ಪತ್ರಕರ್ತರಿಗೆ ಸುರೇಶ್ ಪ್ರಭು ನೀಡಿದ 'ವರ'

Subscribe to Oneindia Kannada

ನವದೆಹಲಿ, ಮಾರ್ಚ್, 16: ಪತ್ರಕರ್ತರಿಗೆ ರೈಲು ಸಂಚಾರ ಇನ್ನು ಮುಂದೆ ಮತ್ತಷ್ಟು ಸರಳವಾಗಲಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೇಳಿದಂತೆ ಪತ್ರಕರ್ತರಿಗೆ ರೈಲಿನಲ್ಲಿ ಇ-ಟಿಕೆಟ್ ಬುಕಿಂಗ್ ಸೌಲಭ್ಯ ನೀಡಿಕೆ ಮಾಡಿದೆ.

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಯೋಜನೆಗೆ ಚಾಲನೆ ನೀಡಿದ್ದಾರೆ. ಯೋಜನೆ ರಿಯಾಯಿತಿ ಪಾಸ್ ಹೊಂದಿರುವ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಲಿದೆ. ಈ ಮೊದಲು ಪಿಆರ್‌ಎಸ್ ಕೌಂಟರ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಇದೀಗ ರೈಲ್ವೆ ಒದಗಿಸಿರುವ ಐಡಿ ಕಾರ್ಡ್ ಸಂಖ್ಯೆ ಬಳಸಿ ಪತ್ರಕರ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.[ವಾಸನೆ ಬಟ್ಟೆಗಳಿಗೆ ಗುಡ್ ಬೈ: ರೈಲ್ವೆ ಪ್ರಯಾಣ ಮತ್ತಷ್ಟು ಹಿತಕರ]

E-ticket booking facility for journalists launched

ರೈಲ್ವೆ ಇಲಾಖೆ ಪತ್ರಕರ್ತರಿಗೆ ನೀಡಿರುವ ಕಾರ್ಡ್ ನ್ನು ಟಿಕೆಟ್ ಬುಕಿಂಗ್ ವೇಳೆ ನೀಡಬೇಕಾಗುತ್ತದೆ. ನೋಂದಣಿ ಸಂಖ್ಯೆಯ ಆಧಾರದಲ್ಲಿ ಟಿಕೆಟ್ ನೀಡಿಕೆ ಮಾಡಲಾಗುತ್ತದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಭಾರತೀಯ ರೈಲ್ವೆ ಸಕಲವನ್ನು ಆನ್ ಲೈನ್ ಮಯ ಮಾಡುತ್ತಿದೆ. ಹೊಸ ಹಾಸಿಗೆ ವಸ್ತ್ರಗಳನ್ನು ನೀಡುತ್ತೇನೆ ಎಂದು ರೈಲ್ವೆ ಇಲಾಖೆ ಹೇಳಿದ್ದು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು ತಿಳಿಸಿತ್ತು.

English summary
Journalists now need not go to counters for booking train tickets as the Railways on Tuesday, March 15 launched e-booking for scribes on concessional passes available to them.
Please Wait while comments are loading...