ಕಾರ್ಮಿಕರಿಗೆ ಸಿಹಿ ಸುದ್ದಿ: ಭವಿಷ್ಯ ನಿಧಿ(ಪಿಎಫ್) ಬಡ್ಡಿ ದರ ಏರಿಕೆ!

Posted By:
Subscribe to Oneindia Kannada

ನವದೆಹಲಿ, ಫೆ. 16: ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ8.8ಕ್ಕೆ ಏರಿಕೆ ಮಾಡಲು ಪಿಂಚಣಿ ನಿಧಿ ನಿರ್ವಹಣಾ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ನಿರ್ಧರಿಸಿದೆ. 2015-16ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ನೂತನ ಪಿಎಫ್ ಬಡ್ಡಿದರ ಜಾರಿಗೆ ಬರಲಿದೆ.

ಇಪಿಎಫ್ ಒ ನೀಡಿರುವ ಹೊಸ ಪರಿಷ್ಕೃತ ದರಕ್ಕೆ ಕೇಂದ್ರ ಕಾರ್ಮಿಕ ಖಾತೆ ಸಚಿವ ಬಂಡಾರು ದತ್ತಾತ್ರೇಯ ಅವರು ಸಮ್ಮತಿ ಸೂಚಿಸಿದ್ದಾರೆ. ಶೇ 8.75 ರಷ್ಟಿದ್ದ ಬಡ್ಡಿದರವನ್ನು 0.05% ಹೆಚ್ಚು ಮಾಡಲಾಗಿದೆ. ಕೇಂದ್ರಿಯ ಸಮಿತಿ (ಸಿಬಿಟಿ) ನಿರ್ಣಯಕ್ಕೆ ಅನುಗುಣವಾಗಿ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. [ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

EPFO hikes Provident Fund interest rate to 8.8% for 2015-16 financial year

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಸೇರಲಿದೆ.[ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]

ಇತ್ತೀಚೆಗೆ ಕಾರ್ಮಿಕರ ಪರ ನಿಲುವು ತಾಳಿದಿದ್ದ ಕೇಂದ್ರ ಸರ್ಕಾರ 10 ಅಥವಾ ಅದಕ್ಕಿ೦ತ ಹೆಚ್ಚು ನೌಕರರನ್ನು ಹೊಂದಿರುವ ಸ೦ಸ್ಥೆಗಳೂ ಪಿಎಫ್ ಸೌಲಭ್ಯ ನೀಡಬೇಕು ಎ೦ಬ ನಿಯಮ ಜಾರಿಗೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
Retirement fund body Employees' Provident Fund Organisation (EPFO) has increased the PF interest rate to 8.8 per cent for 2015-16 financial year Sources said
Please Wait while comments are loading...