ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಟ್ವಿಟ್ಟರ್ ಪರಿಚಯ ಪುಟದಿಂದ 'ಖಾತೆ' ಮಾಯ

By Mahesh
|
Google Oneindia Kannada News

ಬೆಂಗಳೂರು, ಜುಲೈ 22: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಪುಟ ಅಚ್ಚರಿಯ ರೀತಿಯಲ್ಲಿ ಬದಲಾಗಿದೆ. ಅವರ ಟ್ವಿಟ್ಟರ್ ಪರಿಚಯ ಪುಟದಿಂದ 'ವಿದೇಶಾಂಗ ಖಾತೆ' ಮಾಯವಾಗಿದೆ. ಲಲಿತ್ ಮೋದಿ ಹಗರಣದಲ್ಲಿ ಸಿಲುಕಿರುವ ಸುಷ್ಮಾ ಅವರು ಕೊನೆಗೂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದೇ? ಎಂಬ ಅನುಮಾನ ದಟ್ಟವಾಗಿ ಹಬ್ಬುತ್ತಿದೆ.

ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಲಲಿತ್ ಗೇಟ್ ಹಗರಣ ಕಲಾಪವನ್ನು ನುಂಗಿ ಹಾಕಿದೆ. ದೆಹಲಿಯಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಎದುರು ವಿಪಕ್ಷಗಳು ಪ್ರತಿಭಟನೆ ನಡೆಸಿ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. [ಲಮೋ ಎಂದರೇನು? ರಾಜಕಾರಣಿಗಳು ಏಕೆ ಹೆದರುತ್ತಾರೆ?]

ಸುಷ್ಮಾ ಅವರು ಕೂಡಾ ಟ್ವಿಟ್ಟರ್ ಮೂಲಕವೇ ಕಾಂಗ್ರೆಸ್ಸಿಗರಿಗೆ ತಕ್ಕ ಉತ್ತರ ನೀಡುತ್ತಾ ಬಂದಿದ್ದರು. ಆದರೆ. ಈಗ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ 'ವಿದೇಶಾಂಗ ಸಚಿವೆ' ತೆಗೆದು ಹಾಕಲಾಗಿದೆ. [ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ನಾಲ್ಕು ಘಟವಾಣಿಯರು]

ಸಂಸತ್ ಮಳೆಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಬಾಂಬ್ ಸಿಡಿಸಿದ್ದರು.

ಸಂತೋಷ್ ಬರ್ಗೋಡಿಯಾ ಹೆಸರೆತ್ತಿದ ಸುಷ್ಮಾ

ಸಂತೋಷ್ ಬರ್ಗೋಡಿಯಾ ಹೆಸರೆತ್ತಿದ ಸುಷ್ಮಾ

ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ್ ಬರ್ಗೋಡಿಯಾ ಹೆಸರೆತ್ತಿದ ಸುಷ್ಮಾ ಅವರು ಕಲ್ಲಿದ್ದಲು ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ಕಾಂಗ್ರೆಸ್ ನಿಂದ ವಿರುದ್ಧ ಕಿಡಿಕಾರಿದ್ದರು.

ಸುಷ್ಮಾ ಟ್ವಿಟ್ಟರ್ ಪುಟ ಬದಲಾಯಿಕೊಳ್ಳಲಿ

ಸುಷ್ಮಾ ಟ್ವಿಟ್ಟರ್ ಪುಟ ಬದಲಾಯಿಕೊಳ್ಳಲಿ ಕನಸುಗಾರ್ತಿ, ಫೋಟೋಗ್ರಾಫರ್ ಎಂದು ನಮೂದಿಸಲಿ.

ಸುಷ್ಮಾ ಅವರೇ ನೀವು ಕೇಂದ್ರ ಸಚಿವೆ ಅಲ್ಲವೇ?

ಸುಷ್ಮಾ ಅವರೇ ನೀವು ಕೇಂದ್ರ ಸಚಿವೆ ಅಲ್ಲವೇ?, ವಿದೇಶಾಂಗ ಖಾತೆ ಕೈ ತಪ್ಪಿತೇ?

ಟ್ವಿಟ್ಟರ್ ಖಾತೆ ಪರಿಚಯ ಬದಲಾದ ಚಿತ್ರಗಳು

ಟ್ವಿಟ್ಟರ್ ಖಾತೆ ಪರಿಚಯ ಬದಲಾದ ಚಿತ್ರಗಳನ್ನು ನೀಡಿದ ಸಾರ್ವಜನಿಕರು.

English summary
"Fought 10 elections Six terms MP Chief Minister of Delhi Union Minister for Health I&B Telecom Leader of Oppn Lok Sabha." The last time her bio was blank was three years ago after putting up a very poignant status on how she has "Spent a life to know India."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X