ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸೇರಿದಂತೆ ಉತ್ತರ ಭಾರತದ ಹಲೆವೆಡೆ ಭೂಕಂಪ

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಸೋಮವಾರ ರಾತ್ರಿ ಭೂಕಂಪದ ಅನುಭವವಾಗಿದೆ. ದೆಹಲಿ, ನೋಯ್ಡಾ, ಉತ್ತರಾಖಂಡ್ ಸೇರಿದಂತೆ ಹಲವೆಡೆ 30 ಸೆಕೆಂಡುಗಳಿಗೂ ಅಧಿಕ ಕಾಲ ಭೂಮಿ ಕಂಪಿಸಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 06: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಸೋಮವಾರ ರಾತ್ರಿ ಭೂಕಂಪದ ಅನುಭವವಾಗಿದೆ. ದೆಹಲಿ, ನೋಯ್ಡಾ, ಉತ್ತರಾಖಂಡ್ ಸೇರಿದಂತೆ ಹಲವೆಡೆ 30 ಸೆಕೆಂಡುಗಳಿಗೂ ಅಧಿಕ ಕಾಲ ಭೂಮಿ ಕಂಪಿಸಿದೆ.

ಸೋಮವಾರ ರಾತ್ರಿ 10.35 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಉತ್ತರಾಖಂಡ್ ನ ರುದ್ರ ಪ್ರಯಾಗ ಭೂಕಂಪನ ಕೇಂದ್ರ ಬಿಂದುವಾಗಿದ್ದು, ರಿಕ್ಚರ್ ಮಾಪಕದಲ್ಲಿ 5.8ರಷ್ಟು ಪ್ರಮಾಣ ದಾಖಲಾಗಿದೆ.

Earthquake tremors felt across North India including Delhi, NCR Uttarakhand

ಹರ್ಯಾಣ, ಪಂಜಾಬ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಎನ್ ಸಿಆರ್ ಪ್ರದೇಶಗಳಲ್ಲಿ ಭೂ ಕಂಪನದ ಅನುಭವವಾಗಿದೆ. ಮನೆಯಲ್ಲಿದ್ದವರು ಹೊರಗಡೆ ಬಂದು ಆತಂಕದಿಂದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ.

ಇನ್ನಷ್ಟು ಭೂಕಂಪದ ಎಚ್ಚರಿಕೆ: ಇದು ರಿಕ್ಟರ್ ಮಾಪಕದಲ್ಲಿ 6 ರಿಂದ 8ರ ತನಕದ ಭೂಕಂಪ ಹಿಮಾಲಯ ಭಾಗದಲ್ಲಿ ಸಂಭವಿಸುವ ಸಾಧ್ಯತೆಯಿದೆ. ಭೂಗರ್ಭಶಾಸ್ತ್ರಜ್ಞ ಎಚ್ಎಸ್ ಎಂ ಪ್ರಕಾಶ್ ಅವರು ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡುತ್ತಾ ಹೇಳಿದರು. ಹಿಮಾಲಯದ ನೇಪಾಳ, ಕಾಶ್ಮೀರದ ಭಾಗದ ನಂತರ ಉತ್ತರಾಖಂಡ್ ನಲ್ಲಿ ಭೂಕಂಪವನ್ನು ನಿರೀಕ್ಷಿಸಲಾಗಿತ್ತು ಎಂದಿದ್ದಾರೆ.

English summary
An earthquake jolted parts of northern India, with tremors being felt in Delhi, Noida and Uttarakhand on Monday (Feb 06) evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X