ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014ರಲ್ಲಿ ಸುದ್ದಿ ಮಾಡಿದ 'ದ್ವಾದಶ' ಮುಖ್ಯಮಂತ್ರಿಗಳು

|
Google Oneindia Kannada News

ಸದಾ ಸುದ್ದಿಯಲ್ಲಿ ಇರಲು ಬಯಸುವ ರಾಜಕಾರಣಿಗಳಿಗೆ 2014ರ ವರ್ಷ ಹರುಷದಾಯಕ ಮತ್ತು ನಿರಾಶಾದಾಯಕವಾದ ವರ್ಷವಾಗಿತ್ತು.

ಇನ್ನು, ಜನಪರ ಆಡಳಿತ ನೀಡಿ ದೇಶದ ಹಲವು ಮುಖ್ಯಮಂತ್ರಿಗಳು ಸುದ್ದಿಯಾಗಿದ್ದರೆ, ಸಾರ್ವಜನಿಕ ಟೀಕೆಗೆ ಗುರಿಯಾದವರ ಸಿಎಂಗಳ ಪಟ್ಟಿಗೂ ಬರವಿಲ್ಲ.

ಈ ವರ್ಷದಲ್ಲಿ ನಡೆದ ಪ್ರಮುಖವಾದ ರಾಜಕೀಯ ವಿದ್ಯಮಾನವೆಂದರೆ ಲೋಕಸಭಾ ಚುನಾವಣೆ ಮತ್ತು ಹಲವು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗಳು.

ಅಸೆಂಬ್ಲಿ ಚುನಾವಣೆ ನಡೆದ ಹೆಚ್ಚಿನ ರಾಜ್ಯಗಳಲ್ಲಿ NDA ಮೈತ್ರಿಕೂಟ ಜಯಭೇರಿ ಬಾರಿಸಿ ಯುಪಿಎ ಒಕ್ಕೂಟ ಮುಖಭಂಗ ಅನುಭವಿಸಿತ್ತು. ರಾಜ್ಯ ವಿಭಜನೆಯ ನಂತರ ಸೀಮಾಂಧ್ರ ಮತ್ತು ತೆಲಂಗಾಣದಲ್ಲೂ ವಿಧಾನಸಭಾ ಚುನಾವಣೆ ನಡೆಯಿತು.

ಈ ವರ್ಷ ಹಲವಾರು ಕಾರಣಗಳಿಂದ ಸುದ್ದಿಮಾಡಿದ ನಮ್ಮ ದೇಶದ ಹನ್ನೆರಡು ಮುಖ್ಯಮಂತ್ರಿಗಳ ಪಟ್ಟಿಯನ್ನು, ಸ್ಲೈಡಿನಲ್ಲಿ ಮುಂದವರಿಸಲಾಗಿದೆ...

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ದೆಹಲಿ ಗದ್ದುಗೆ ಏರಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದಾ ಸುದ್ದಿಯಲ್ಲಿರುವವರ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಹೆಸರು. ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಸಿಎಂ ಆದ ಕೇಜ್ರಿ, ಐವತ್ತು ದಿನ ಕೂಡಾ ಅಧಿಕಾರದಲ್ಲಿರಲಿಲ್ಲ. ಜನ ಲೋಕಪಾಲ್ ಮಸೂದೆ ಅಸೆಂಬ್ಲಿಯಲ್ಲಿ ಆಂಗೀಕಾರ ಮಾಡಿಸುವಲ್ಲಿ ವಿಫಲವಾದ ಬೆನ್ನಲ್ಲೇ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಕೇಜ್ರಿವಾಲ್ ಅವರ ಹಲವು ರಾಜಕೀಯ ನಡೆಗಳು ನಗೆಪಟಾಲಿಗೆ ಗುರಿಯಾಗಿತ್ತು.

ಜೆ ಜಯಲಲಿತಾ

ಜೆ ಜಯಲಲಿತಾ

ಹದಿನೆಂಟು ವರ್ಷದ ಹಿಂದಿನ ಆಸ್ತಿ ಪ್ರಕರಣದ ತೀರ್ಪು ಬಂದ ನಂತರ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಮ್ಮ ಕ್ಯಾಂಟೀನ್, ಅಮ್ಮ ಫಾರ್ಮಸಿ ಮುಂತಾದ ಜನಪರ ಕೆಲಸದಿಂದ ಭಾರೀ ಜನಪ್ರಿಯಗೊಂಡಿದ್ದ ಜಯಾ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ದಿನ ಕಳೆಯ ಬೇಕಾಯಿತು.

ನಿತೀಶ್ ಕುಮಾರ್

ನಿತೀಶ್ ಕುಮಾರ್

NDA ಮೈತ್ರಿಕೂಟದ ಖಾಯಂ ಸದಸ್ಯರಾಗಿದ್ದ ಜೆಡಿಯು ಪ್ರಧಾನಿ ಮೋದಿ ಜೊತೆಗಿನ ವಿರಸದಿಂದ ಕೂಟದಿಂದ ಹೊರಬಂತು. ಬಿಜೆಪಿ ಬೆಂಬಲವಿಲ್ಲದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಯು ನಿರೀಕ್ಷಿತ ಫಲಿತಾಂಶ ಗಳಿಸುವಲ್ಲಿ ವಿಫಲವಾಯಿತು. ದೇಶದ ಉತ್ತಮ ಆಡಳಿತಗಾರರಲ್ಲೊಬ್ಬರೆಂದೇ ಹೆಸರಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಸೋಲಿನ ಹೊಣೆಹೊತ್ತು ಮೇ 17ರಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು.

ನರೇಂದ್ರ ಮೋದಿ

ನರೇಂದ್ರ ಮೋದಿ

ಪ್ರಧಾನಿ ಹುದ್ದೆಗೆ ಏರಿದ ನಂತರ ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಎಂ ಆಗಲಿ ಪಿಎಂ ಆಗಲಿ ಸದಾ ಸುದ್ದಿಯಲ್ಲಿರುವ ಮೋದಿ ಮೇ 22ಕ್ಕೆ ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜಿತನ್ ರಾಮ್ ಮಾಂಜಿ

ಜಿತನ್ ರಾಮ್ ಮಾಂಜಿ

ನಿತೀಶ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಜಿತನ್ ರಾಮ್ ಮಾಂಜಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಬೇಡವಾದ ವಿಷಯದಿಂದಲೇ ಸುದ್ದಿಯಲ್ಲಿರುವ ಮಾಂಜಿ, ತನ್ನ ಮಗನ ಸೆಕ್ಸ್ ಹಗರಣವನ್ನು ಸಮರ್ಥಿಸಿಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದರು.

ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್

ನೂತನ ತೆಲಂಗಾಣ ರಾಜ್ಯದ ಉದಯದಲ್ಲಿ ಮಹತ್ವದ ಪಾತ್ರವಹಿಸಿದ್ದ ಕೆಸಿಆರ್ 2014ರಲ್ಲಿ ಸುದ್ದಿ ಮಾಡಿದ ಮತ್ತೊಬ್ಬ ಮುಖ್ಯಮಂತ್ರಿಗಳಲೊಬ್ಬರು. ಹಿಟ್ಲರ್ ಗಿಂತ ಕಡೆಯಾಗ ಬಲ್ಲೆ ಎಂದು ಮಾಧ್ಯಮದವರಿಗೆ ಎಚ್ಚರಿಕೆ ನೀಡುವ ಮೂಲಕ ಕೆಸಿಆರ್ ಟೀಕೆಗೆ ಗುರಿಯಾಗಿದ್ದರು. ನೂತನವಾಗಿ ಉದಯವಾದ ರಾಜ್ಯದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಬರುವ ವರ್ಷದ ಆದಿಯಲ್ಲಿ 'ಚಂಡಿಕಾ ಹೋಮ'ಮಾಡುವ ನಿರ್ಧಾರಕ್ಕೆ ಕೆಸಿಆರ್ ಬಂದಿದ್ದಾರೆನ್ನುವ ಸುದ್ದಿಯಿದೆ.

ಓ ಪನ್ನೀರ್ ಸೆಲ್ವಂ

ಓ ಪನ್ನೀರ್ ಸೆಲ್ವಂ

ಜಯಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರ ಪರಮಾಪ್ತ ಪನ್ನೀರ್ ಸೆಲ್ವಂ ಆಯ್ಕೆಯಾದರು, ಇವರು ಸುದ್ದಿಯಾಗಿದ್ದು ಜಯಾ ಮೇಲಿನ ಅಪ್ರತಿಮ ನಿಷ್ಟೆಯಿಂದಾಗಿ. ಧಾರಾಕಾರವಾಗಿ ಕಣ್ಣೀರು ಸುರಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದ ಪನ್ನೀರ್, ಇಂದಿಗೂ ಸಿಎಂ ಕುರ್ಚಿಯಲ್ಲಿ ಆಸೀನರಾಗದೇ ಅಧಿಕಾರ ನಡೆಸುತ್ತಿರುವುದು ತಮಿಳರ ವ್ಯಕ್ತಿಪೂಜೆಗೆ ಕೊಡಬಹುದಾದಂತಹ ಉದಾಹರಣೆ.

ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು

ತೆಲುಗುದೇಶಂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಏಕಮೇವ ಕೀರ್ತಿ ಚಂದ್ರಬಾಬು ನಾಯ್ಡು ಅವರದ್ದು. ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಕೀರ್ತಿ ಇವರದ್ದು. ವಿಶಾಖಪಟ್ಟಣಂನಲ್ಲಿ ನೈಸರ್ಗಿಕ ವಿಕೋಪ ತೋರಿದಾಗ ನಾಯ್ಡು ಸ್ಪಂದಿಸಿದ ರೀತಿ ಪ್ರಶಂಸೆಗೆ ಒಳಗಾಗಿತ್ತು. ಮೂಲಭೂತ ಸೌಕರ್ಯಗಳು ಸರಿಯಾದ ಹಾದಿಗೆ ಬರುವ ತನಕ ಬಸ್ಸಿನಲ್ಲೇ ಸಿಎಂ ಕಚೇರಿ ನಿರ್ವಹಿಸಿ ನಾಯ್ಡು, ಮತದಾರರು ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಸ್ತುನಿಷ್ಟ ಪ್ರಯತ್ನ ಮಾಡಿದ್ದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಮತ್ತು ಜನವಿರೋಧ ಹೇಳಿಕೆಯ ಮೂಲಕ ಹಾಲಿ ವರ್ಷದಲ್ಲಿ ಚಾಲ್ತಿಯಲ್ಲಿದ್ದರು. ಅತ್ಯಾಚಾರ ಪ್ರಕರಣಗಳು ವಿಪರೀತ ಮಟ್ಟಕ್ಕೆ ಹೋಗಿದ್ದಾಗ ನಿಮಗೆ ಅತ್ಯಾಚಾರ ಬಿಟ್ಟರೆ ಬೇರೇನೂ ಸುದ್ದಿಯಿಲ್ವಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿ ಸುದ್ದಿಯಾದರು. ಸಭೆಯಲ್ಲಿ ಸಿದ್ರಾಮಣ್ಣ ನಿದ್ದೆಗೆ ಶರಣಾಗುತ್ತಿದ್ದದ್ದು ಪಕ್ಷ ಮತ್ತು ಸರಕಾರವನ್ನು ಮುಜಗರಕ್ಕೀಡು ಮಾಡಿತ್ತು.

ಮನೋಹರ್ ಪಾರಿಕ್ಕರ್

ಮನೋಹರ್ ಪಾರಿಕ್ಕರ್

ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್
ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ರಕ್ಷಣಾ ಸಚಿವರಾದರು. ಮೋದಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಪಾರಿಕ್ಕರ್, ತನ್ನ ಜನಪರ ಕೆಲಸದಿಂದ ಗೋವಾದಲ್ಲಿ ಜನಮನ್ನಣೆ ಗಳಿಸಿದ್ದರು. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಪಾರಿಕ್ಕರ್, ಜನರಿಗೆ ತೀರಾ ಹತ್ತಿರವಾಗಿದ್ದರು.

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸಿಎಂ ಆದ ಮೇಲೆ ಪ್ರತೀ ವಾರಕ್ಕೊಮ್ಮೆಯಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ ಎನ್ನುತ್ತದೆ ಅಂಕಿಅಂಶ. ಬುಡೌನ್ ಜಿಲ್ಲೆಯಲ್ಲಿ ಇಬ್ಬರು ಹದಿಹರೆಯದ ಹೆಣ್ಣು ಮಕ್ಕಳನ್ನು ಪೈಶಾಚಿಕವಾಗಿ ಅತ್ಯಾಚಾರಗೈದು ನೇಣಿಗೇರಿಸಿದ ಪ್ರಕರಣ, ಈ ಸಂಬಂಧ ಅಖಿಲೇಶ್ ಸರಕಾರ ನಡೆದುಕೊಂಡ ರೀತಿ ತೀವ್ರ ಟೀಕೆಗೆ ಗುರಿಯಾಗಿತ್ತು.

ದೇವೇಂದ್ರ ಫಡ್ನವೀಸ್

ದೇವೇಂದ್ರ ಫಡ್ನವೀಸ್

ನಾಗಪುರದ ಮೇಯರ್ ಆಗಿದ್ದ ಕಟ್ಟಾ RSS ಅನುಯಾಯಿಯಾಗಿರುವ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಮೂಲಕ ಜನಪ್ರಿಯರಾದರು. ಅಸೆಂಬ್ಲಿಯಲ್ಲಿ ಬಹುಮತ ಸಾಬೀತು ಪಡಿಸಿದ ನಂತರ ಗೋಹತ್ಯೆಯನ್ನು ನಿಷೇಧಗೊಳಿಸುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದರು.

English summary
The year 2014 was a significant one for a number of politicians, or more specifically, a number of chief minister politicians, for both reasons good and bad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X