ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 3ರಿಂದ ಮತಯಂತ್ರ ಹ್ಯಾಕಥಾನ್ ಸವಾಲು: ಚುನಾವಣಾ ಆಯೋಗ

ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.

|
Google Oneindia Kannada News

ನವದೆಹಲಿ, ಮೇ 20: ಮುಂದಿನ ತಿಂಗಳ 3ರಿಂದ ಬಹಿರಂಗ ಸವಾಲಿಗೆ ಸಿದ್ಧ ಎಂದು ಕೇಂದ್ರ ಚುನಾವಣಾ ಆಯೋಗ (ಇಸಿ) ಶನಿವಾರ ಘೋಷಿಸಿದೆ. ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಇಸಿ, ಶನಿವಾರ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು.

ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸಿ ಆಯುಕ್ತ ಡಾ. ನಾಸೀಂ ಝೈದಿ, ''ಮತ ಯಂತ್ರಗಳಲ್ಲಿ ಯಾವುದೇ ದೋಷವಿಲ್ಲ. ಆದರೂ ಇದರ ದೋಷಗಳನ್ನು ಪತ್ತೆ ಹಚ್ಚುವಲ್ಲಿ ಯಾವುದಾದರೂ ರಾಜಕೀಯ ಪಕ್ಷಗಳು ಮುಂದೆಬರುವುದಾದರೆ ಬರಬಹುದು'' ಎಂದು ತಿಳಿಸಿದ್ದಾರೆ.

ಪ್ರತಿ ಪಕ್ಷಕ್ಕೆ 3 ಅವಕಾಶ: ಮತ ಯಂತ್ರ ದೋಷ ಸಾಬೀತು ಸವಾಲನ್ನು ಸ್ವೀಕರಿಸುವ ಯಾವುದೇ ರಾಜಕೀಯ ಪಕ್ಷವು, ತನ್ನ ಮೂವರು ಅಧಿಕೃತ ವ್ಯಕ್ತಿಗಳನ್ನು ನೊಂದಾಯಿಸಬೇಕು. ಇದೇ ತಿಂಗಳ 26ರೊಳಗೆ ರಾಜಕೀಯ ಪಕ್ಷಗಳು ಈ ಸವಾಲು ಸ್ವೀಕರಿಸುವಲ್ಲಿ ತಮಗಿರುವ ಆಸಕ್ತಿಯನ್ನು ಆಯೋಗಕ್ಕೆ ತಿಳಿಸಬೇಕು. ಅಧಿಕೃತ ವ್ಯಕ್ತಿಗಳ ಹೆಸರನ್ನು ನೊಂದಾಯಿಸಿದ ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಯಂತ್ರ ಪರೀಕ್ಷೆಗೆ ಅನುವು ಮಾಡಿಕೊಡಲಾಗುವುದು ಎಂದು ಝೈದಿ ತಿಳಿಸಿದ್ದಾರೆ.

EVM challenge to start from June 3 onwards

ಹಾಗೆ ಪರೀಕ್ಷೆಗಾಗಿ ಬರುವ ವ್ಯಕ್ತಿಯು ಮತ ಯಂತ್ರಗಳನ್ನು ವಿರೂಪಗೊಳಿಸುವುದು ಅಥವಾ ಮತ್ಯಾವುದೇ ಥರವಲ್ಲದ ಕ್ರಮಗಳ ಮೂಲಕ ಪರೀಕ್ಷೆ ನಡೆಸಲು ಹೋಗುವಂತಿಲ್ಲ. ಪರೀಕ್ಷೆ ನಡೆಸಲು ಬಂದ ವ್ಯಕ್ತಿಯು ಅರ್ಧಕ್ಕೇ ಪರೀಕ್ಷೆಯಿಂದ ಹಿಂದೆ ಸರಿದರೆ ಆತ ಸೋತನೆಂದೇ ಅರ್ಥ.

ಝೈದಿ ಹೇಳಿದ ಇತರ ಹೇಳಿಕೆಗಳು ಹೈಲೈಟ್ಸ್ ಇಲ್ಲಿವೆ...

- ಮಲೇಷ್ಯಾ ಮುಂತಾದ ಕಡೆಗೆ ಉಪಯೋಗಿಸುವ ಮತಯಂತ್ರಗಳಲ್ಲಿನ ಡೇಟಾವನ್ನು ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ನಲ್ಲಿ ದಾಖಲಿಸಬಹುದು. ಆದರೆ, ನಮ್ಮ ಮತಯಂತ್ರಗಳಲ್ಲಿನ ದತ್ತಾಂಶವನ್ನು ಹಾಗೆ ಬೇರೆಡೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಹಾಗಾಗಿ, ಇದು ಶೇ. 100ರಷ್ಟು ಸೇಫ್.

- ಮುಂದಿನ ಚುನಾವಣೆಗಳಲ್ಲಿ ವಿವಿಪಿಎಟಿ ತಂತ್ರಜ್ಞಾನವುಳ್ಳ ಮೆಷೀನ್ ಗಳನ್ನೂ ಮತ ಯಂತ್ರಗಳ ಜತೆಗೆ ಉಪಯೋಗಿಸುತ್ತೇವೆ. ಹಾಗಾಗಿ, 13.95 ಲಕ್ಷ ಬ್ಯಾಲೆಟ್ ಯೂನಿಟ್ ಗಳು, 9.3 ಲಕ್ಷ ಬ್ಯಾಲೆಟ್ ಕಂಟ್ರೋಲ್ ಯೂನಿಟ್ ಗಳು ಹಾಗೂ 16.5 ಲಕ್ಷ ವಿವಿಪಿಎಟಿ ಗಳನ್ನು ತಯಾರಿಸಲು ಆದೇಶಿಸಲಾಗಿದೆ.

- ಹಾಗೊಂದು ವೇಳೆ, ಮತ ಯಂತ್ರಗಳನ್ನು ಸುಲಭವಾಗಿ ದೋಷಪೂರಿತವಾಗಿಸಬಹುದು ಎಂದಾದರೆ, ನಾವು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸುತ್ತೇವೆ.

English summary
The Election Commission of India (ECI) on Saturday demonstrated the working of Electronic Voting Machines (EVMs) and Voter Verifiable Paper Audit Trail System (VVPATs) in the national capital. After that, it throws an open challenge to all political parties to prove their complaint about machines can be tampered easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X