ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯಗೆ ಸೇರಿದ 6,600 ಕೋಟಿ ರು. ಆಸ್ತಿ ಜಪ್ತಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ,ಸೆಪ್ಟೆಂಬರ್, 03: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ಸುಸ್ತಿದಾರ, ಘೋಷಿತ ಅಪರಾಧಿ ವಿಜಯ್ ಮಲ್ಯಗೆ ಸೇರಿದ 6, 600 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಶನಿವಾರ ಜಾರಿ ನಿರ್ದೇಶಾನಲಯ(ಇಡಿ) ಜಪ್ತಿ ಮಾಡಿದೆ.

ಮಲ್ಯಗೆ ಸೇರಿದ ಒಟ್ಟು 8,044 ಕೋಟಿ ರು. ಆಸ್ತಿಯನ್ನು ವಶಕ್ಕೆ ಪಡೆಯಲಾಗುವುದು. ಶನಿವಾರ 6,600 ಕೋಟಿ ಆಸ್ತಿ ವಶಪಡಿಸಿಕೊಳ್ಳಲಾಗಿದ್ದು ವಿವರವನ್ನು ಇಂಗ್ಲೆಂಡ್ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.[ಬಾಕಿ ಇದ್ದರೂ ಮಲ್ಯಗೆ ಹೆಚ್ಚಿನ ಸಾಲ ಸಿಕ್ಕಿದ್ದು ಹೇಗೆ?]

mallya

ಈ ಮೂಲಕ ಅನೇಕ ದಿನಗಳಿಂದ ಕಾಡುತ್ತಿದ್ದ ವಿವಾದದ ಒಂದು ಹಂತ ಮುಗಿದಂತೆ ಆಗಿದೆ. ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ಅವರ ಮಂದ್ವಾ, ಬೆಂಗಳೂರು, ಯುನೈಟೆಡ್ ಬ್ರೆವರೀಸ್ ಲಿಮಿಟೆಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಮಹಾರಾಷ್ಟ್ರದಲ್ಲಿರುವ 200 ಕೋಟಿ ಮೌಲ್ಯ ಒಂದು ಫಾರ್ಮ್ ಹೌಸ್, ಬೆಂಗಳೂರಿನಲ್ಲಿರುವ 800 ಕೋಟಿ ಮೌಲ್ಯದ ಅಪಾರ್ಟ್ ಮೆಂಟ್, ಮಾಲ್, ಹಾಗೂ ಯುಬಿಎಲ್ ಮತ್ತು ಯುಎಸ್ ಎಲ್ ನ 3000 ಕೋಟಿ ಮೌಲ್ಯದ ಆಸ್ತಿಯನ್ನು ನಿರ್ದೇಶನಾಲಯ ತನ್ನ ವಶಕ್ಕೆ ಪಡೆದಿದೆ. ಭಾರತದ ವಿದೇಶಾಂಗ ಇಲಾಖೆ ಸಕಲ ಮಾಹಿತಿಯನ್ನು ಇಂಗ್ಲೆಂಡ್ ಗೆ ಕಳುಹಿಸಿಕೊಡಲಿದೆ.

English summary
The Enforcement Directorate today attached property worth Rs 6,600 crores belonging to liquor baron Vijay Mallya. The ED which carried out raids attached properties belonging to Mallya at Bengaluru and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X