ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಸಾಲಿನಲ್ಲಿ ಜನವರಿ-ಡಿಸೆಂಬರ್ ಆರ್ಥಿಕ ವರ್ಷ, ನವೆಂಬರ್ ಬಜೆಟ್?

|
Google Oneindia Kannada News

ನವದೆಹಲಿ, ಜೂನ್ 26: ಮುಂದಿನ ವರ್ಷದಿಂದ ಅಂದರೆ 2018ರಿಂದ ನೂರೈವತ್ತು ವರ್ಷಗಳ ಹಳೆಯ ಸಂಪ್ರದಾಯಕ್ಕೆ ಕೇಂದ್ರ ಸರಕಾರ ಎಳ್ಳು ನೀರು ಬಿಡಲಿದೆ. ಅಂದರೆ ಈ ವರೆಗೆ ಪ್ರತಿ ವರ್ಷದ ಏಪ್ರಿಲ್ ನಲ್ಲಿ ಆರ್ಥಿಕ ವರ್ಷದ ಆರಂಭವಾಗುತ್ತಿತ್ತು. ಅಂದರೆ ಏಪ್ರಿಲ್ ನಿಂದ ಮಾರ್ಚ್ ವರೆಗೆ ಆರ್ಥಿಕ ವರ್ಷ ಎಂದು ಪರಿಗಣಿಸಲಾಗುತ್ತಿತ್ತು.

ಆದರೆ, ಬರುವ ವರ್ಷದಿಂದ ಜನವರಿಯಿಂದ ಡಿಸೆಂಬರ್ ವರೆಗೆ ಆರ್ಥಿಕ ವರ್ಷ ಬದಲಾಗುತ್ತದೆ. ಈ ಪ್ರಕಾರ ಮುಂದಿನ ಬಜೆಟ್ ನವೆಂಬರ್ ಗೆ ಮಂಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಸರಕಾರದ ಉನ್ನತ ಅಧಿಕಾರಿಗಳು ಪಿಟಿಐಗೆ ಸೋಮವಾರ ಮಾಹಿತಿ ನೀಡಿದ್ದಾರೆ.

ಹೊಸ ಆರ್ಥಿಕ ವರ್ಷಾರಂಭ, ಏನೇನು ದುಬಾರಿಯಾಗಲಿದೆ?ಹೊಸ ಆರ್ಥಿಕ ವರ್ಷಾರಂಭ, ಏನೇನು ದುಬಾರಿಯಾಗಲಿದೆ?

ಆರ್ಥಿಕ ವರ್ಷವನ್ನು ಕ್ಯಾಲೆಂಡರ್ ವರ್ಷಕ್ಕೆ ಬದಲಾಯಿಸಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬದಲಾವಣೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Narendra Modi

ಕಳೆದ ವರ್ಷ ಬಜೆಟ್ ಮಂಡನೆಯನ್ನು ಫೆಬ್ರವರಿ ಒಂದಕ್ಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ದಶಕಗಳ ಕಾಲ ಫೆಬ್ರವರಿ ಇಪ್ಪತ್ತೆಂಟರಂದೇ ಬಜೆಟ್ ಮಂಡಿಸಲಾಗುತ್ತಿತ್ತು. ಬಜೆಟ್ ಬಗ್ಗೆ ಚರ್ಚೆ ಅಂದರೆ ಅಧಿವೇಶನ ಕೂಡ ಆಗಬೇಕು ಆದ್ದರಿಂದ ನವೆಂಬರ್ ಮೊದಲ ವಾರದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ.

ಕೆಲ ತಿಂಗಳ ಹಿಂದೆ ಸಂಸತ್ ನ ಸ್ಥಾಯಿ ಸಮಿತಿ ಕೂಡ ಆರ್ಥಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸಲು ಸಲಹೆ ನೀಡಿತ್ತು. ಮಧ್ಯಪ್ರದೇಶ ಮೊದಲ ರಾಜ್ಯವಾಗಿ ಆರ್ಥಿಕ ವರ್ಷವನ್ನು ಮುಂದಿನ ಸಾಲಿನಿಂದ ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸಿದೆ.

English summary
Come 2018 and the financial year in India could commence from January instead of April as the Centre appears set to make the historic transition to end the 150-year-old tradition. Accordingly, the next Budget could be presented by the Centre in November this year, high level government sources told PTI told
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X