ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್ : ಜಾರ್ಖಂಡ್‌ನಲ್ಲಿ ಕಮಲ, ಜಮ್ಮುನಲ್ಲಿ ಅತಂತ್ರ

By Prasad
|
Google Oneindia Kannada News

ನವದೆಹಲಿ, ಡಿ. 20 : ಜಮ್ಮು ಮತ್ತು ಕಾಶ್ಮೀರ ಹಾಗು ಜಾರ್ಖಂಡ್ ನಲ್ಲಿ ಶನಿವಾರ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಜಾರ್ಖಂಡ್ ನಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಗಳಿಸಲಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ.

Exit poll : BJP to get majority in Jharkhand, hung assembly in J&K

ಎಬಿಪಿ ನ್ಯೂಸ್-ನೀಲ್ಸನ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, 81 ವಿಧಾನಸಭೆ ಸೀಟುಗಳಿರುವ ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತಿತರ ಮೈತ್ರಿ ಪಕ್ಷಗಳು 52 ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದುಗೆ ಏರಲಿದೆ. ಕಾಂಗ್ರೆಸ್ ಕೇವಲ 9 ಸ್ಥಾನ ಗಳಿಸಲು ಶಕ್ಯವಾದರೆ, ಜಾರ್ಖಂಡ್ ಮುಕ್ತಿ ಮೋರ್ಚಾ 10, ಜೆವಿಎಂ 6 ಸ್ಥಾನಗಳನ್ನು ಪಡೆಯಲಿವೆ. ಉಳಿದ ಸ್ಥಾನಗಳ ಇತರರ ಪಾಲಾಗಲಿವೆ.

ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಂತೆ, 87 ವಿಧಾನಸಭೆ ಸ್ಥಾನಗಳಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಜನತಾ ಪಕ್ಷ 27-33, ಪಿಡಿಪಿ 32-38, ರಾಷ್ಟ್ರೀಯ ಕಾಂಗ್ರೆಸ್ 8-14 ಮತ್ತು ಕಾಂಗ್ರೆಸ್ 4-10 ಸ್ಥಾನ ಗಳಿಸಲಿವೆ. ಇದರ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದು ಖಚಿತವಾಗಿದೆ.


ಎರಡೂ ರಾಜ್ಯಗಳಲ್ಲಿ ಐದು ಹಂತದಲ್ಲಿ ಮತದಾನ ನಡೆದಿತ್ತು. ನವೆಂಬರ್ 25ರಂದು ಮೊದಲ ಹಂತದ ಮತದಾನ ಜರುಗಿತ್ತು. ಪ್ರತ್ಯೇಕವಾದಿಗಳಿಂದ ಮತದಾನ ಬಹಿಷ್ಕರಿಸಲು ಕರೆ ನೀಡಲಾಗಿದ್ದರೂ, ಬೆದರಿಕೆಯನ್ನು ಧಿಕ್ಕರಿಸಿದ್ದ ಜನತೆ, ಬಂದೂಕಿನ ನಳಿಕೆಯಡಿಯಲ್ಲಿ ಶೇ.70ರಷ್ಟು ಮತದಾನ ಮಾಡಿದ್ದರು. ಬುಲೆಟ್ಟಿಗಿಂತ ಮತದಾನದಲ್ಲಿ ಹೆಚ್ಚಿನ ಶಕ್ತಿಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನರನ್ನು ಹುರಿದುಂಬಿಸಿದ್ದರು.

English summary
ABP News-Neilsen exit poll suggests majority for Bharatiya Janata Party in Jharkhand. BJP to get 52 seats out of 81 assembly seats. As per C-Voter survey, it is going to be hung assembly in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X