ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್, ಬಾಂಗ್ಲಾ ಗಡಿಯಲ್ಲಿ ನಕಲಿ ನೋಟಿಗೆ ಪೂರ್ಣವಿರಾಮ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ ನವೆಂಬರ್ 18: ಗಡಿಭಾಗದಲ್ಲಿ ನಕಲಿ ಹಣ ಚಲಾವಣೆ ಸಂಫೂರ್ಣವಾಗಿ ನಿಂತು ಹೋಗಿದೆ ಎಂದು ಭಾರತದ ಸಹಾಯಕ ಸಚಿವ ಕಿರಣ್ ರಿಜೀಜು ತಿಳಿಸಿದ್ದಾರೆ.

ಐನೂರು ಮತ್ತು ಸಾವಿರ ರು ನೋಟು ಬದಲಾದ ಮೇಲೆ ಭಾರತಕ್ಕೆ ಯಾವುದೇ ರೀತಿಯ ಖೋಟಾನೋಟುಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹರಿದು ಬರುತ್ತಿಲ್ಲ ಎಂದಿದ್ದಾರೆ.

ಮೋದಿಯವರ ನೋಟು ರದ್ದು ನಿರ್ಧಾರದಿಂದಾಗಿ ಪೂರ್ಣ ಪ್ರಮಾಣದಲ್ಲಿ ಖೋಟಾನೋಟು ದಂಧೆಯ ಹುಟ್ಟಡಗಿದ್ದು, ನವೆಂಬರ್ ಎಂಟರಿಂದಾಚೆಗೆ 1000 ಕೋಟಿ ಕಪ್ಪುಹಣ ಪ್ರಯೋಜನಕ್ಕೆ ಬಾರದಂತಾಗಿದೆ.[ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ]

fake currency has completely stopped along the border areas

ಇಂಟಲಿಜನ್ಸ್ ಬ್ಯೂರೋ ಅಧಿಕಾರಿಗಳು ಹೇಳುವ ಪ್ರಕಾರ ಹೊಸ ನೋಟಿನ ನಿರ್ಧಾರದಿಂದ ಎಲ್ಲರನ್ನು ಬೆದರಿಸುತ್ತಿದ್ದ ಪಾಕಿಸ್ತಾನವು ಯಾರನ್ನೂ ದೋಷಿಯನ್ನಾಗಿಸದ ಸ್ಥಿತಿಗೆ ಬಂದಿದೆ.

ನವೆಂಬರ್ 8 ರವರೆಗೆ ಮಾರುಕಟ್ಟೆಯಲ್ಲಿ ರು 5000 ಸಾವಿರ ಕೋಟಿಗೂ ಹೆಚ್ಚು ಇದ್ದ ನಕಲಿ ಹಣ ಈಗ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ ಎಂದಿದ್ದಾರೆ.

ಪಾಕಿಸ್ತಾನಿಗಳು ಏನಾದರೂ ನೋಟುಗಳನ್ನು ಮತ್ತೆ ಮುದ್ರಿಸಬೇಕಾದರೆ ಭಾರತವು ಎಲ್ಲಿ ನೋಟುಗಳಿಗಾಗಿ ಪೇಪರ್ ಖರೀದಿಸಿತ್ತೋ ಅಲ್ಲಿಗೆ ಹೋಗಬೇಕು.

ಆದರೆ ಮರು ಮುದ್ರಣಕ್ಕೆ ಮತ್ತೆ ನೋಟಿನ ಮೌಲ್ಯವನ್ನೇ ತೆರಬೇಕಾಗುತ್ತದೆ. ಈ ಕೆಲಸಕ್ಕೆ ಕೈಹಾಕಿದರೆ ಕೈ ಸುಟ್ಟುಕೊಳ್ಳುವುದು ಖಚಿತ. ಹಾಗು ನಕಲಿ ಹಣವನ್ನು ಇನ್ನು ಮುಂದೆ ಭಾರತದಲ್ಲಿ ತರುವುದು ಮತ್ತು ವ್ಯವಹರಿಸುವುದು ಕಷ್ಟಸಾಧ್ಯ.

ನಕಲಿ ಹಣದಿಂದ ದೇಶದ ಆರ್ಥಿಕ ಪ್ರಗತಿಯನ್ನು ಹತ್ತಿಕ್ಕಲು ಕಾಯುತ್ತಿದ್ದ ನೆರೆ ದೇಶಗಳಿಗೆ ಹೊಸ ನೋಟಿನ ಬದಲಾವಣೆಯಿಂದ ತನ್ನ ಎಲ್ಲ ಬುಡಮೇಲು ಚಟುವಟಿಕೆಗಳಿಗೂ ಪೂರ್ಣವಿರಾಮ ಹಾಕಿದಂತಾಗಿದೆ.

English summary
The movement of fake currency has completely stopped along the border areas, India's junior minister for home Kiren Rijiju said today. He said that there is no movement of fake notes along the India, Pakistan and Bangladesh borders after the decision to declare currency of Rs 500 and 1,000 had been announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X