ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋ ಲೈಸನ್ಸ್ 5 ಸಾವಿರ ದಂಡ, ತುರ್ತು ವಾಹನಕ್ಕೆ ಜಾಗ ಬಿಡದಿರೆ 10 ಸಾವಿರ

ಸಂಚಾರ ನಿಯಮಗಳನ್ನು ಪಾಲಿಸದೆ ಇರುವವರಿಗೆ ಭಾರೀ ದಂಡ ಕಾದಿದೆ. ಮೋಟಾರು ವಾಹನ ಕಾಯ್ದೆ ಮಸೂದೆಗೆ ತಿದ್ದುಪಡಿ ತಂದಿದ್ದು, ಏನೇನು ಬದಲಾವಣೆ ಮಾಡಲಾಗಿದೆ ಎಂಬ ವಿವರಗಳಿಗೆ ಈ ವರದಿ ಓದಿ

|
Google Oneindia Kannada News

ನವದೆಹಲಿ, ಏಪ್ರಿಲ್ 17: ರಸ್ತೆ ಪ್ರಯಾಣದ ಸುರಕ್ಷತೆಗೆ ಒತ್ತು ಕೊಡಬೇಕು ಎಂದು ಮೋಟಾರು ವಾಹನ ತಿದ್ದುಪಡಿ ಮಸೂದೆ 2016ರಲ್ಲಿ ರಸ್ತೆ ನಿಯಮಗಳನ್ನು ಮುರಿಯುವವರಿಗೆ ಭಾರೀ ದಂಡ ವಿಧಿಸಲಾಗುತ್ತಿದೆ. ಕಳೆದ ವಾರ ಲೋಕಸಬೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ.

* ವಿಶೇಷ ಚೇತನರಿಗೆ ಹೊಂದವಂತೆ ವಾಹನವನ್ನು ರೂಪಿಸುವ ಪ್ರಸ್ತಾವ ಮಾಡಲಾಗಿದೆ

Driving sans licence to cost more; Aadhaar must to get it

* ಮೋಟಾರು ವಾಹನ ಅಪಘಾತ ನಿಧಿಗೆ ಅವಕಾಶ ಕಲ್ಪಿಸಿದ್ದು, ಭಾರತದ ಎಲ್ಲ ರಸ್ತೆ ಪ್ರಯಾಣಿಕರಿಗೆ ಕೆಲವು ನಿರ್ದಿಷ್ಟ ಅಪಘಾತಗಳಿಗೆ ವಿಮೆ ಅನ್ವಯಿಸುತ್ತದೆ.[ಹೊಸ ನಿಯಮ, ಮದ್ಯಪಾನ ಮಾಡಿ ಅಪಘಾತವಾದರೆ ವಿಮೆ ಸಿಗಲ್ಲ]

* ಈ ಕಾಯ್ದೆಯಡಿ ಒಂದು ಪಟ್ಟಿಗಿಂತ ಹೆಚ್ಚು ಹತ್ತು ಪಟ್ಟಿನವರೆಗೆ ರಾಜ್ಯ ಸರಕಾರ ದಂಡ ಪ್ರಮಾಣವನ್ನು ಹೆಚ್ಚಿಸಬಹುದು.

* ಅಪಘಾತಕ್ಕೆ ಕಾರಣವಾಗುವಂತೆ ರಸ್ತೆ ನಿರ್ಮಿಸಿದ್ದರೆ ಅದಕ್ಕೆ ಗುತ್ತಿಗೆದಾರರು, ಕನ್ಸಲ್ಟೆಂಟ್ಸ್ ಮತ್ತು ಸಂಬಂಧಪಟ್ಟರೇ ಹೊಣೆಯಾಗುತ್ತಾರೆ.

* ರಸ್ತೆ ಅಪಘಾತದ ಸಂದರ್ಭದಲ್ಲಿ ಆರು ತಿಂಗಳ ಮಿತಿ ವಿಧಿಸಿದ್ದು, ಅಷ್ಟರಲ್ಲಿ ಪರಿಹಾರಧನದ ವಿತರಣೆ ವಿಲೇವಾರಿಯಾಗಬೇಕು.

ಇನ್ನು ದಂಡದ ವಿಚಾರವಾಗಿ ಕೆಲವು ಮಹತ್ತರ ಬದಲಾವಣೆಯಾಗಿದ್ದು, ಹೊಸ ದರದ ಮಾಹಿತಿ ಈ ರೀತಿ ಇದೆ. ಹಳೇ ಮೊತ್ತವನ್ನು ಆವರಣದಲ್ಲಿ ಕೊಡಲಾಗಿದೆ.
ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದರೆ 5,000 (500)
ಅತಿ ವೇಗದ ಚಾಲನೆಗೆ 1,000 (400)
ಅಪಾಯಕಾರಿ ಚಾಲನೆಗೆ 5 ಸಾವಿರದವರೆಗೆ (1,000)
ಸೀಟ್ ಬೆಲ್ಟ್ ಹಾಕದಿದ್ದಲ್ಲಿ 1,000 (100)
ದ್ವಿಚಕ್ರ ವಾಹನದಲ್ಲಿ ಮಿತಿಗಿಂತ ಹೆಚ್ಚಿನ ಭಾರ, ಜನರಿದ್ದರೆ 2,000 (100)
ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ 10,000
ಇನ್ಷೂರೆನ್ಸ್ ಇಲ್ಲದೆ ಚಾಲನೆಗೆ 2,000 (1,000)

English summary
The Motor Vehicles Amendment Bill 2016 has raised fines significantly to make roads safer. The Bill passed by the Lok Sabha last week makes Aadhaar mandatory for driving licences and vehicle registration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X