ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದ ಸಚಿವ ಮಿಶ್ರಾಗೆ 3 ವರ್ಷ ಚುನಾವಣೆ ಸ್ಪರ್ಧೆ ನಿಷೇಧ!

|
Google Oneindia Kannada News

ನವದೆಹಲಿ, ಜೂನ್ 24 : ಚುನಾವಣೆ ವೆಚ್ಚದ ತಪ್ಪು ಮಾಹಿತಿ ನೀಡಿದ ಸಂಬಂಧ ಮಧ್ಯಪ್ರದೇಶದ ಹಿರಿಯ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಶನಿವಾರ ಆದೇಶ ಹೊರಡಿಸಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಆಯೋಗಕ್ಕೆ ಚುನಾವಣಾ ವೆಚ್ಚದ ಕುರಿತು ತಪ್ಪು ಮಾಹಿತಿ ಸಲ್ಲಿಸಿರುವ ಸಂಬಂಧ ಇಂದಿನಿಂದ ಅನ್ವಯವಾಗುವಂತೆ ಮೂರು ವರ್ಷ ಮಿಶ್ರಾ ಅವರನ್ನು ಅನರ್ಹಗೊಳಿಸಿದೆ.

Election Commission disqualifies MP minister Narottam Mishra for 3 years

ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಅವರ ಸಂಪುಟದ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಅವರು, 2008ರಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾ ವೆಚ್ಚಗಳ ವಿವರಗಳನ್ನು ಸಲ್ಲಿಸಿಲ್ಲ ಎಂದು ಕಾಂಗ್ರೆಸ್‌ನ ರಾಜೇಂದ್ರ ಭಾರತಿ ಆರೋಪಿಸಿದ್ದರು.

2013ರ ಜನವರಿ 15ರಂದು ಚುನಾವಣಾ ಆಯೋಗ ಮಿಶ್ರಾ ಅವರಿಗೆ ನೋಟಿಸ್ ನೀಡಿತ್ತು.ಮಿಶ್ರಾ ಅವರು ಚುನಾವಣಾ ಆಯೋಗ ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.

English summary
Madhya Pradesh minister Narottam Mishra today has been disqualified by the Election Commission of India over alleged corrupt practices and paid news during 2008 assembly polls in the state. Mr Mishra has been barred from contesting elections for three years. The assembly polls are likely to be held in December 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X