ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆಯಲ್ಲಿ ಟೀ ಮಾರುವವರು ಮೆನು ಕಾರ್ಡ್ ಇಟ್ಕೋಬೇಕು

|
Google Oneindia Kannada News

ನವದೆಹಲಿ, ಜೂ. 2: ರೈಲ್ವೆಯಲ್ಲಿ ಪ್ರಯಾಣಿಸುವಾಗ ಆಹಾರ ಮತ್ತು ನೀರಿಗೆ ಸಂಬಂಧಿಸಿ ನಿಮ್ಮ ಬಳಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅನಿಸಿದೆಯೇ? ನೀವು ಇನ್ನು ಮುಂದೆ ವ್ಯಾಪಾರಿಗಳ ಬಳಿ ದರಪಟ್ಟಿಯನ್ನು ಕೇಳಬಹುದು. ಒಂದು ವೇಳೆ ಆತ ದರಪಟ್ಟಿ ನೀಡಲು ನಿರಾಕರಿಸಿದರೆ ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾನೆ.

ಹುಬ್ಬಳ್ಳಿಯ ಪ್ರಯಾಣಿಕ ಮಯೂರ್ ಪಟೇಲ್ ಎಂಬುವರು ಸಲ್ಲಿಸಿದ್ದ ದೂರನ್ನು ಆಧರಿಸಿ ರೈಲ್ವೆ ಇಲಾಖೆ ಇಂಥ ಸೂಚನೆ ನೀಡಿದೆ. ರೈಲ್ವೆ ಬೋರ್ಡ್ ನ ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ದರಪಟ್ಟಿ ನೀಡುವುದು ವ್ಯಾಪಾರಿಗಳ ಜವಾಬ್ದಾರಿ ಎಂದು ತಿಳಿಸಿದೆ.[ರೈಲ್ವೆ ಪ್ರಯಾಣ ದರ ತುಸು ದುಬಾರಿ]

food

ಕೆಲಸದ ನಿಮಿತ್ತ ಪ್ರತಿದಿನ ರೈಲ್ವೆಯಲ್ಲಿ ಪ್ರಯಾಣಿಸುವ ಪಟೇಲ್ ಟೀ ಮಾರುವ ಹುಡುಗರ ವರ್ತನೆ ಗಮನಿಸುತ್ತಿದ್ದರು. ಜನರಲ್ ಬೋಗಿಯಲ್ಲಿ ಟೀ ಒಂದಕ್ಕೆ 5 ರು ಪಡೆದುಕೊಂಡರೆ ಕಾಯ್ದಿರಿಸಿದ ಬೋಗಿಯಲ್ಲಿ ಅದೇ ಕಪ್ ಚಹಾಕ್ಕೆ 10 ರು ಪಡೆದುಕೊಳ್ಳುತ್ತಿದ್ದರು. ಇದನ್ನೆಲ್ಲ ನೋಡಿದ ಪಟೇಲ್ 1800-111321 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದ್ದಾರೆ. ಅಲ್ಲಿ ಎಂಟು ನಿಮಿಷ ಕಾದ ನಂತರ ಈ ಬಗ್ಗೆ ದೂರೊಂದನ್ನು ದಾಖಲಿಸಿದ್ದಾರೆ.

ಸಾಮಾನ್ಯ ಟೀ ಗೆ 5 ರು. ವಿಶೇಷ ಚಹಾಕ್ಕೆ 7 ರು,. ನಿಗದಿ ಮಾಡಲಾಗಿದ್ದು ಇದರಂತೆ ಮಾರಾಟ ನಡೆಸಬೇಕು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಉತ್ತಮ ದರ್ಜೆಯ, ಶುದ್ಧ ಆಹಾರಗಳನ್ನು ಪೂರೈಕೆ ಮಾಡಬೇಕು ಎಂದು ಹೇಳಿದೆ.[ರೈಲು ಪ್ರಯಾಣ ಮಾಹಿತಿ ಗೂಗಲ್ ಮ್ಯಾಪ್ ನಲ್ಲೇ ಲಭ್ಯ]

ನಾವು ಯಾರ ಬಳಿಯೂ ಹೆಚ್ಚಿನ ದರ ಪಡೆದುಕೊಂಡಿಲ್ಲ. ಏಕರೂಪದ ಬೆಲೆಯನ್ನೇ ಪಡೆದುಕೊಳ್ಳುತ್ತಿದ್ದೇವೆ. ಏಕ್ಸ್ ಪ್ರೆಸ್ ರೈಲಿನಲ್ಲಿ ಕೊಂಚ ಹೆಚ್ಚಿನ ಬೆಲೆ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲ್ವೆ ಚಹಾದ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಒಟ್ಟಿನಲ್ಲಿ ಇದೀಗ ರೈಲ್ವೆ ವ್ಯಾಪಾರಿಗಳು ಮೆನು ಕಾರ್ಡ್ ಹಿಡಿದಯಕೊಂಡು ಓಡಾಡುವಂಥಾಗಿದ್ದು ಆದೇಶ ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

English summary
Responding to a complaint filed by Hubballi-based passenger Mayur Patil, executive director of tourism and catering in the ministry of railways (railway board), New Delhi clarified that vendors are duty bound to carry and display the menu. In his reply, the EDTC said that as per instructions, a regular cup of tea costs Rs 5 and dip tea at Rs7 and the vendor is duty bound to carry and display the menu of catering services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X