ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ನಿಂದ ಪಿಎ‍ಫ್ ವಿಥ್ ಡ್ರಾ ಬಹಳ ಸುಲಭ

|
Google Oneindia Kannada News

ನವದೆಹಲಿ, ನ. 23 : ಕಾರ್ಮಿಕರ ಭವಿಷ್ಯ ನಿಧಿ(ಪಿಎಫ್) ವಾಪಸಾತಿ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಆನ್ ಲೈನ್ ಪರಿಹಾರ ದೊರೆಯಲಿದೆ. ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದು ಡಿಸೆಂಬರ್ ವೇಳೆಗೆ ಯೋಜನೆ ಜನರ ಕೈ ಸೇರಲಿದೆ.

ಸದ್ಯ ಪಿಎಫ್ ಸೌಲಭ್ಯವುಳ್ಳ ನೌಕರರು ತಮ್ಮ ದೂರುಗಳನ್ನು ಅಥವಾ ವಾಪಸಾತಿಗೆ ಬೇಕಾದ ದಾಖಲೆಗಳನ್ನು ಕೈ ನಲ್ಲೇ ಬರೆದು ಕೊಡುವ ಪದ್ಧತಿಯಿದೆ. ಇದಕ್ಕೆ ಪರ್ಯಾಯವಾಗಿ ಆನ್ ಲೈನ್ ವ್ಯವಸ್ಥೆ ಜಾರಿಯಾಗಲಿದೆ.[ಭವಿಷ್ಯನಿಧಿ ಎಲ್ಲಾ ಮಾಹಿತಿ ಅಂತರ್ಜಾಲದಲ್ಲೇ ಸಿಗುತ್ತೆ]

pf

ಆನ್ ಲೈನ್ ಮೂಲಕ ಅರ್ಜಿ ದಾಖಲು ಮಾಡುವವರು ತಮ್ಮ ಕೆಲಸ ಮುಗಿಸಿಕೊಳ್ಳಲು ಮೂರು ದಿನದ ಕಾಲಾವಕಾಶ ಪಡೆದುಕೊಳ್ಳುತ್ತಾರೆ. ಡಿಸೆಂಬರ್ ಮಧ್ಯದ ವೇಳೆಗೆ ಸೌಲಭ್ಯ ಜನರ ಕೈ ಸೇರಲಿದೆ ಎಂದು ಇಲಾಖೆಯ ವರದಿಯೊಂದು ತಿಳಿಸಿದೆ.

ಎಲ್ಲರ ಪಿಎಫ್ ಖಾತೆಗಳು ಆಧಾರ್ ನಂಬರ್ ನೊಂದಿಗೆ ಹೊಂದಾಣಿಕೆಯಾಗಿರಬೇಕು. ಇಂಥವರು ಮಾತ್ರ ಸವಲತ್ತು ಬಳಸಿಕೊಳ್ಳಲು ಯೋಗ್ಯರಾಗಿರುತ್ತಾರೆ. ಆಧಾರ್ ಚೀಟಿ ಬಯೋಮೆಟ್ರಿಕ್ ಪದ್ಧತಿಯಲ್ಲಿ ನೀಡಲ್ಪಟ್ಟಿರುವುದರಿಂದ ಮೋಸ ನಡೆಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.[ಭವಿಷ್ಯ ನಿಧಿ ಮಾಹಿತಿ ಪಡೆಯುವುದು ಹೇಗೆ?]

ಕೈಯಲ್ಲಿ ಬರೆದು ನೀಡಿದ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗಲ್ಲ. ಕೆಲವೊಮ್ಮೆ ಒಂದು ತಿಂಗಳಿಗೂ ಅಧಿಕ ಕಾಲ ತೆಗೆದುಕೊಂಡ ದಾಖಲೆಯಿದೆ. ಅಲ್ಲದೇ ಬರೆಯುವಾಗ ಮಾಡಿದ ಕೆಲ ತಪ್ಪುಗಳು ಅರ್ಜಿಯನ್ನು ಅನರ್ಹಗೊಳಿಸುವ ಸಾಧ್ಯತೆಯಿರುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲಾಖೆ ಎಲ್ಲ ದೂರುಗಳನ್ನು ಕ್ಷಿಪ್ರವಾಗಿ ಬಗೆಹರಿಸಲು ಇಂಥ ಯೋಜನೆ ಜಾರಿ ಮಾಡುತ್ತಿದೆ. ಕೇವಲ ಮೂರು ದಿನದಲ್ಲಿ ವಾಪಸಾತಿ ಪ್ರಕ್ರಿಯೆ ಪೂರ್ಣ ಮಾಡಬಹುದು. ಶೇ. 20 ರಿಂದ 30 ರಷ್ಟು ಪಿಎಫ್ ಗೆ ಸಂಬಂಧಿಸಿದ ದೂರುಗಳನ್ನು ಈ ವರ್ಷದ ಅಂತ್ಯಕ್ಕೆ ಆನ್ ಲೈನ್ ಮುಖಾಂತರವೇ ಬಗೆಹರಿಸಲಾಗುವುದು. ಕಳೆದ ವರ್ಷ ಸುಮಾರು 1.21 ಕೋಟಿ ರೂ ಹಣವನ್ನು ಪಿಎಫ್ ಸಂಬಂಧಿಸಿದಂತೆ ನೀಡಲಾಗಿದೆ ಎಂದು ತಿಳಿಸಿದರು.[ವಿದೇಶದ ಭಾರತೀಯ ಕಂಪನಿ ಉದ್ಯೋಗಿಗಳಿಗೂ ಭವಿಷ್ಯ ನಿಧಿ]

ಸುಮಾರು 4 ಕೋಟಿ ಜನರಿಗೆ ಇತ್ತೀಚೆಗಷ್ಟೇ ಇಲಾಖೆ ಯುನಿವರ್ಸಲ್ ಅಕೌಂಟ್ ನಂಬರ್ ನೀಡಿತ್ತು. ಅಲ್ಲದೇ ಬ್ಯಾಂಕ್ ಖಾತೆ ಮತ್ತು ಪಿಎಫ್ ಅಕೌಂಟ್ ಆಧಾರ್ ನಂಬರ್ ನೊಂದಿಗೆ ಹೊಂದಿಕೊಂಡಿರಬೇಕು ಎಂದು ತಿಳಿಸಲಾಗಿತ್ತು.

English summary
Retirement fund body EPFO will launch the online facility for submitting provident fund withdrawal claims in December, which would quicken such settlements and benefit its over five crore subscribers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X