ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಂಗಳಿಗೆ ಎರಡು ಬಾರಿ ಇಂಧನ ದರ ಏರಿಕೆ-ಇಳಿಕೆ ಮಾಡುವುದು ಎಲ್ಲರಿಗೂ ತಿಳಿದಿರಬಹುದು. ಏರಿಕೆಯನ್ನೇ ಕಾಣುತ್ತಿದ್ದ ತೈಲ ದರಗಳು ಈ ಬಾರಿ ಇಳಿಕೆ ಹಾದಿ ಹಿಡಿದಿವೆ.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 15 : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಂಗಳಿಗೆ ಎರಡು ಬಾರಿ ಇಂಧನ ದರ ಏರಿಕೆ-ಇಳಿಕೆ ಮಾಡುವುದು ಎಲ್ಲರಿಗೂ ತಿಳಿದಿರಬಹುದು.

ಏರಿಕೆಯನ್ನೇ ಕಾಣುತ್ತಿದ್ದ ತೈಲ ದರಗಳು ಈ ಬಾರಿ ಇಳಿಕೆ ಹಾದಿ ಹಿಡಿದಿವೆ. ನವೆಂಬರ್ 15ರ ಮಧ್ಯರಾತ್ರಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಲಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.46 ರು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 1.53 ರುನಷ್ಟು ಇಳಿಕೆಯಾಗಿದೆ.

Fuel price slash: petrol Rs 1.46, diesel Rs. 1.53 November 15 Midnight

ಡೀಲರ್ ಗಳಿಗೆ ನೀಡುವ ಕಮಿಷನ್ ದರ ಏರಿಕೆಯಾದ ಹಿನ್ನಲೆಯಲ್ಲಿ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಪೆಟ್ರೋಲ್ ಬಂಕ್ ಗಳಲ್ಲಿ ಮುಷ್ಕರ, ಕಾರ್ಯ ನಿರ್ವಹಣೆ ಅವಧಿ ಮಿತಿ ಕಂಡು ಬಂದಿತ್ತು. ಆದರೆ, ಈಗ ಇಂಧನ ಬೆಲೆ ಇಳಿಕೆಯನ್ನು ಇಂಡಿಯನ್ ಆಯಿಲ್ ಘೋಷಿಸಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.(ಒನ್ ಇಂಡಿಯಾ ಸುದ್ದಿ)

English summary
Petrol prices have been cut by Rs 1.46 a litre and diesel by Rs 1.53 per litre. The change in price of petrol would come into effect from midnight today(November 15).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X