾತಕೋತ್ತರ ಪದವೀಧರ - ಗ್ರಾಮೀಣ ಉಸ್ತುವಾರಿ
ಕುಮಾರಿ ಮಂಜು ವರ್ಮಾ - ಪಿಯುಸಿ - ಸಮಾಜಕಲ್ಯಾಣ
ಮದನ್ ಸಹಾನಿ - ಪದವೀಧರ - ಆಹಾರ, ಗ್ರಾಹಕರ ಕಲ್ಯಾಣ ಖಾತೆ
ಕಪಿಲ್ ದಿಯೋ ಕಾಮತ್ - 8ನೇ ಕ್ಲಾಸ್ - ಪಂಚಾಯತ್ ರಾಜ್

ಲಾಲೂ ಪ್ರಸಾದ್ ಯಾದವ್ ಪುತ್ರರು ಮತ್ತು ಇತರರು

ಲಾಲೂ ಪ್ರಸಾದ್ ಯಾದವ್ ಪುತ್ರರು ಮತ್ತು ಇತರರು

ತೇಜಸ್ವಿ ಯಾದವ್ - 9ನೇ ಕ್ಲಾಸ್ - ಉಪಮುಖ್ಯಮಂತ್ರಿ, ರಸ್ತೆ ಮತ್ತು ಕಟ್ಟಡ ನಿರ್ಮಾಣ, ಹಿಂದುಳಿದ ವರ್ಗದ ಅಭಿವೃದ್ದಿ
ತೇಜ್ ಪ್ರತಾಪ್ ಯಾದವ್ - ಪಿಯುಸಿ - ಆರೋಗ್ಯ, ನೀರಾವರಿ ಮೂಲ, ಅರಣ್ಯ ಮತ್ತು ಪರಿಸರ
ಅಬ್ದುಲ್ ಬಾರಿ ಸಿದ್ದಿಕಿ - ಪಿಯುಸಿ - ಹಣಕಾಸು
ಡಾ. ಅಬ್ದುಲ್ ಗಫೂರ್ - ಡಾಕ್ಟರೇಟ್ - ಅಲ್ಪಸಂಖ್ಯಾತ ಕಲ್ಯಾಣ
ವಿಜಯ್ ಪ್ರಕಾಶ್ - ಸ್ನಾತಕೋತ್ತರ ಪದವೀಧರ - ಕಾರ್ಮಿಕ ಖಾತೆ
ಚಂದ್ರಿಕಾ ರೈ - ಸ್ನಾತಕೋತ್ತರ ಪದವೀಧರೆ - ಸಾರಿಗೆ

ಆರ್ಜೆಡಿ ಸಚಿವರ ಪಟ್ಟಿ

ಆರ್ಜೆಡಿ ಸಚಿವರ ಪಟ್ಟಿ

ಅಲೋಕ್ ಕುಮಾರ್ ಮೆಹ್ತಾ - ಪದವೀಧರ - ಸಹಕಾರ ಖಾತೆ
ರಾಮ್ ವಿಚಾರ್ ರೈ - ಎಸ್ಎಸ್ಎಲ್ಸಿ - ನೀರಾವರಿ ರಾಜ್ಯ ಖಾತೆ
ಶಿವಚಂದ್ರ ರಾಮ್ - ಪದವೀಧರ - ಯುವಜನ ಕ್ರೀಡೆ ಮತ್ತು ಸಂಸ್ಕೃತಿ
ಮುನೇಶ್ವರ ಚೌಧುರಿ - ಸ್ನಾತಕೋತ್ತರ ಪದವೀಧರ - ಗಣಿಗಾರಿಕೆ
ಚಂದ್ರಶೇಖರ್ - ಸ್ನಾತಕೋತ್ತರ ಪದವೀಧರ - ನೈಸರ್ಗಿಕ ವಿಕೋಪ
ಅನಿತಾ ದೇವಿ - ಸ್ನಾತಕೋತ್ತರ ಪದವೀಧರೆ - ಪ್ರವಾಸೋದ್ಯಮ

ಕಾಂಗ್ರೆಸ್ ಸಚಿವರ ಪಟ್ಟಿ

ಕಾಂಗ್ರೆಸ್ ಸಚಿವರ ಪಟ್ಟಿ

ಅಶೋಕ್ ಚೌಧುರಿ - ಡಾಕ್ಟರೇಟ್ - ಶಿಕ್ಷಣ, ಪ್ರಸಾರ ಮತ್ತು ಬಾನುಲಿ
ಮದನ್ ಮೋಹನ್ ಝಾ - ಡಾಕ್ಟರೇಟ್ - ಭೂಉಸ್ತುವಾರಿ
ಅಬ್ದುಲ್ ಜಲೀಲ್ ಮಸ್ತಾನ್ - ಪಿಯುಸಿ - ಅಬಕಾರಿ ಮತ್ತು ನೊಂದಣಿ
ಅವಧೇಶ್ ಕುಮಾರ್ ಸಿಂಗ್ - ಪದವೀಧರ - ಪಶುಸಂಗೋಪನೆ, ಮೀನುಗಾರಿಕೆ

English summary
Full list of Bihar ministers educational qualifications and portfolio allocation. Chief Minister Nitish Kumar cabinet has as many as 13 ministers from JDU, 12 from RJD and four from Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X