ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಕೆಂಪು ಪಾಂಡಾ ರಕ್ಷಿಸಿದವರಿಗೊಂದು ನಮಸ್ಕಾರ...

|
Google Oneindia Kannada News

ತವಾಂಗ್, ಮೇ 30: ಅರುಣಾಚಲ ಪ್ರದೇಶದ ತೇಜ್ ಪುರ್- ತವಾಂಗ್ ಹೆದ್ದಾರಿಯಲ್ಲಿ ಸಶಸ್ತ್ರ ಸೀಮಾ ಬಲದ ಸಿಬ್ಬಂದಿ ಅಪರೂಪದ ಕೆಂಪು ಪಾಂಡಾವನ್ನು ರಕ್ಷಿಸಿದ್ದಾರೆ. ಈ ಕೆಂಪು ಪಾಂಡಾ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದೆ. ಅಚಾನಕ್ಕಾಗಿ ತೇಜ್ ಪುರ್- ತವಾಂಗ್ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ರಕ್ಷಿಸಲಾಗಿದೆ.

ಈ ಕೆಂಪು ಪಾಂಡಾವನ್ನು ಬೀದಿ ನಾಯಿಗಳು ಬೆನ್ನಟ್ಟಿದ್ದವು. ಇದು ಗಮನಕ್ಕೆ ಬಂದ ಕೂಡಲೇ ಅಂಜನಿ ಕುಮಾರ್ ನೇತೃತ್ವದ ಸಶಸ್ತ್ರ ಸೀಮಾ ಬಲದ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರು ಬಚಾವ್ ಮಾಡಿದ್ದಾರೆ. ಇದು ಅಪರೂಪದ ವನ್ಯಜೀವಿ ಎಂಬುದು ಅರಣ್ಯ ಇಲಾಖೆಯಿಂದ ಖಾತ್ರಿ ಆದ ನಂತರ ಸುರಕ್ಷಿತ ಜಾಗಕ್ಕೆ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಡಲಾಗಿದೆ.[ಜಂಗಲ್ ಡೈರಿ: ಇವುಗಳನ್ನು ಕೊಲ್ಲುವವರೇ ಇದ್ದಾರೆ, ಕಾಯೋರೆಲ್ಲಿ?]

Endangered Red Panda rescued by SSB along Tezpur-Tawang Highway

ಈ ಕೆಂಪು ಪಾಂಡಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು ಪೂರ್ವ ಹಿಮಾಲಯದಲ್ಲಿ. ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಏಕೆಂದರೆ ಅವುಗಳ ವಾಸಸ್ಥಾನವಾದ ಮರಗಳು ಹಾಗೂ ಬಿದಿರನ್ನು ಕಡಿಯುವುದು ಹೆಚ್ಚಾಗುತ್ತಿದೆ. ಇದರ ಜತೆಗೆ ಅವುಗಳ ವಾಸಸ್ಥಳಗಳನ್ನು ನಾಶ ಮಾಡಲಾಗುತ್ತಿದೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಅವುಗಳಿಗಳು ಭೇಟೆಗಾರರ ಉರುಳಿನಲ್ಲಿ ಸಿಕ್ಕಿಬೀಳುತ್ತಿವೆ.

ದ ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕರ್ನರ್ವೇಷನ್ ಆಫ್ ನೇಚರ್ ಪ್ರಕಾರ ಇಡೀ ಜಗತ್ತಿನಲ್ಲಿರುವ ವಯಸ್ಕ ಕೆಂಪು ಪಾಂಡಾಗಳ ಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿವೆ.

English summary
A Red Panda, which comes under the category of endangered animals, accidentally found itself in the inhabited area on the Tezpur-Tawang Highway, and was rescued by the Sashastra Seema Bal (SSB) on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X