ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುಟುಕು: ಮುಸ್ಲಿಮರಿಂದ ಕಾರ್ಗಿಲ್ ಯುದ್ಧ ಗೆದ್ದಿದ್ದು!

By Mahesh
|
Google Oneindia Kannada News

ಬೆಂಗಳೂರು, ಏ.8: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.45: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ 'ಕಾರ್ಗಿಲ್ ಯುದ್ಧ' ಹೇಳಿಕೆ ವಿವರ ಪಡೆಯುತ್ತಿರುವ ಚುನಾವಣಾ ಆಯೋಗ.
11.30: ಎಸ್ಪಿನಾಯಕ ಅಜಂ ಖಾನ್ ಅವರು ಕಾರ್ಗಿಲ್ ಯುದ್ಧ ಗೆಲ್ಲಲು ಭಾರತೀಯ ಸೇನೆಯಲ್ಲಿರುವ ಮುಸ್ಲಿಂ ಯೋಧರೇ ಕಾರಣ. ಹಿಂದೂ ಯೋಧರು ರಣರಂಗದಲ್ಲಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಜಂ ಖಾನ್ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿತ್ತು.

Here are the top news in brief for April 09, Tuesday

11.00: ಭಾರಿ ಜನಸ್ತೋಮದೊಂದಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

10.45: ಎಎಪಿ ಅಭ್ಯರ್ಥಿ ಆಶುತೋಷ್ ಅವರು ಕಪಿಲ್ ಸಿಬಿಲ್ ರಿಂದ ಬೆದರಿಕೆ ಕರೆ ಬಂದಿದೆ ಎಂದು ಆರೋಪ ಹೊರೆಸಿದ್ದಾರೆ.

10.15: ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಮೇಲಿನ ಕಪಾಳಮೋಕ್ಷ ಪ್ರಕರಣವನ್ನು ಜೆಡಿಯು ನಾಯಕ ಕೆಸಿ ತ್ಯಾಗಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಜನ ಸಾಮಾನ್ಯರ ಕೃತ್ಯವಲ್ಲ, ರಾಜಕೀಯ ಪಕ್ಷಗಳ ಕುತಂತ್ರ ಎಂದಿದ್ದಾರೆ.

10.00: ಕೆನ್ನೆಗೆ ಬಾರಿಸಿದ ಆಟೋರಿಕ್ಷಾ ಚಾಲಕನನ್ನು ಅರವಿಂದ್ ಕೇಜ್ರಿವಾಲ್ ಇಂದು ಭೇಟಿ ಮಾಡಿ ಮಾತನಾಡಿಸಲಿದ್ದಾರೆ.

9.45: ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಮತಯಾಚನೆ ನಡೆಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋಲಾರದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ.

English summary
Elections 2014: Get all politic parties campaign information, candidates nomination, election commission releases.Lok Sabha election 2014 news in brief on April 09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X