ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಟೂರಿಸ್ಟ್ ವೀಸಾ 37 ದೇಶಕ್ಕೆ ವಿಸ್ತರಣೆ

By Mahesh
|
Google Oneindia Kannada News

ಬೆಂಗಳೂರು, ಫೆ.26: ಇ ಟೂರಿಸ್ಟ್ ವೀಸಾ ಸೌಲಭ್ಯವನ್ನು ಇನ್ನೂ 37 ದೇಶಗಳಿಗೆ ವಿಸ್ತರಿಸಲಾಗಿದೆ. ಈಗ ಈ ಸೌಲಭ್ಯವನ್ನು ಒಟ್ಟು 150 ದೇಶಗಳಿಗೆ ವಿಸ್ತರಿಸಲಾಗಿದೆ. ಫೆಬ್ರವರಿ 26ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಜೈಷನ್(ಈಟಿಎ) ಸೌಲಭ್ಯದ ಮೂಲಕ ಪ್ರವಾಸಿ ವೀಸಾವನ್ನು ನಾಗರೀಕರು ಪಡೆದುಕೊಳ್ಳಬಹುದು. [ವಿದೇಶದಲ್ಲಿನ ಭಾರತೀಯ ಮೂಲದ ವ್ಯಕ್ತಿಗಳಿಗೆ ಶಾಶ್ವತ ವೀಸಾ!]

37 ರಾಷ್ಟ್ರಗಳು ಹೊಸ ಸೇರ್ಪಡೆ: ಅಲ್ಬಾನಿಯಾ, ಆಸ್ಟ್ರೀಯ, ಬೋಸ್ನಿಯಾ ಅಂಡ್ ಹರ್ಜೆಗೋವಿನಾ, ಬೋಟ್ಸ್ ವಾನಾ, ಬ್ರೂನೈ, ಬಲ್ಗೇರಿಯಾ, ಕೇಪ್ ವರ್ಡ್, ಕಾಮೊರೊಸ್, ಕೋಟ್ ಡಿ ಐವೊರೆ, ಕ್ರೋವೇಷಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎರಿಟ್ರಿಯಾ, ಗಬಾನ್, ಗಾಂಬಿಯಾ, ಘಾನಾ, ಗ್ರೀಸ್, ಗಿನಿಯಾ, ಐಸ್ ಲ್ಯಾಂಡ್, ಲೆಸೊಥೋ, ಲಿಬೇರಿಯಾ, ಮಡಗಾಸ್ಕರ್, ಮಲಾವಿ, ಮಾಲ್ಡೋವಾ, ನಮಿಬಿಯಾ, ರೊಮಾನಿಯಾ, ಸ್ಯಾನ್ ಮರಿನೋ, ಸೆನೆಗಾಲ್, ಸೆರ್ಬಿಯಾ, ಸ್ಲೋವಾಕಿಯಾ, ದಕ್ಷಿಣ ಆಫ್ರಿಕಾ, ಸ್ವಜಿಲ್ಯಾಂಡ್, ಸ್ವಿಟ್ಜರ್ಲೆಂಡ್, ತಜಿಕಿಸ್ತಾನ್, ಟ್ರಿನಿಡಾಡ್ ಅಂಡ್ ಟೊಬಾಗೋ, ಜಾಂಬಿಯಾ ಹಾಗೂ ಜಿಂಬಾಬ್ವೆ. [ವೀಸಾ ಆನ್ ಅರೈವಲ್ ಪಡೆದ 43 ದೇಶಗಳ ಪಟ್ಟಿ]

ಕಳೆದ ಹತ್ತು ತಿಂಗಳಿನಲ್ಲಿ ಭಾರತ ಸುಮಾರು 51.79 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರನ್ನು ಕಂಡಿದೆ. 7.50 ಲಕ್ಷ ಇ ಟೂರಿಸ್ಟ್ ವೀಸಾ ವಿತರಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ವಿದೇಶಿ ಪ್ರವಾಸಿಗರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಮ್ಮ ಭಾವಚಿತ್ರ, ಪಾಸ್ ಪೋರ್ಟ್ ವಿವರಗಳನ್ನು ದಾಖಲಿಸಬೇಕು, ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ನಂತರ ಈಟಿಎನಿಂದ ಇಮೇಲ್ ಕಳಿಸಲಾಗುತ್ತದೆ.

ಏನೇನು ಅನುಮತಿ ಸಿಗಲಿದೆ

ಏನೇನು ಅನುಮತಿ ಸಿಗಲಿದೆ

ಪ್ರವಾಸಿ ವೀಸಾ ಮೂಲಕ ದೇಶದ ಪ್ರವಾಸಿ ತಾಣಗಳ ವೀಕ್ಷಣೆ, ಗೆಳೆಯರು, ಆಪ್ತ ಬಳಗವನ್ನು ಭೇಟಿ ಮಾಡುವುದು, ಕಡಿಮೆ ಅವಧಿಯ ವೈದ್ಯಕೀಯ ನೆರವು ಪಡೆದುಕೊಳ್ಳುವುದು, ಸಣ್ಣಪುಟ್ಟ ವ್ಯಾಪಾರ ವಹಿವಾಟಿಗೂ ಅನುಮತಿ ಸಿಗಲಿದೆ.

ಮೊದಲ ಹಂತದಲ್ಲಿ ಇಸ್ರೇಲ್, ಪ್ಯಾಲೆಸ್ಟೈನ್, ಜರ್ಮನಿ, ಯುಎಸ್, ಆಸ್ಟ್ರೇಲಿಯಾ ಸೇರಿದಂತೆ 40ಕ್ಕೂ ಅಧಿಕ ದೇಶದ ನಾಗರಿಕರಿಗೆ ಇವೀಸಾ ಸೌಲಭ್ಯ ನೀಡಲಾಗಿತ್ತು.

ಮೋದಿ ಅವರ ಕನಸಿನ ಸೌಲಭ್ಯ

ಮೋದಿ ಅವರ ಕನಸಿನ ಸೌಲಭ್ಯ ಇದಾಗಿದ್ದು, ನವೆಂಬರ್ 27, 2014 ರಂದು ಚಾಲನೆ ನೀಡಲಾಯಿತು. ಇಲ್ಲಿ ತನಕ ಸುಮಾರು 113 ದೇಶಗಳಿಗೆ ಹಾಗೂ 16 ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಇತ್ತು. ಈಗ ಈ ಸೌಲಭ್ಯ ಇನ್ನಷ್ಟು ವಿಸ್ತರಣೆಗೊಂಡಿದೆ. ಇದರಿಂದ ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇ ಟೂರಿಸ್ಟ್ ವೀಸಾದ ಸದುಪಯೋಗ

ಇ ಟೂರಿಸ್ಟ್ ವೀಸಾದ ಸದುಪಯೋಗದಿಂದ ಪ್ರವಾಸಿಗರ ಸಂಖ್ಯೆ ಜನವರಿ ತಿಂಗಳಿನಲ್ಲಿ ಶೇ 252.3ರಷ್ಟು ಏರಿಕೆ ಕಂಡಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶೇ 5.35ರಷ್ಟು ಬೇಡಿಕೆ ಇತ್ತು.

English summary
The e-Tourist Visa (e-TV) facility will be extended to 37 more countries from tomorrow. The total count of countries under the scheme will become 150.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X