ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಿಸ್ಸಾದಲ್ಲಿ ನಾಲ್ವರು ಸಿಮಿ ಉಗ್ರರ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 17 : ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಒರಿಸ್ಸಾದಲ್ಲಿ ಬಂಧಿಸಲಾಗಿದೆ. ನಾಲ್ವರು ಮಧ್ಯಪ್ರದೇಶ ಮೂಲದವರಾಗಿದ್ದು, ರಾಷ್ಟ್ರೀಯ ತನಿಖಾದಳ ಇವರಿಗಾಗಿ ಹುಡುಕಾಟ ನಡೆಸುತ್ತಿತ್ತು.

ಒರಿಸ್ಸಾ ಮತ್ತು ತೆಲಂಗಾಣದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಉಗ್ರ ಸಂಘಟನೆಗೆ ಸೇರಿದ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ರಿವಾಲ್ವಾರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. [ಈ ನಾಲ್ವರು ಸಿಮಿ ಉಗ್ರರು ನಿಮ್ಮ ಊರಿನಲ್ಲಿದ್ದಾರೆಯೇ?]

terrorist

ಮಧ್ಯಪ್ರದೇಶ, ಒರಿಸ್ಸಾ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಇವರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಒರಿಸ್ಸಾದ ರೂರ್‌ಕೆಲಾ ಎಂಬ ಪ್ರದೇಶದಲ್ಲಿ ಖುರೇಷಿ ಮೊಹೊಲ್ಲಾ ಎಂಬಲ್ಲಿ ಮನೆ ಬಾಡಿಗೆ ಪಡೆದಿದ್ದ ಉಗ್ರರು, ಅಲ್ಲಿ ನೆಲೆಸಿದ್ದರು. [ಸಿಮಿ ಉಗ್ರರು ಧಾರವಾಡದಲ್ಲಿ 10 ತಿಂಗಳಿದ್ದರೂ ತಿಳಿಯಲಿಲ್ಲ ಏಕೆ?]

ತಮ್ಮ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಣೆ ಮಾಡಲು ಈ ಉಗ್ರರು ಜನರನ್ನು ಅಪಹರಣ ಮಾಡುವ ಸಂಚನ್ನು ರೂಪಿಸಿದ್ದರು. ಈ ನಾಲ್ವರು ಮಧ್ಯಪ್ರದೇಶ ಮೂಲದವರಾಗಿದ್ದು, ರಾಷ್ಟ್ರೀಯ ತನಿಖಾ ದಳ ಇವರಿಗಾಗಿ ಹುಡುಕಾಟ ನಡೆಸುತ್ತಿತ್ತು. ಶೀಘ್ರದಲ್ಲೇ ಎನ್‌ಐಎ ಈ ನಾಲ್ವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

English summary
Four persons have been arrested in Odisha on the suspicion that they were part of the banned Students Islamic Movement of India. The police have recovered four revolvers from them. The joint operation was carried out by the Odisha and Telangana police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X