ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂಟ್' ಚಿತ್ರದ ನಾಯಕಿ ಮರಿಯಾ ಮತ್ತೆ ಬಂಧನ

By Mahesh
|
Google Oneindia Kannada News

ಅಹಮದಾಬಾದ್, ಅ.08: ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಅವರ ಹತ್ಯೆಯ ಆರೋಪದ ಮೇಲೆ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದ ಕನ್ನಡ ನಟಿ ಮೋನಿಕಾ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರು ಮೂಲದ ಮಾಡೆಲ್ ಕಮ್ ನಟಿ, 'ಜೂಟ್' ಚಿತ್ರ ಖ್ಯಾತಿಯ ಮರಿಯಾ ಮೋನಿಕಾ ಸುಸೈರಾಜ್ ಅವರು ನೀರಜ್ ಕೊಲೆ ಆರೋಪದಿಂದ ಮುಕ್ತರಾಗಿದ್ದರು. ಅದರೆ, ಕೊಲೆ ಸಂಚು, ಸಾಕ್ಷಿ ನಾಶದ ಆರೋಪ ಹೊತ್ತು ಮುರ್ನಾಲ್ಕು ವರ್ಷ ಜೈಲುವಾಸ ಅನುಭವಿಸಿದ್ದರು. ಅಕೆಯ ಪ್ರಿಯಕರ ಮತ್ತು ನೌಕಾಧಿಕಾರಿ ಲೆಫ್ಟಿನೆಂಟ್ ಎಮ್ಎಲ್ ಜೇರೋಮ್ ಮ್ಯಾಥ್ಯೂ ಅವರು ಕೊಲೆ ಮಾಡಿದ ಅಪರಾಧಕ್ಕೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ವಂಚನೆ ಪ್ರಕರಣ: ಹಜ್ ಯಾತ್ರಿಕರ ಹಣ ಲಪಾಟಿಸಿದ ಆರೋಪವನ್ನ್ ಮೋನಿಕಾ ಹೊತ್ತುಕೊಂಡಿದ್ದಾರೆ. ಮೋನಿಕಾ ಅವರ ಏಜೆನ್ಸಿ ಹಜ್ ಯಾತ್ರಿಕರಿಂದ ಹಣ ಪಡೆದು ಟಿಕೆಟ್ ಬುಕ್ ಮಾಡಿಕೊಡುವ ಜವಾಬ್ದಾರಿ ಹೊತ್ತುಕೊಂಡಿತ್ತು. ಅದರೆ, ಟಿಕೆಟ್ ಬುಕ್ ಮಾಡದೆ 2.68 ಕೋಟಿ ರು ಮೊತ್ತದ ಹಣ ನುಂಗಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. [ಬೀದೀಲಿ ಹೋಗೋ 'ಮಾರಿ'ಯಾ ಬಿಗ್ ಬಾಸ್ ಮನೆ ಬೇಡ್ವಂತೆ]

Kannada actress Maria Susairaj arrested by Gujarat police

ವಡೋದರಾದಲ್ಲಿ ಮೋನಿಕಾ ಅವರ ಏರ್ ಟಿಕೆಟ್ ಬುಕ್ಕಿಂಗ್ ಏಜೆನ್ಸಿ ಕಾರ್ಯನಿರ್ವಹಿಸುತ್ತಿದೆ. ಹಜ್ ಯಾತ್ರಿಕರ ಟಿಕೆಟ್ ಬುಕ್ ಮಾಡಲು ಹಣ ಪಡೆದುಕೊಂಡಿದ್ದಾರೆ. ಟಿಕೆಟ್ ಕ್ಯಾನ್ಸಲ್ ಮಾಡಿ 2.68 ಕೋಟಿ ರು ತೆಗೆದುಕೊಂಡು ಪರಾರಿಯಾಗಲು ಯತ್ನಿಸುವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಗ್ರೋವರ್‌ ಹತ್ಯೆ: 2008ರ ಮೇ 7ರಂದು ಜೆರೋಮ್ ಮಲಾಡ್‌ನಲ್ಲಿದ್ದ ಮರಿಯಾಳ ಮನೆಗೆ ಹೋಗಿದ್ದನು. ಅಲ್ಲಿ ಗ್ರೋವರ್ ಮತ್ತು ಆತನ ನಡುವೆ ಗಲಾಟೆ ನಡೆದು, ಗ್ರೋವರ್ ಹತ್ಯೆಯಾಗಿದ್ದ. ಬಳಿಕ ಸುಸೈರಾಜ್ ಮತ್ತು ಜೆರೋಮ್ ಇಬ್ಬರೂ ಸೇರಿಕೊಂಡು ಗ್ರೋವರ್‌ನ ಮೃತ ದೇಹವನ್ನು ಕತ್ತರಿಸಿ ಪಕ್ಕದ ಥಾಣೆಯ ಮನೋರ್ ಅರಣ್ಯದಲ್ಲಿ ಎಸೆದಿದ್ದರು.

ಅಂಗಡಿಯಿಂದ ಬ್ಯಾಗ್ ಮತ್ತು ದೊಡ್ಡ ಬಾಕನ್ನು ತರಲು ಪ್ರೇರೇಪಿಸಿದ ಜೇರೋಮ್, ನೀರಜ್ ದೇಹವನ್ನು ತುಂಡುತುಂಡು ಮಾಡಲು ಬಲವಂತ ಮಾಡಿದ ಎಂದು ಹೇಳಿಕೆ ನೀಡಿದ್ದರು.

ಜೆರೋಮ್‌ ಅವರ ವಿರುದ್ಧ ಐಪಿಸಿ ಕಲಂಗಳಾದ 304 (ಭಾಗ 1) (ಕೊಲೆ ನಡೆಸುವ ಉದ್ದೇಶವುಳ್ಳ ಅಪರಾಧ) ಮತ್ತು 201 (ಸಾಕ್ಷಗಳ ನಾಶ) ಅನ್ವಯ ತಪ್ಪಿತಸ್ಥನೆಂದು ಗುರುತಿಸಿ ಶಿಕ್ಷೆ ವಿಧಿಸಲಾಗಿತ್ತು. ಕನ್ನಡ ನಟಿ ಮರಿಯಾ ಸುಸೈರಾಜ್ -ನೀರಜ್ ಗ್ರೋವರ್ ಹತ್ಯಾಕಾಂಡದ ಕಥೆ ಆಧಾರಿಸಿದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ನಾಟ್ ಎ ಲವ್ ಸ್ಟೋರಿ ಚಿತ್ರ ತೆಗೆದಿದ್ದರು.

English summary
The Gujarat police arrested Kannada actress Maria Susairaj for allegedly committing fraud of Rs. 2.68 crore. The ex-model is accused of duping hajj pilgrims who had booked tickets from her agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X